Zee Kutumba Awards : ಸೀತಾ -ರಾಮ, ಗೌತಮ್- ಭೂಮಿಕಾ ಜೋಡಿಗೆ ಸಿಕ್ತು ಬೆಸ್ಟ್, ಜನಪ್ರಿಯ ಜೋಡಿ ಪ್ರಶಸ್ತಿ
ಝೀ ವಾಹಿನಿಯ ಅತಿ ದೊಡ್ಡ ಹಬ್ಬವಾದ ಝೀ ಕುಟುಂಬ ಅವಾರ್ಡ್ಸ್ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಕೊನೆಯ ದಿನ ಯಾರಿಗೆಲ್ಲಾ ಪ್ರಶಸ್ತಿ ಬಂದಿದೆ ನೋಡೋಣ.
ಲಕ್ಷ್ಮೀ ಮತ್ತು ಶ್ರೀನಿವಾಸರ ತುಂಬು ಕುಟುಂಬದ ಕಥೆ ಹೇಳುವಂತಹ ಲಕ್ಷ್ಮೀ ನಿವಾಸ ಧಾರಾವಾಹಿಗೆ ಬೆಸ್ಟ್ ಧಾರಾವಾಹಿ ಪ್ರಶಸ್ತಿ ಲಭಿಸಿದೆ. ಈ ಸೀರಿಯಲ್ ಟಿಆರ್ಪಿ ಯಲ್ಲಿ ಟಾಪ್ 5 ನಲ್ಲಿ ಯಾವಾಗ್ಲೂ ಇರುವಂತಹ ಧಾರಾವಾಹಿ.
'ಬ್ರಹ್ಮಗಂಟು' ಧಾರಾವಾಹಿಯ ಚಿರಾಗ್ ಜೀ಼ ಸ್ಟೈಲ್ ಐಕಾನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬ್ಯುಸಿನೆಸ್ ಮ್ಯಾನ್ ಆಗಿರುವ ಚಿರಾಗ್, ತನ್ನ ಸಿಂಪಲ್ ಸ್ಟೈಲ್ ನಿಂದ ಮನ ಗೆದಿದ್ದಾರೆ.
Zee5 ಜನಪ್ರಿಯ ಜೋಡಿ ಪ್ರಶಸ್ತಿಯನ್ನು 'ಸೀತಾರಾಮ' ಧಾರಾವಾಹಿಯ ಸೀತಾ ಮತ್ತು ರಾಮ ಪಡೆದುಕೊಂಡಿದ್ದಾರೆ. ಈ ಜೋಡಿ ತಮ್ಮ ಕೆಮೆಸ್ಟ್ರಿ ಮೂಲಕ ಜನಮನ ಗೆದ್ದಿದ್ದಾರೆ.
'ಅಮೃತಧಾರೆ'ಯ ಗೌತಮ್-ಭೂಮಿಕಾ ಜೋಡಿ ಪ್ರಶಸ್ತಿಯನ್ನು ಗೆದ್ದಿದೆ. ತಮ್ಮ ಮುದ್ದಾದ ಪ್ರೇಮ ಮತ್ತು ಪ್ರಭುದ್ಧವಾದ ನಡವಳಿಕೆಯ ಮೂಲಕ ವೀಕ್ಷಕರ ಮನಸನ್ನು ಗೆದ್ದಿರುವ ಜೋಡಿ ಇದಾಗಿದೆ.
ಜೀ಼ ಕನ್ನಡದ ವರ್ಷದ ಭರವಸೆಯ ತಾರೆಯಾಗಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯ ಸುಬ್ಬು ಆಲಿಯಾ ಸುಬ್ರಹ್ಮಣ್ಯ ಹೊರಹೊಮ್ಮಿದ್ದಾರೆ. ಇವರ ಅಭಿನಯ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಬೆಸ್ಟ್ ಜಡ್ಜ್ ಪ್ಯಾನೆಲ್ ಪ್ರಶಸ್ತಿಯನ್ನು 'ಮಹಾನಟಿ' ಜಡ್ಜ್‌ಗಳಾದ ರಮೇಶ್ ಅರವಿಂದ್, ತರುಣ್ ಸುಧೀರ್, ಪ್ರೇಮಾ & ನಿಶ್ವಿಕಾ ನಾಯ್ಡು ಪಡೆದುಕೊಂಡರು. ನಿನ್ನೆ ಕಾರ್ಯಕ್ರಮಕ್ಕೆ ರಮೇಶ್ ಅವರು ಗೈರು ಹಾಜರಿದ್ದರು.
ಬೆಸ್ಟ್ ನಾಯಕ ನಟ ಪ್ರಶಸ್ತಿಯನ್ನು 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ತಮ್ಮದಾಗಿಸಿಕೊಂಡರು. ಸೈಕೋ ಪ್ರೇಮಿ ರೀತಿ ಆಡುವ ಜಯಂತ್ ಪಾತ್ರಕ್ಕೆ ಅಪಾರ ಅಭಿಮಾನಿ ಬಳಗವೇ ಇದೆ. ಇವರ ನಟನೆಗೆ ವೀಕ್ಷಕರು ಜೈ ಎಂದಿದ್ದಾರೆ.
'ಸೀತಾರಾಮ' ಧಾರಾವಾಹಿಯ ಮುದ್ದು ಸಿಹಿಗೆ ವರ್ಷದ ಜೀ಼ ಕಣ್ಮಣಿಯಾ ಪ್ರಶಸ್ತಿ ಲಭ್ಯವಾಗಿದೆ. ತಮ್ಮ ಮುದ್ದು ಮುದ್ದಾದ ಪಾತ್ರದ ಮೂಲಕವೇ ಸೀರಿಯಲ್ ಪ್ರಿಯರ ಫೇವರಿಟ್ ಆಗಿದ್ದಾರೆ ಸಿಹಿ.
ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ ಅವರು Zee5 ಜನಪ್ರಿಯ ನಾಯಕ ನಟ ಅವಾರ್ಡ್ ಪಡೆದರು. ಕಂಠಿಯ ಸ್ಟೈಲ್, ಲುಕ್, ಆಕ್ಷನ್, ರೊಮ್ಯಾನ್ಸ್ ಎಲ್ಲವನ್ನೂ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' Zee5 ಜನಪ್ರಿಯ ಧಾರಾವಾಹಿ ಪ್ರಶಸ್ತಿ ಪಡೆದಿದೆ. ಇದು ಟಿಆರ್ ಪಿಯಲ್ಲಿ ಯಾವಾಗ್ಲೂ ಮುಂದೆ ಇರುವಂತಹ ಧಾರಾವಾಹಿ ಆಗಿದೆ.
'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ ಜೀ಼ ಕನ್ನಡದ ಹೊಸ ಸೆನ್ಸೇಷನ್ ಆಗಿ ಹೊರ ಹೊಮ್ಮಿದ್ದಾರೆ. ಇದೇ ಮೊದಲ ಬಾರಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ ಸಹ ತಮ್ಮ ಅದ್ಭುತ ಅಭಿನಯ ಸ್ಟೈಲ್ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
'ಅಣ್ಣಯ್ಯ' ಧಾರಾವಾಹಿಯ ಪಾರು ಅವರಿಗೂ ಸಹ ವರ್ಷದ ಜೀ಼ ಕಣ್ಮಣಿ ಪ್ರಶಸ್ತಿ ಲಭ್ಯವಾಗಿದೆ. ಈ ಹಿಂದೆ ಝೀ ಕನ್ನಡ ವಾಹಿನಿಯಲ್ಲಿ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಈ ವರ್ಷ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.