ಕನ್ನಡತಿ ಸೀರಿಯಲ್‌ನಲ್ಲಿ ಅಣ್ಣನನ್ನು ಕಾಡಿ, ಲವ್ ಸೆಟ್ ಮಾಡ್ಕೊಡ್ತಿರೋ ತಂಗಿ ಇವ್ರೇ ನೋಡಿ
ಕನ್ನಡತಿ ಧಾರವಾಹಿಯಲ್ಲಿ ಬರೋ ಸುಚಿ ಯಾರಿಗಿಷ್ಟ ಇಲ್ಲ ಹೇಳಿ..? ಅಣ್ಣನಿಗೆ ಒಂದು ಲವ್ ಸೆಟ್ ಮಾಡೋಕೆ ಕಷ್ಟ ಪಡೋದು ನೋಡಿದ್ರೆ ನಮ್ಗೂ ಇಂಥ ತಂಗಿ ಬೇಕಿತ್ತಪ್ಪಾ ಎಂದೆನಿಸಿರಬಹುದು. ಆ ಮುದ್ದು ತಂಗಿ ಇವ್ರೇ ನೋಡಿ
ಪ್ರಸಿದ್ಧ ಧಾರಾವಾಹಿ ಕನ್ನಡತಿಯಲ್ಲಿ ಅಣ್ಣನ ಕಾಡೋ ಮುದ್ದು ತಂಗಿ ಸುಚಿ ಗೊತ್ತಲ್ವಾ..?
ಹರ್ಷನನ್ನು ಕಾಡೋ, ಮದುವೆಯಾಗೋ ಅಂತ ಪೀಡಿಸೋ ತಂಗಿ ಸುಚಿತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಮೃತಾ ಮೂರ್ತಿ.
ಇವರೇ ನೋಡಿ ಹರ್ಷನನ್ನು ಕಾಡೋ, ದೊಡ್ಡಮ್ಮನನ್ನು ಹಚ್ಚಿಕೊಂಡಿರೋ ಸುಚಿ
ಅಮೃತಾ ಮೂರ್ತಿ ಮೂಲತಃ ಚಿಕ್ಕಮಗಳೂರಿನ ಹುಡುಗಿ
ಬಿಎಸ್‌ಸಿ ಫ್ಯಾಷನ್ ಮತ್ತು ಅಪಾರೆಲ್ ಡಿಸೈನಿಂಗ್ ಕಲಿತ ಚೆಲುವೆ
ಈಕೆ ಬಂದಿದ್ದು ಮಾತ್ರ ನಟನೆಗೆ
ಪ್ರತಿ ಧಾರವಾಹಿಯಲ್ಲೂ ಇಂತಹ ತಂಗಿ ಪಾತ್ರಗಳು ಪ್ರೇಕ್ಷಕರನ್ನು ಬೇಗನೆ ಸೆಳೆಯುತ್ತವೆ
ಇದಕ್ಕೆ ಕನ್ನಡತಿಯ ಸುಚಿ ಪಾತ್ರವೂ ಹೊರತಾಗಿಲ್ಲ
ಸುಚಿ ಪಾತ್ರಕ್ಕೆ ಸುಂದರವಾಗಿ ಜೀವ ತುಂಬಿದ್ದಾರೆ ಅಮೃತಾ
ಕನ್ನಡತಿಯಲ್ಲಿ ವರುಧಿನಿ, ಸುಚಿತ್ರಾ, ಸಾನಿಯಾ ಸೇರಿ ಹಲವು ಪಾತ್ರಗಳಲ್ಲಿ ಹೊಸ ಮುಖಗಳನ್ನು ಕಾಣಬಹುದು
ಆದರೂ ಈ ಸೀರಿಯಲ್‌ನಲ್ಲಿ ಪಾತ್ರಗಳ ಹೊಂದಾಣಿಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ
ಕನ್ನಡತಿ ಸೀರಿಯಲ್ ಮೂಲಕ ಪ್ರೇಕ್ಷಕರ ಮನಸು ಗೆದ್ದ ನಟಿ
ಬ್ಲೂ ಡ್ರೆಸ್‌ನಲ್ಲಿ ಅಮೃತಾ ಮೂರ್ತಿ
ಸೀರಿಯಲ್‌ನಲ್ಲಿ ಹರ್ಷನನ್ನು ಕಾಡುವ, ದೊಡ್ಡಮ್ಮನನ್ನು ಪ್ರೀತಿಸೋ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಈಕೆ