ಸಿಹಿಯಿಂದ, ಲಚ್ಚಿವರೆಗೆ; ಕನ್ನಡ ಕಿರುತೆರೆಯ ಭರವಸೆಯ ಬಾಲ ನಟರು ಇವರೇ ನೋಡಿ
ರಿತು ಸಿಂಗ್ ರಿಂದ ಸಾಂಘವಿ ಕಾಂತೇಶ್ ವರೆಗೆ ಕನ್ನಡ ಕಿರುತೆರೆಯ ಅತ್ಯಂತ ಭರವಸೆಯ ಬಾಲ ನಟರು ಯಾರು ಅನ್ನೋದನ್ನು ನೋಡೋಣ. ತಮ್ಮ ಪಾತ್ರಗಳ ಮೂಲಕ ಜನರ ಮನಸ್ಸು ಗೆದ್ದಿರುವ ಪುಟಾಣಿ ನಟರು ಇವರೇ ನೋಡಿ…
ಕನ್ನಡ ಕಿರುತೆರೆಯು ಅದ್ಭುತ ಯುವ ನಟನಟಿಯರಿಂದ ತುಂಬಿದೆ ನಿಜಾ, ಆದರೆ ಇದರ ಜೊತೆಗೆ ಪುಟಾಣಿ ಬಾಲ ಕಲಾವಿದರು (Child Artist) ಸಹ ಇತ್ತೀಚಿನ ದಿನಗಳಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪುಟಾಣಿ ಮಕ್ಕಳು ಪ್ರೇಕ್ಷಕರ ಹೃದಯವನ್ನು ಗೆದ್ದಿರುವುದು ಮಾತ್ರವಲ್ಲದೆ ಕಿರುತೆರೆಯ ಸ್ಟಾರ್ ಆಗಿ ಕೂಡ ಪ್ರಸಿದ್ದಿ ಪಡೆದಿದ್ದಾರೆ.
ರಿತು ಸಿಂಗ್ (Ritu Singh): ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ನಟಿಸಿರುವ ರಿತು ಸಿಂಗ್, ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅದ್ಭುತ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದಾರೆ. ಅವರ ಅಭಿನಯವು, ರಾಜ್ಯದ ಮನೆಮನೆಯಲ್ಲೂ ಮಾತನಾಡುವಂತಾಗಿದೆ ಮತ್ತು ವೀಕ್ಷಕರ ಫೇವರಿಟ್ ನಟಿಯೂ ಆಗಿದ್ದಾರೆ.
ಅನುರಾಗ್ (Anurag): ಭೂಮಿಗೆ ಬಂದ ಭಗವಂತದಲ್ಲಿ ಸ್ಕಂದನ ಪಾತ್ರವನ್ನು ನಿರ್ವಹಿಸಿದ ಅನುರಾಗ್ ಸಹ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ, ತಮ್ಮ ಉತ್ಸಾಹಭರಿತ ಅಭಿನಯದಿಂದ ಪರದೆಗೆ ಶಕ್ತಿ ಮತ್ತು ಉತ್ಸಾಹವನ್ನು ತರುತ್ತಾರೆ. ಇವರ ಪಾತ್ರ ಮತ್ತು ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಧೀರಜ್ (Dheeraj): ಹೂ ಮಳೆ, ನನ್ನ ಸೂಪರ್ ಸ್ಟಾರ್ ಮತ್ತು ಸದ್ಯ ಪ್ರಸಾರವಾಗುತ್ತಿರುವ ನಡೆಯುತ್ತಿರುವ ಸೀತಾ ರಾಮ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಧೀರಜ್ ನೆಚ್ಚಿನ ಬಾಲನಟನಾಗಿ ಹೊರಹೊಮ್ಮಿದ್ದಾರೆ. ಈ ಪುಟ್ಟ ವಯಸ್ಸಿನಲ್ಲಿ ಅವರ ನಟನಾ ಕೌಶಲ್ಯ ನೋಡಿ ಪ್ರೇಕ್ಷಕರೂ ಇಷ್ಟಪಟ್ಟಿದ್ದಾರೆ.
ಸಾಂಗವಿ ಕಾಂತೇಶ್ (Sanghavi Kantesh): ನಮ್ಮ ಲಚ್ಚಿಯಲ್ಲಿ ಲಚ್ಚಿ ಪಾತ್ರವನ್ನು ನಿರ್ವಹಿಸುತ್ತಿರುವ ಸಾಂಘವಿ ತನ್ನ ಪ್ರೌಢ ಅಭಿನಯದಿಂದ ಸೆನ್ಸೇಶನ್ ಸೃಷ್ಟಿಸುತ್ತಿದ್ದಾರೆ. ಲಚ್ಚಿಯಾಗಿ, ಅವರು ಮುಗ್ಧಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ನಟನೆಯಿಂದ ಸಾಂಗವಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಶ್ರೀ ದಿಶಾ (Shree Disha): ನಮ್ಮ ಲಚ್ಚಿಯ ಮತ್ತೊಬ್ಬ ಬಾಲ ನಟಿ ಶ್ರೀ ದಿಶಾ, ರಿಯಾ ಪಾತ್ರವನ್ನು ತುಂಬಾನೆ ಸ್ಟೈಲಿಶ್ ಆಗಿ, ಜೊತೆಗೆ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಅವರ ತೆರೆಯ ಮೇಲಿನ ಪ್ರೆಸೆನ್ಸ್, ಮಾತನಾಡುವ ಸ್ಟೈಲ್, ಡೈಲಾಗ್ ಡೆಲಿವರಿ, ಹಾವಾಭಾವದಿಂದಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಜನ ಗುರುತಿಸುವಂತೆ ಮಾಡಿದೆ.
ನಿಹಾರ್ ಗೌಡ (Nihar Gowda): ಲಕ್ಷ್ಮಿ ಬಾರಮ್ಮನಲ್ಲಿ ತನ್ಮಯ್ ಅದಕ್ಕೂ ಹೆಚ್ಚಾಗಿ ಗುಂಡಣ್ಣ ಎಂದು ಕರೆಯಲ್ಪಡುವ ನಿಹಾರ್, ಅಮ್ಮನ್ನ ಮುದ್ದಿನ ಮಗನ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ತೆರೆಯ ಮೇಲಿನ ತಾಯಿ ಭಾಗ್ಯ ಮೇಲಿನ ಅವರ ಪ್ರೀತಿ, ಅವರ ನಟನೆ ತುಂಬಾನೆ ಅದ್ಭುತವಾಗಿ ಮೂಡಿ ಬಂದಿದೆ. ಜನರು ಕೂಡ ಅವರನ್ನು ಗುಂಡಣ್ಣ ಅಂತಾಲೇ ಪ್ರೀತಿಯಿಂದ ಕರೆಯುತ್ತಾರೆ.
ವಂಶಿಕಾ ಅಂಜನಿ ಕಶ್ಯಪ್ (Vamshika Anjani Kashyap): ಕನ್ನಡ ಕಿರುತೆರೆಯ "ಮಿಸ್ ಲಿಟಲ್ ಪಟಾಕಿ" ಎಂದು ಕರೆಯಲ್ಪಡುವ ವಂಶಿಕಾ ರಿಯಾಲಿಟಿ ಶೋ ನನ್ನಮ್ಮ ಸೂಪರ್ಸ್ಟಾರ್ ಸೀಸನ್ 1 ರಲ್ಲಿ ಭಾಗವಹಿಸುವ ಮೂಲಕ ಖ್ಯಾತಿಯನ್ನು ಗಳಿಸಿದರು, ಅಲ್ಲಿ ತಮ್ಮ ತಾಯಿ ಜೊತೆ ಭಾಗವಹಿಸಿದ್ದಲ್ಲದೆ ಟ್ರೋಫಿಯನ್ನು ಸಹ ಗೆದ್ದರು. ಅವರ ಪ್ರತಿಭೆ, ಮಾತು ಎಲ್ಲವೂ ಜನರಿಗೆ ಇಷ್ಟವಾಗಿತ್ತು.