ಲಕ್ಷ್ಮೀ ನಿವಾಸದ ಜಯಂತ್ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ
ತನ್ನ ವಿಭಿನ್ನ ಕಥೆಯ ಮೂಲಕ ಜನಪ್ರಿಯತೆ ಗಳಿಸಿದ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಜಾಹ್ನವಿಯನ್ನು ಮದುವೆಯಾಗಲು ಬಂದಿರುವ ಜಯಂತ್ ಪಾತ್ರ ಕೂಡ ಜನರನ್ನು ತುಂಬಾನೆ ಇಂಪ್ರೆಸ್ ಮಾಡಿದೆ. ಅವರ ನಿಜವಾದ ಹೆಸರೇನು ಗೊತ್ತಾ? ಬನ್ನಿ ಅವರ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa) ತನ್ನ ವಿಭಿನ್ನ ಕಥೆಯ ಮೂಲಕ ಜನಪ್ರಿಯತೆ ಗಳಿಸಿದೆ, ಅದರ ಜೊತೆಗೆ ಧಾರಾವಾಹಿಯಲ್ಲಿ ಸದ್ಯ ಜಾಹ್ನವಿಯನ್ನು ಮದುವೆಯಾಗಲು ಬಂದಿರುವ ಜಯಂತ್ ಪಾತ್ರ ಕೂಡ ಜನರನ್ನು ತುಂಬಾನೆ ಇಂಪ್ರೆಸ್ ಮಾಡಿದೆ.
ಕಾಲೇಜಿನಲ್ಲಿ ಜಾಹ್ನವಿಯನ್ನು ನೋಡಿ ಇಂಪ್ರೆಸ್ ಆಗಿ, ಅದೇ ದಿನ ಆಕೆಯ ಮನೆಗೆ ಹೋಗಿ, ಹೆಣ್ಣು ಕೇಳಿ, ಎಂಗ್ನೇಜ್ ಮೆಂಟ್ ಕೂಡ ಮಾಡ್ಕೊಂಡು, ತುಂಬಾ ವಿನಯದಿಂದ ಎಲ್ಲರ ಜೊತೆ ಹೊಂದಿಕೊಳ್ಳುವ ಜಯಂತ್ ಬೇರೆ ಯಾರೂ ಅಲ್ಲ ಅವರು ದೀಪಕ್ ಸುಬ್ರಹ್ಮಣ್ಯ (Deepak Subramanya).
ತನ್ನ ಅತಿ ವಿನಯದ ನಡವಳಿಕೆಯಿಂದ ಮನೆಯವರನ್ನು ಇಂಪ್ರೆಸ್ ಮಾಡಿರುವ, ಜೊತೆಗೆ ಜಾಹ್ನವಿಯ ಆಸೆಗಳನ್ನೆಲ್ಲಾ ತಿಳಿದು ಅದನ್ನು ಈಡೆರಿಸುವ ಮೂಲಕ ಆಕೆಯ ಮನಸ್ಸನ್ನು ಗೆದ್ದಿರುವ, ಜೊತೆಗೆ ಈ ಅತಿ ವಿನಯವೇ ಮುಂದೊಂದು ದಿನ ಮುಳ್ಳಾಗುವುದೇ, ಇವನೇ ವಿಲನ್ ಆಗುವನೇ ಎನ್ನುವ ಸಣ್ಣ ಡೌಟ್ ವೀಕ್ಷಕರಲ್ಲಿ ಮೂಡಿಸಿದ ಪಾತ್ರ ಜಯಂತ್ ನದ್ದು.
ಅನಾಥನಾಗಿ ಬೆಳೆದಿರುವ, ಊರಿನ ಅತಿ ದೊಡ್ಡ ಬ್ಯುಸಿನೆಸ್ ಮೆನ್, ಜೊತೆಗೆ ಸಣ್ಣ ವಯಸ್ಸಿನಲ್ಲಿ ಬಹಳ ಸಾಧನೆ ಮಾಡಿದರೂ ವಿನಯವಂತಿಕೆಯನ್ನು ಉಳಿಸಿಕೊಂಡಿರುವ ಹಾಗೂ ಮುದ್ದು ಪೆದ್ದು ಜಾಹ್ನವಿಗೆ ಜೋಡಿಯಾಗಿರುವ ಜಯಂತ್ ತಮ್ಮ ಪಾತ್ರದ ಮೂಲಕವೇ ಜನರ ಮನಸ್ಸನ್ನು ಗೆದ್ದಿದ್ದಾರೆ.
ಜಯಂತ್ ಪಾತ್ರದಲ್ಲಿ ಅಭಿನಯಿಸಿರುವ ದೀಪಕ್ ಸುಬ್ರಹ್ಮಣ್ಯ ಈ ಹಿಂದೆ ದಾಸ ಪುರಂದರ (Dasa Purandara) ಧಾರಾವಾಹಿಯಲ್ಲಿ ಶ್ರೀನಿವಾಸ ನಾಯ್ಕ್ ಆಗಿ ಅದ್ಭುತವಾಗಿ ಅಭಿನಯಿಸಿದ್ದರು. ಅವರ ಪಾತ್ರವನ್ನು ಜನರು ಸಹ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇಲ್ಲಿಗೆ ಲಕ್ಷ್ಮೀ ನಿವಾಸದ ಜಯಂತ್ ಆಗಿ ಮಿಂಚುತ್ತಿದ್ದಾರೆ ದೀಪಕ್.
ಸಾಫ್ಟ್ ವೇರ್ ಇಂಜಿನಿಯರ್ ಆಗಿ (software engineer) ದುಡಿಯುತ್ತಿದ್ದ ದೀಪಕ್ ಗೆ ಬಾಲ್ಯದಲ್ಲೇ ನಟನೆಯ ಮೇಲೆ ಎಲ್ಲಿಲ್ಲದ ಆಸಕ್ತಿ, ಹಾಗಾಗಿ ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ ಈ ನಟ. ನೂರಾರು ನಾಟಕಗಳಲ್ಲೂ ನಟಿಸಿದ್ದಾರೆ.
ಪರ್ಫಾಮೆನ್ಸ್ ಇನ್ ರಿಯಾಲಿಸಂ (performance in realism) ಎನ್ನುವ ಕೋರ್ಸ್ ಅನ್ನು ಕಳೆದ ಕೆಲವು ವರ್ಷಗಳಿಂದ ಕಲಿಸುತ್ತಿರುವ ದೀಪಕ್, ಅದರ ಜೊತೆ ಜೊತೆಗೆ ಸೀರಿಯಲ್ ಸಿನಿಮಾಗಳಲ್ಲೂ ಅಭಿನಯಿಸುವ ಮೂಲಕ ಬ್ಯುಸಿಯಾಗಿದ್ದಾರೆ.
ದೀಪಕ್ ಸುಬ್ರಹ್ಮಣ್ಯ ಇದುವರೆಗೆ ಕನ್ನಡದಲ್ಲಿ ಸಾಲಗಾರ, ಜಾರುಬಂಡೆ, ಸುದ್ದಿ, ಆಯಾನ, ಸಾರಾಂಶ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾರಾಂಶ (Saramsha) ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ದೀಪಕ್ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.