ಟ್ರೋಲ್ ಪೇಜ್ ಪೂರ್ತಿ ಇವರದ್ದೇ ಗುಲ್ಲು…. ಕಾರ್ತಿಕ್ ಮಹೇಶ್ ರಿಯಲ್ ಗರ್ಲ್ ಫ್ರೆಂಡ್ ಇವರಂತೆ!
ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ನರ್ ಆದ್ಮೇಲೆ ಅವರ ಪರ್ಸನಲ್ ಲೈಫ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜಸ್ ಗಳಿಗೆ ಇಂಟ್ರೆಸ್ಟ್ ಜಾಸ್ತಿ ಆಗಿದೆ. ಈವಾಗ ಕಾರ್ತಿಕ್ ಜೊತೆ ಮತ್ತೊಬ್ಬ ನಟಿಯ ಹೆಸರು ಕೇಳಿ ಬರ್ತಿದೆ.
ಬಿಗ್ ಬಾಸ್ ಸೀಸನ್ 10 (Bigg Boss Season 10) ರಲ್ಲಿ ಸಖತ್ ಸದ್ದು ಮಾಡಿ, ಸೀಸನ್ ಗೆದ್ದು ಬಂದ ನಟ ಕಾರ್ತಿಕ್ ಮಹೇಶ್. ಮೊದ ಮೊದಲು ಸಂಗೀತ ಜೊತೆಗೆ ಕ್ಲೋಸ್ ಆಗಿದ್ದ ಕಾರ್ತಿಕ್ ಗೆ ಅವರನ್ನೇ ಜೋಡಿ ಮಾಡಿ ಸೋಶಿಯಲ್ ಮೀಡಿಯಾ ಕೊಂಡಾಡಿದ್ದು ನಾವೆ ಕಣ್ಣಾರೆ ಕಂಡಿದ್ದೀವಿ.
ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ (Karthik Mahesh) ಹೊರ ಬಂದ ಮೇಲಂತೂ ಕಾರ್ತಿಕ್ ಪರ್ಸನಲ್ ಲೈಫ್ ಮೇಲೆ ಈ ಟ್ರೋಲ್ ಪೇಜಸ್ ಗಳಿಗೆ ತುಂಬಾನೆ ಆಸಕ್ತಿ ಉಂಟಾಗಿದೆ. ಕಾರ್ತಿಕ್ ಯಾವ ನಟಿ ಜೊತೆ ಸಲುಗೆ ಇಂದ ಇದ್ರೂ, ಅವರಿಬ್ಬರ ಪ್ರೀತಿ, ಪ್ರೇಮ, ಮದುವೆವರೆಗೂ ಸುದ್ದಿ ಹರಿದಾಡುತ್ತಿತ್ತು.
ಈಗಾಗಲೇ ನಮೃತಾ ಗೌಡ, ತನಿಷಾ ಕುಪ್ಪಂಡ, ಅಷ್ಟೇ ಯಾಕೆ ಅನುಪಮಾ ಗೌಡ ಜೊತೆಗೂ ಕಾರ್ತಿಕ್ ಹೆಸರು ಕೇಳಿ ಬಂದಿತ್ತು. ಅನುಪಮಾ ಮತ್ತು ಕಾರ್ತಿಕ್, ನಮೃತಾ ಗೌಡ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದೆ ತಡ, ಕಾರ್ತಿಕ್ ಅವರ ಸೀಕ್ರೆಟ್ ಗರ್ಲ್ ಫ್ರೆಂಡ್ ಅನುಪಮಾ, ಅವರನ್ನೇ ಕಾರ್ತಿಕ್ ಮದುವೆಯಾಗಲಿದ್ದಾರೆ ಅಂತೆಲ್ಲಾ ಸುದ್ದಿ ಹರಡಿಸಿದ್ದವು ಸೋಶಿಯಲ್ ಮೀಡಿಯಾ. ಈ ಕುರಿತು ಕಾರ್ತಿಕ್, ಅನುಪಮಾ ಇಬ್ಬರೂ ಗರಂ ಆಗಿ, ಇನ್ನೆಷ್ಟು ಜನರ ಜೊತೆ ಮದ್ವೆ ಮಾಡಿಸ್ತೀರಿ ಅಂತಾನು ಕೇಳಿದ್ರು.
ಇದೀಗ ಮತ್ತೆ ಟ್ರೋಲ್ ಪೇಜ್ ಗಳಲ್ಲಿ ಮತ್ತೊಬ್ಬ ನಟಿಯ ಜೊತೆಗೆ ಕಾರ್ತಿಕ್ ಮಹೇಶ್ ಹೆಸರು ಕೇಳಿ ಬರುತ್ತಿದೆ. ಆಕೆಯ ಹೆಸರು ರಾಶಿಕಾ ಶೆಟ್ಟಿ (Rashika Shetty). ಇವರೇ ಕಾರ್ತಿಕ್ ಅವರ ನಿಜವಾದ ಗರ್ಲ್ ಫ್ರೆಂಡ್, ಆದರೆ ಇಬ್ಬರೂ ಇಲ್ಲಿವರೆಗೆ ಕ್ಲಾರಿಟಿ ಕೊಟ್ಟಿಲ್ಲ ಎಂದೆಲ್ಲಾ ಬರೆದು ಇಬ್ಬರ ಫೋಟೊ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಷ್ಟಕ್ಕೂ ಈ ರಾಶಿಕಾ ಶೆಟ್ಟಿ ಯಾರು? ಇವರು ಕೂಡ ಮೈಸೂರಿನವರೇ. ಈ ಹಿಂದೆ ಇಬ್ಬರೂ ಒಬ್ಬರನ್ನೊಬ್ಬರು ಇನ್ ಸ್ಟ್ರಾಗ್ರಾಂ ನಲ್ಲಿ ಫಾಲೋ ಕೂಡ ಮಾಡ್ತಿದ್ರು, ತುಂಬಾ ಹಿಂದಿನಿಂದಲೂ ಇವರೇ ಗರ್ಲ್ ಫ್ರೆಂಡ್ ಅನ್ನೋ ಸುದ್ದಿ ಕೂಡ ಹರಿದಾಡುತ್ತಿತ್ತು, ಇವರು ಕಾರ್ತಿಕ್ ಬಿಗ್ ಬಾಸ್ ವಿನ್ ಆಗ್ಬೇಕು ಅಂತಾ ಇನ್ ಸ್ಟಾದಲ್ಲಿ ಸ್ಟೋರಿ ಕೂಡ ಹಾಕಿದ್ರು. ಆದ್ರೆ ಇಬ್ಬರಿಗೂ ಲವ್ವಲ್ಲಿ ಇದೀರಾ ಎನ್ನುವ ಪ್ರಶ್ನೆಗಳು ಪದೇ ಪದೇ ಕೇಳಿದ ಬಳಿಕ ಈವಾಗ ಫಾಲೋ ಮಾಡ್ತಿರೋದು ಕಾಣಿಸ್ತಿಲ್ಲ.
ಇನ್ನು ರಾಶಿಕ ಶೆಟ್ಟಿ, ನಟಿ ಮತ್ತು ಮಾಡೆಲ್ (Actress and Model) ಕೂಡ ಹೌದು. ಇವರು ಕನ್ನಡದಲ್ಲಿ ಈ ಹಿಂದೆ ದೊರೆಸಾನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಜೊತೆಗೆ ತೆಲುಕು ಸೀರಿಯಲ್ ಗಳಲ್ಲೂ ನಟಿಸಿದ್ದರು. ಅಷ್ಟೇ ಅಲ್ಲ ಹಲವಾರು ಸೀರೆ, ಜ್ಯುವೆಲ್ಲರಿಗಳ ಜಾಹೀರಾತುಗಳಲ್ಲಿ ಸಹ ನಟಿ ಕಾಣಿಸಿಕೊಂಡಿದ್ದರು.
ಸೆಲೆಬ್ರಿಟಿಗಳು ಟ್ರೋಲ್ ಆಗೋದು, ತಮ್ಮ ಪರ್ಸನಲ್ ಲೈಫ್ ಬಗ್ಗೆ ಗಾಳಿ ಸುದ್ದಿಗಳು ಹರಿದಾಡೋದು ಹೊಸದೇನಲ್ಲ. ಕಾರ್ತಿಕ್ ಗರ್ಲ್ ಫ್ರೆಂಡ್ ಇವರೇನಾ ಅನ್ನೋದು ಗೊತ್ತಿಲ್ಲ, ಆದ್ರೆ ಕಾರ್ತಿಕ್ ಗೆ ಗರ್ಲ್ ಫ್ರೆಂಡ್ ಇರೋ ಬಗ್ಗೆ ಬಿಗ್ ಬಾಸ್ ನಲ್ಲಿ ಭಾರಿ ಸುದ್ದಿಯಾಗಿತ್ತು. ಅವರ ಗರ್ಲ್ ಫ್ರೆಂಡ್ ಯಾರು ಅನ್ನೋದನ್ನ ಅವರೇ ರಿವೀಲ್ ಮಾಡ್ಬೇಕು ಅಷ್ಟೇ.