ಬಿಳಿ ಬಣ್ಣದ Luxury ಕಾರು ಖರೀದಿಸಿದ ಯಶಸ್ವಿನಿ ಮಾಸ್ಟರ್ ಆನಂದ್!
ರಿಯಾಲಿಟಿ ಶೋ ಟ್ರೋಫಿ ಕೈ ಸೇರುತ್ತಿದ್ದಂತೆ ಹೊಸ ಕಾರು ಖರೀದಿಸಿದ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ.
ನನ್ನಮ್ಮ ಸೂಪರ್ ಸ್ಟಾರ್ (Nanamma Super Star) ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಯಶಸ್ವಿನಿ ಮಾಸ್ಟರ್ ಆನಂದ್ ಮತ್ತು ವಂಶಿಕಾ ಅಂಜನಿ ಕಶ್ಯಪ ಹೊಸ ಕಾರು ಖರೀದಿಸಿದ್ದಾರೆ.
ಹೊಸ ಕಾರು ಖರೀದಿಸಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಯಶಸ್ವಿನಿ. 'ನನ್ನ ಹೊಸ ಸಾರಥಿ. ನಿವೇದಿತಾ (Niveditha Gowda) ತುಂಬಾ ಖುಷಿ ಆಯ್ತು ಮಾ ನೀನು ಬಂದಿದ್ದು' ಎಂದು ಬರೆದುಕೊಂಡಿದ್ದಾರೆ.
'ನಿವೇದಿತಾ ಲವ್ ಯು ಬೇಬಿ. ನನ್ನ ಮಗಳು ಅಪ್ಪನ ಮಗಳು ಆಕೆ ಫುಲ್ ಹ್ಯಾಪಿ ಆಗಿದ್ದಾಳೆ. ಲವ್ ಯು ಬುಡಕ್ಕ' ಎಂದಿದ್ದಾರೆ ಯಶಸ್ವಿನಿ (Yashaswini MasterAnand)
ರಿಯಾಲಿಟಿ ಶೋ ನಂತರ ಅಮ್ಮ-ಮಗಳಿಬ್ಬರು ಸೆಲೆಬ್ರಿಟಿಗಳಾಗಿದ್ದಾರೆ, ಇನ್‌ಸ್ಟಾಗ್ರಾಂನಲ್ಲಿ (Instagram) 56.8 ಸಾವಿರ ಫಾಲೋವರ್ಸ್‌ನ ಪಡೆದುಕೊಂಡಿದ್ದಾರೆ.
ಸ್ಕೂಲಿಗೆ ಸೇರುವ ಮುನ್ನವೇ ವಂಶಿಕಾ ನನ್ನಮ್ಮ ರಿಯಾಲಿಟಿ ಶೋ ನಂತರ ಗಿಚಿ ಗಿಲಿಗಿಲಿಯಲ್ಲಿ (Gichi giligili) ಹಾಸ್ಯ ಮಾಡಲು ಸಜ್ಜಾಗಿದ್ದಾರೆ.
'ವಂಶಿಕಾ ಇರುವುದಕ್ಕೆ ಟಿಆರ್‌ಪಿ ಹೆಚ್ಚಿಗೆ ಬರುತ್ತಿದೆ ಹೀಗಾಗಿ ಪ್ರತಿಯೊಂದು ನ್ಯೂಸ್ ಚಾನೆಲ್‌ನಲ್ಲೂ ಆಕೆ ಸಂದರ್ಶನ ಮತ್ತು ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.