ಸ್ಯನ್ಯಾಸತ್ವ ತೆಗೆದುಕೊಂಡ್ರಾ ಚೈತ್ರಾ ಕೊಟ್ಟೂರು? ಕೊಟ್ಟರು ಸ್ಪಷ್ಟನೆ!
ಬೆಂಗಳೂರು(ಜು. 22) ಬಿಗ್‍ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರು ತಾವು ಸನ್ಯಾಸತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್‍ಸ್ಟಾಗ್ರಾಂನಲ್ಲಿ ಓಶೋ ಧ್ಯಾನ ಮಂದಿರದಲ್ಲಿನ ಫೋಟೋ ಮತ್ತು ನೃತ್ಯ ಮಾಡಿದ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರಿಂದ ನಟಿ ಸನ್ಯಾಸ ಸ್ವೀಕರಿಸಿದ್ದಾರೆ ಎನ್ನಲಾಗಿತ್ತು.
ಓಶೋ ಸನ್ಯಾಸ ದೀಕ್ಷೆ ಅಂದ್ರೆ ಎಲ್ಲವನ್ನೂ ತ್ಯಜಿಸುವದಲ್ಲ. ಮಠವಂತೂ ಅಲ್ಲವೇ ಅಲ್ಲ.
ಎಲ್ಲದರೊಳಗೆ ಇದ್ದುಕೊಂಡು ಬದುಕನ್ನು ಹೆಚ್ಚು ಸಂತೋಷಮಯವಾಗಿ ಅರ್ಥಪೂರ್ಣವಾಗಿ ಬದುಕುವುದು ಎಂದು ಚೈತ್ರಾ ತಿಳಿಸಿದ್ದಾರೆ.
ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ.. ಎಂದು ಕ್ಯಾಪ್ಷನ್ ಬರೆದುಕೊಂಡಿದ್ದು ಹೆಸರು ಬದಲಾಯಿಸಿಕೊಂಡಿದ್ದಾರೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು.
ಧ್ಯಾನ ಮಂದಿರದಲ್ಲಿ ನೃತ್ಯ ಮಾಡುತ್ತಿರುವ ಪೋಟೊವನ್ನು ಶೇರ್ ಮಾಡಿಕೊಂಡಿದ್ದರು.
ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಚೈತ್ರಾ ತಾವು ಸನ್ಯಾಸಿನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಚೈತ್ರಾ ತಾವು ಸನ್ಯಾಸಿನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಚೈತ್ರಾ ತಾವು ಸನ್ಯಾಸಿನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.