MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಶಂಕರ್ ನಾಗ್ ಜೊತೆ ಡುಯೆಟ್ ಹಾಡಿದ ನಟಿ…. ರಾಮಾಯಣದ ಸೀತೆ ಈವಾಗ ಏನು ಮಾಡ್ತಿದ್ದಾರೆ?

ಶಂಕರ್ ನಾಗ್ ಜೊತೆ ಡುಯೆಟ್ ಹಾಡಿದ ನಟಿ…. ರಾಮಾಯಣದ ಸೀತೆ ಈವಾಗ ಏನು ಮಾಡ್ತಿದ್ದಾರೆ?

ದೀಪಿಕಾ ಚಿಖಲಿಯಾ ಹೆಸರು ಕೇಳಿದ್ರೇ ಯಾರಪ್ಪಾ ಇವರು ಎಂದು ನೀವು ಅಂದುಕೊಳ್ಳಬಹುದು. ಆದ್ರೆ ರಾಮಯಣದ ಸೀತೆ ಪಾತ್ರಧಾರಿ ಎಂದ ಕೂಡ್ಲೇ ಗೊತ್ತಾಗುತ್ತೆ. ರಾಮಯಣ ಮುಗಿದು 30 ವರ್ಷಗಳೇ ಕಳೆದರೂ ಇಂದಿಗೂ ಸೀತಾಮಾತೆಯಂತೆ ಜನ ದೀಪಿಕಾರನ್ನು ಕಾಣುತ್ತಾರೆ. ಈ ನಟಿ ಈವಾಗ ಏನು ಮಾಡ್ತಿದ್ದಾರೆ?  

2 Min read
Author : Pavna Das
Published : Feb 07 2023, 02:57 PM IST
Share this Photo Gallery
  • FB
  • TW
  • Linkdin
  • Whatsapp
17

ಇವರು ಒಂದಾನೊಂದು ಕಾಲದ ಜನಪ್ರಿಯ ಬಾಲಿವುಡ್ ನಟಿ. ಕನ್ನಡದಲ್ಲೂ ನಟಿಸಿದ್ದಾರೆ. ಅದರಲ್ಲೂ ನಮ್ಮ ಲೆಜೆಂಡರಿ ನಟ ಶಂಕರ್ ನಾಗ್ ಜೊತೆ ಲಾಲಿ, ಲಾಲಿ ಜೋ, ನನ್ನ ತಾಳಿಯ ಬಂಗಾರ ಜೋ ಎಂದು ಹಾಡುತ್ತಾ ಕನ್ನಡಿಗರ ಮನಸ್ಸು ಗೆದ್ದಿದ್ದರು ಈ ನಟಿ. ಇವರು ಯಾರಂದ್ರೆ ದೀಪಿಕಾ ಚಿಖಲಿಯಾ (Deepika Chikhlia).

27

ಕನ್ನಡದಲ್ಲಿ ಶಂಕರ್ ನಾಗ್ ಜೊತೆ ಹೊಸ ಜೀವನದ ಚಿತ್ರದಲ್ಲಿ ನಟಿಸಿ, ನಂತರ ರೆಬಲ್ ಸ್ಟಾರ್ ಅಂಬರೀಶ್ ಜೊತೆ ಇಂದ್ರಜೀತ್ ಚಿತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ ಈ ಬಾಲಿವುಡ್ ನಟಿಯನ್ನು (Bollywood actress) ದೇಶಾದ್ಯಂತ ಜನರು ಇಂದಿಗೂ ನೆನಪಿಟ್ಟುಕೊಂಡಿರುವುದು ರಮಾನಂದ ಸಾಗರ್ ಅವರ ರಾಮಾಯಣದ ಸೀತೆಯಾಗಿ. 

37

ಹೌದು, ರಾಮಯಣದಲ್ಲಿ ಸೀತೆಯಾಗಿ ನಟಿಸಿದ ಬಳಿಕ ಇವರನ್ನು ಭೂಲೋಕದಲ್ಲಿನ ದೇವತೆಯಂತೆ ಕಾಣುತ್ತಿದ್ದರು, ಹಿಂದಿನ ಕಾಲದ ಜನರು. ಆವಾಗ ಹೆಚ್ಚಾಗಿ ಟಿವಿ ಇರಲಿಲ್ಲ, ಇಂಟರ್ನೆಟ್ ಅಂತೂ ಇಲ್ವೇ ಇಲ್ಲ. ಮುಗ್ದ ಜನತೆ ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ , ಲಕ್ಷ್ಮಣನಾಗಿದ್ದ ಸುನಿಲ್​ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್​ ರನ್ನು ನಿಜವಾಗಿಯೂ ದೇವರೆಂದು ಕಾಣುತ್ತಿದ್ದರು.

47

ಇನ್ನು ರಾಜ್ ಕಿರಣ್, ರಾಜೇಶ್ ಖನ್ನಾ ಜೊತೆ ನಟಿಸಿರುವ ಈ ನಟಿ ಹಲವಾರು ಹಿಂದಿ ಸೀರಿಯಲ್ (Hindi TV serial), ಮಲಯಾಲಂ, ಬೆಂಗಾಲಿ, ಗುಜರಾತಿ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜಕೀಯದಲ್ಲೂ ಈ ನಟಿ ಸಕ್ರಿಯರಾಗಿದ್ದರು. ಸದ್ಯ ಈ ನಟಿ ಸೀರಿಯಲ್ ಗಳಲ್ಲಿ, ಮೂವಿಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ (social media) ಮಿಂಚುತ್ತಿದ್ದಾರೆ, ಜೊತೆಗೆ ಸುದ್ದಿಗಳಿಗೆ ಆಹಾರವೂ ಆಗ್ತಿದ್ದಾರೆ. 

57

ಸೀತೆ ಪಾತ್ರ ಮಾಡಿದ ಬಳಿಕ, ಜನರು ಯಾವಾಗ್ಲೂ ಈ ನಟಿ ಸೀತೆಯಂತೆ ಸಾಂಪ್ರದಾಯಿಕವಾಗಿ ಕಾಣೋದನ್ನೆ ಇಷ್ಟಪಡ್ತಿದ್ದಾರೆ. ಅದೇ ಈ ನಟಿಯ ಸೋಶಿಯಲ್ ಲೈಫ್ ಗೆ ತೊಡಕಾಗುತ್ತಿದೆ. ನಟಿ ಉಡುಗೆಯಲ್ಲಿ ಸ್ವಲ್ಪ ಬದಲಾದರೂ ಅಥವಾ ಪತಿ ಹೇಮಂತ್ ಟೋಪಿವಾಲ ಜೊತೆ ಸ್ವಲ್ಪ ರೊಮ್ಯಾಂಟಿಕ್ ಫೋಟೋ (romantic photo) ಹಾಕಿದರೂ ಜನ ಸೀತೆ ಮಾತೆ ಈ ರೀತಿ ಮಾಡೊದನ್ನು ನಾವು ಇಷ್ಟಪಡಲ್ಲ ಅಂತಿದ್ದಾರೆ. 

67

ಸೋಷಿಯಲ್ ಮೀಡಿಯಾದಲ್ಲಿ ಸದಾ ಬ್ಯುಸಿಯಾಗಿರುವ ದೀಪಿಕಾ ತಮ್ಮ ಇತ್ತೀಚಿನ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಕ್ಕೆ ಹತ್ತಿರವಾಗುತ್ತಿದ್ದಾರೆ. ಆದರೆ ಇತ್ತೀಚಿಗೆ ಮೊಣಕಾಲಿಕ್ಕಿಂತಲೂ ಕೆಳಗೆ ಬರುವಂತಹ ಎಲ್ಲೂ ಅಸಭ್ಯವಾಗಿ ಕಾಣದಂತಹ ಒನ್ ಪೀಸ್ ಧರಿಸಿದ್ದಕ್ಕೆ ಟ್ರೋಲ್ ಗೆ ಒಳಗಾಗಿದ್ದರು. 
 

77

ಅದರ ಜೊತೆಗೆ ಪತಿ ಜೊತೆ ರೊಮ್ಯಾಂಟಿಕ್ ಫೋಟೊ ಶೇರ್ ಮಾಡಿದಾಗ್ಲೂ ಸಹ ಈ ನಟಿಗೆ ಟೀಕೆಗೆ ಒಳಗಾಗಿದ್ದರು. ಸೀತಾ ಮಾತೆ ಇದನ್ನು ಮಾಡೋದು ಸರಿಯಲ್ಲ ಎಂದು ಜನ ಬುದ್ದಿ ಹೇಳಿದ್ದರು. ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್ ಬೇರೆ ಅನ್ನೋದನ್ನು ಜನ ಅರ್ಥ ಮಾಡ್ಕೋತಾರೋ ಇಲ್ವೋ ಗೊತ್ತಿಲ್ಲ.  ಆದರೆ ಎಲ್ಲಾ ಕಮೆಂಟ್ ಸಹಜವಾಗಿಯೇ ಸ್ವೀಕರಿಸಿ ನಟಿಯಂತೂ ಪ್ರತಿದಿನವೂ ಫೋಟೋ ಶೇರ್ ಮಾಡ್ತಾ, ತಮ್ಮ ಜಲಕ್ ತೋರಿಸ್ತಾನೆ ಇರ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?
Recommended image2
ಸೀರಿಯಲ್‌ನಲ್ಲಿ ದೂರ ಆದ್ರೂ, ರಿಯಲ್‌ ಆಗಿ ಎಂಗೇಜ್‌ ಆದ Amruthadhaare ರಾಣವ್‌ ಗೌಡ, ರಾಧಾ ಭಗವತಿ!
Recommended image3
ಶೂಟಿಂಗ್‌ ವೇಳೆ ವಿದ್ಯಾಗೆ ನಿಜಕ್ಕೂ ತಾಳಿ ಕಟ್ಟಲು ಹೋಗೋದಾ ಭದ್ರ? Muddu Sose ಶಾಕ್‌! ವಿಡಿಯೋ ವೈರಲ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved