ಲವ್ ಫೆಲ್ಯೂರ್ ನೋವಿನಲ್ಲಿ ರಕ್ಷಿತಾ ಶೆಟ್ಟಿ ! ಇವನು ಗೆಳೆಯನಲ್ಲ...
ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಲವ್ ಫೆಲ್ಯೂರ್ ನೋವಿನಲ್ಲಿದ್ದಾರೆ. ಗಿಲ್ಲಿ ವಿಷ್ಯಕ್ಕೆ ರಕ್ಷಿತಾ ಅತ್ತಿದ್ರು ಎಂಬ ರಿಯಲ್ ವಿಷ್ಯದ ಬಗ್ಗೆ ನಾವು ಹೇಳ್ತಿಲ್ಲ. ಮತ್ತೆ ಏನಾಯ್ತು ಅಂದ್ರಾ?

ಲವ್ ಫೆಲ್ಯೂರ್ ನೋವಿನಲ್ಲಿ ರಕ್ಷಿತಾ ಶೆಟ್ಟಿ
ಮಜಾ ಭಾರತ ಖ್ಯಾತಿಯ ರಾಘು ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಪ್ರೀತಿ ಶುರುವಾಗುತ್ತೆ ಅಂತ ಫ್ಯಾನ್ಸ್ ಕುತೂಹಲದಲ್ಲಿದ್ರು. ಆದ್ರೆ ಯಾಕೋ ಫ್ಯಾನ್ಸ್ ನಿರೀಕ್ಷೆ ಸುಳ್ಳಾಗ್ತಿದೆ. ಬಾಸ್ ರಾಘು , ರಕ್ಷಿತಾ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ರಸ್ತೆಯಲ್ಲಿ ರಕ್ಷಿತಾ ಬಿಟ್ಟು ಹೋಗಿದ್ದಾರೆ.
ಇವನು ಗೆಳೆಯನಲ್ಲ..
ರಕ್ಷಿತಾ ಹಾಗೂ ರಾಘವೇಂದ್ರ ಸೇರಿ ಒಸಿಡಿ ಹೆಸರಿನ ಸ್ಮಾಲ್ ಡ್ರಾಮಾ ವಿಡಿಯೋ ಮಾಡ್ತಿದ್ದಾರೆ. ಒಸಿಡಿ ಈಗ ಎಂಟನೇ ಎಪಿಸೋಡ್ ಗೆ ಬಂದು ನಿಂತಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲ್ಸ ಗಿಟ್ಟಿಸಿಕೊಂಡು ಬಾಸ್ ಸಹಾಯ ಪಡೆದು ಟಾರ್ಗೆಟ್ ರೀಚ್ ಮಾಡಿದ್ದ ರಕ್ಷಿತಾ ಬಾಸ್ ಗೆ ಹತ್ತಿರವಾಗಿದ್ರು. ಇಬ್ಬರ ಮಧ್ಯೆ ಸ್ನೇಹ ಚಿಗುರಿತ್ತು. ಅದನ್ನೇ ಪ್ರೀತಿ ಅಂದ್ಕೊಂಡು ರಕ್ಷಿತಾ ತಪ್ಪು ಮಾಡಿದಂತಿದೆ.
ಪ್ರಫೋಸ್ ಮಾಡಿ ಯಡವಟ್ಟು
ಬಾಸ್ ರಾಘು, ರಕ್ಷಿತಾ ಅವರನ್ನು ಪಾರ್ಟಿಗೆ ಕರೆದಿದ್ರು. ಐಸ್ ಕ್ರೀಂ ಅಂದ್ರೆ ಪ್ರಾಣ ಬಿಡುವ ರಕ್ಷಿತಾ, ರಾಘು ಜೊತೆ ಐಸ್ ಕ್ರೀಮ್ ತಿಂತಾ ಮನಸ್ಸಿನ ಮಾತು ಹಂಚಿಕೊಂಡಿದ್ದಾರೆ. ಆದ್ರೆ ರಕ್ಷಿತಾ ಮಾಡಿದ ಪ್ರಫೋಸ್ ರಾಘುಗೆ ಇಷ್ಟವಾಗ್ಲಿಲ್ಲ. ನಿನ್ ಕೆಲ್ಸ ನೋಡ್ಕೋ ಅಂತ ಹೇಳಿ ರಾಘು, ರಕ್ಷಿತಾ ಪ್ರೀತಿ ತ್ಯಜಿಸಿ ಹೋಗಿದ್ದಾರೆ. ಈ ನೋವಿನಲ್ಲಿದ್ದಾರೆ ರಕ್ಷಿತಾ.
ಬೆಸ್ಟ್ ಜೋಡಿ ಪಟ್ಟ
ರಕ್ಷಿತಾ ಹಾಗೂ ರಾಘು ಈ ಸ್ಕಿಟ್ ಗೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಎಪಿಸೋಡ್ ತುಂಬಾ ಚಿಕ್ಕದಾಯ್ತು, ಸ್ವಲ್ಪ ಹೆಚ್ಚಿರಲಿ, ನಿಮ್ಮನ್ನು ನೋಡೋಕೆ ಖುಷಿ ಆಗುತ್ತೆ ಎನ್ನುವ ಕಮೆಂಟ್ ಬರ್ತಿದೆ. ಅಷ್ಟೇ ಅಲ್ಲ, ಸ್ಕಿಟ್ ಮಾಡ್ತಾ ಮಾಡ್ತಾ ಇಬ್ಬರೂ ನಿಜವಾಗ್ಲೂ ಪ್ರೀತಿಗೆ ಬೀಳ್ತಾರಾ ಎನ್ನುವ ಅನುಮಾನವನ್ನೂ ಫ್ಯಾನ್ಸ್ ವ್ಯಕ್ತಪಡಿಸಿದ್ದಾರೆ. ಜೋಡಿ ಚೆನ್ನಾಗಿದೆ, ಮ್ಯಾಚ್ ಆಗ್ತಿದೆ ಅಂತ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

