ಮತ್ತೆ ತಂದೆಯಾದ ಕಾಮಿಡಿಯನ್‌ ಕಪಿಲ್‌ ಶರ್ಮ, ಮಗು ಹೇಗಿದೆ?

First Published Feb 2, 2021, 4:44 PM IST

ಹಾಸ್ಯನಟ ಕಪಿಲ್ ಶರ್ಮಾ ಮತ್ತೊಮ್ಮೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ  ಪತ್ನಿ ಗಿನ್ನಿ ಚತ್ರತ್ ಫೆಬ್ರವರಿ 1 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಕಪಿಲ್ ಟ್ವಿಟರ್‌  ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಗಳು ಅನೈರಾ ಜನಿಸಿದ  ಒಂದು ವರ್ಷ ಒಂದು ತಿಂಗಳ ನಂತರ ಅವರ ಮನೆಯಲ್ಲಿ ಮತ್ತೊಂದು ಮಗುವಿನ ಆಗಮನವಾಗಿದೆ.  ಈ ಬಾರಿ ಅವರು ತಮ್ಮ ಹೆಂಡತಿಯೊಂದಿಗೆ ಸಮಯ ಕಳೆಯಲು ಶೋ  ಸಹ ನಿಲ್ಲಿಸಿದ್ದಾರೆ.