ಅತ್ತೆಯ ಜೊತೆ ಮುದ್ದಿನ ಪೋಟೋ ಹಂಚಿಕೊಂಡ ನೇಹಾ ಗೌಡ, 'ಗೊಂಬೆ..' ಧರಿಸಿದ್ದ ಸೀರೆಯ ಬೆಲೆ ಇಷ್ಟೊಂದಾ?
ಲಕ್ಷ್ಮೀ ಬಾರಮ್ಮ, ಲಚ್ಚಿ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರುತೆರೆ ನಟಿ ನೇಹಾ ಗೌಡ, ಖುಷಿಯ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಲಕ್ಷ್ಮೀ ಬಾರಮ್ಮ, ಲಚ್ಚಿ ಸೀರಿಯಲ್‌ಗಳ ಮೂಲಕ ಕನ್ನಡದ ಟಿವಿ ಪ್ರೇಕ್ಷಕರಿಗೆ ಅತ್ಯಂತ ಹತ್ತಿರವಾಗಿರುವ ನಟಿ ನೇಹಾ ಗೌಡ ಖುಷಿಯಲ್ಲಿದ್ದಾರೆ.
ಅದಕ್ಕೆ ಕಾರಣ ಅವರು ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ನೇಹಾ ಗೌಡ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.
ಪತಿ ಚಂದನ್ ಗೌಡ ಅವರೊಂದಿಗೆ ಪುಟ್ಟ ವಿಡಿಯೋ ಮೂಲಕ ಅವರು ತಾವು ತಾಯಿಯಾಗುತ್ತಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದರು.
ಕೆಲ ದಿನಗಳ ಹಿಂದೆ ನೇಹಾ ಗೌಡ ತಮ್ಮ ಪತಿ ಚಂದನ್ ಗೌಡ ಹಾಗೂ ಅತ್ತೆಯ ಜೊತೆ ಬೆಂಗಳೂರಿನ ವಸಂತ ವಲ್ಲಭರಾಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಅವರ ಅತ್ತೆಯ ಜೊತೆ ತೆಗೆದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿರುವ ನೇಹಾಗೆ ಅವರ ಅತ್ತೆ ಹಾಗೂ ಪತಿ ಮುತ್ತಿಡುತ್ತಿರುವ ಚಿತ್ರವನ್ನು ಹೈಲೈಟ್ ಮಾಡಿದ್ದಾರೆ.
ಬೆಂಗಳೂರು ನಗರದ ದಕ್ಷಿಣದಲ್ಲಿರುವ ವಸಂತಪುರದಲ್ಲಿ ವಸಂತ ವಲ್ಲಭರಾಯ ದೇವಸ್ಥಾನವಿದೆ. ದೇವಸ್ಥಾನದಲ್ಲಿನ ಹ್ಯಾಪಿ ಫೇಸಸ್ ಎಂದು ಅವರು ಬರೆದುಕೊಂಡಿದ್ದಾರೆ.
ಹೆಚ್ಚಿನವರಿಗೆ ನೇಹಾ ಗೌಡ ಧರಿಸಿದ್ದ ಸೀರೆಯ ಮೇಲೆ ಕಣ್ಣುಬಿದ್ದಿದೆ. ಹೌಸ್ ಆಫ್ ಅನಕಾ ಅವರ ಸೀರೆ ಇದಾಗಿದ್ದು, 14 ಸಾವಿರ ರೂಪಾಯಿ ಬೆಲೆಬಾಳುತ್ತದೆ ಎಂದು ತಿಳಿಸಿದೆ.
2018ರಲ್ಲಿ ಚಂದನ್ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನೇಹಾಗೌಡ, ಮದುವೆಯಾದ 6 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದರು.
ಜೂನ್ 1 ರಂದು ತಾವು ಗರ್ಭಣಿ ಎಂದು ಘೋಷಣೆ ಮಾಡಿದ ಬಳಿಕ ನೇಹಾ ಗೌಡ ಆಕರ್ಷಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಪತಿ ಚಂದನ್ ಗೌಡ ಜೊತೆ ತೋಟವೊಂದರಲ್ಲಿ ನಿಂತುಕೊಂಡ ಚೆಂದದ ಫೋಟೋಗಳನ್ನು ನೇಹಾ ಗೌಡ ಹಂಚಿಕೊಂಡಿದ್ದರು. ಅವರ ಬೇಬಿ ಬಂಪ್ ಲುಕ್‌ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಶೇರ್ ಮಾಡಿಕೊಂಡ ಫೋಟೋದಲ್ಲಿ ನೇಹಾ ಗೌಡ ಬೇಬಿ ಬಂಪ್ ಕಾಣಿಸುತ್ತಿತ್ತು. ಈ ಸುಂದರವಾದ ಮತ್ತು ಆರಾಮದಾಯಕ ಸೀರೆಯನ್ನು ಕಳುಹಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದರು.
ಈಗ ಮತ್ತೊಮ್ಮೆ ಅಷ್ಟೇ ಆಕರ್ಷಕವಾದ ಸೀರೆಯೊಂದಿಗೆ ನೇಹಾ ಗೌಡ ಪೋಸ್ ನೀಡಿದ್ದಾರೆ. ಆದರೆ, ಇದು ಹಳೆಯ ಚಿತ್ರವೋ ಈಗಿನ ಚಿತ್ರವೋ ಎನ್ನುವುದನ್ನು ಅವರು ತಿಳಿಸಿಲ್ಲ.