ಟ್ರೆಡಿಶನಲ್ to ಸ್ಟೈಲಿಶ್ ವಿಲನ್… ಹೇಗಿದ್ದೋರು ಹೇಗಾದ್ರೂ ನೋಡಿ ಲಕ್ಷ್ಮಿ ಬಾರಮ್ಮ ಸುಪ್ರೀತಾ!
ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಸುಪ್ರೀತಾ ಎಷ್ಟೊಂದು ಸ್ಟೈಲಿಶ್ ಅನ್ನೋದು ಗೊತ್ತಲ್ವಾ? ಆದರೆ ಈ ಹಿಂದೆ ಅವರು ಹೇಗಿದ್ರು ಗೊತ್ತಾ? ಹೇಗಿದ್ದೋರು ಹೇಗಿದ್ದಾರೆ ರಜನಿ ಇಲ್ಲಿದೆ ಸ್ಟೋರಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಸುಪ್ರೀತಾ ಪಾತ್ರದಲ್ಲಿ ಮಿಂಚುತ್ತಿರುವ ಸ್ಟೈಲಿಶ್ ನಟಿ ರಜನಿ ಪ್ರವೀಣ್. ಈ ಹಿಂದೆ ಲಕ್ಷ್ಮೀ ವಿರುದ್ಧ ಸಂಚು ರೂಪಿಸುತ್ತಿದ್ದ ಸುಪ್ರೀತಾ, ಇದೀಗ ಲಕ್ಷ್ಮಿಗೆ ಬೆಂಬಲವಾಗಿ ನಿಂತಿದ್ದಾರೆ.
ಸೀರಿಯಲ್‌ನಲ್ಲಿ ಸುಪ್ರೀತಾರ ಸ್ಟೈಲಿಶ್ ಲುಕ್ (stylish look) ನೋಡಿ ಮೆಚ್ಚಿಕೊಂಡವರೇ ಹೆಚ್ಚು. ಅದು ಸೀರೆಯಾಗಿರಲಿ, ಸ್ಕರ್ಟ್ ಆಗಿರಲಿ ಅಥವಾ ಡ್ರೆಸ್ ಆಗಿರಲಿ, ಎಲ್ಲವನ್ನೂ ಸ್ಟೈಲಿಶ್ ಆಗಿ ಕ್ಯಾರಿ ಮಾಡುವಲ್ಲಿ ಯಾವಾಗಲೂ ಮುಂದಿರುತ್ತಾರೆ.
ಈವಾಗ ಸ್ಟೈಲಿಶ್ ಆಗಿರುವ ರಜನಿ ಈ ಹಿಂದೆ ಸಿಂಪಲ್ ಟ್ರೆಡಿಶನಲ್ ಹುಡುಗಿಯಾಗಿದ್ದರು, ತಾವು ಹಿಂದಿದ್ದ ಫೋಟೊ ಮತ್ತು ಈಗಿನ ಫೋಟೋಗಳನ್ನು ಸೇರಿಸಿ, ನಟಿ ವಿಡಿಯೋ ಮಾಡಿ ಇತ್ತೀಚೆಗೆ ತಮ್ಮ ಸೋಶಿಯಲ್ ಮಿಡಿಯಾದಲ್ಲಿ (social media) ಶೇರ್ ಮಾಡಿದ್ದರು.
ಹಿಂದೆ ರಜನಿ ಹೊರಗಡೆ ಏನು ಆಗ್ತಿದೆ ಅಂತಾನೂ ಗೊತ್ತಿಲ್ಲದ ಮುಗ್ಧ ಹುಡುಗಿಯಾಗಿದ್ರಂತೆ, ಅವರಿಗೆ ಹೊರಗಡೆ ಹೋಗಿನೇ ಗೊತ್ತಿಲ್ಲ, ಯಾವಾಗಲೂ ಇನ್ನೊಬ್ಬರನ್ನೇ ಅವಲಂಬಿಸಿದ್ದ, ಯಾವುದು ಸರಿ, ಯಾವುದು ತಪ್ಪೆಂದು ತಿಳಿಯದ ಕನ್ ಫ್ಯೂಸಿಂಗ್ ಆಗಿರುವ ಹುಡುಗಿ ಇವರು.
ಆದರೆ ಈಗ ರಜನಿಯವರನ್ನು ನೋಡಿದ್ರೆ, ಅದಕ್ಕೆ ಸರಿ ವಿರುದ್ಧವಾಗಿರೋ ಆಗಿದೆ. ಆ ಟ್ರೆಡಿಶನಲ್, ಮುಗ್ಧ ಹುಡುಗಿ ಹೋಗಿ ಇದೀಗ ಸ್ಟೈಲಿಶ್, ಮಾಡರ್ನ್ (modern) ಆಗಿದ್ದಾರೆ ರಜನಿ. ಅಷ್ಟೇ ಅಲ್ಲ ಯಾವುದಕ್ಕೂ ಯಾರನ್ನೂ ಅವಲಂಬಿಸದ ಇಂಡಿಪೆಂಡೆಂಟ್ ಮಹಿಳೆ ಇವರು.
ಸದ್ಯ ಕಿರುತೆರೆಯಲ್ಲಿ ಸ್ಟೈಲಿಶ್ ವಿಲನ್ ಆಗಿ ಸದ್ದು ಮಾಡುತ್ತಿರುವ ರಜನಿ ಆಗಬೇಕೆಂದು ಬಯಸಿದ್ದು, ಸಾಫ್ಟ್ ವೇರ್ ಇಂಜಿನಿಯರ್ ಅಂತೆ, ಕೊನೆಗೆ ಟೀಚರ್ ಆಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದವರೀಗ ನಟನಾ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.
ಉಷಾ ಭಂಡಾರಿ ಅವರ ನಟನಾ ಶಾಲೆಯಲ್ಲಿ ಕಲಿತ ಇವರು, ರಂಗಭೂಮಿ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದವರು. ಇವರ ನಟನೆಯ ಮೊದಲ ಧಾರಾವಾಹಿ ಹರ ಹರ ಮಹಾದೇವ. ಇದಾದ ನಂತರ ರಂಗನಾಯಕಿ,ಮಹಾದೇವಿ, ರಾಜಿ, ಅಮ್ಮನ್ ಸೇರಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
ಇನ್ನೂ ಹರೆಯದ ಹುಡುಗಿಯಂತೆ ಮಿಂಚುವ ರಜನಿಗೆ ಈಗಾಗಲೇ ಮದುವೆ ಕೂಡ ಆಗಿದೆ. ರಜನಿ ಅವರಿಗೆ ನಟನೆಗೆ ಎಂಟ್ರಿ ನೀಡಲು ತುಂಬಾನೆ ಸಪೋರ್ಟ್ ನೀಡಿದ್ದು, ತಮ್ಮ ಎಲ್ಲಾ ಕೆಲಸದಲ್ಲೂ ಸಹಾಯ ಮಾಡಿದೋರು ಪತಿಯಂತೆ. ರಜನಿಗೆ ಮದುವೆಯಾಗಿ 10 ವರ್ಷವಾಗಿದ್ದು, 8 ವರ್ಷದ ಮಗ ಕೂಡ ಇದ್ದಾನೆ.