'ಕೃಷ್ಣ ಸುಂದರಿ' ಧಾರಾವಾಹಿ ನಟಿ ಐಶ್ವರ್ಯ ಮತ್ತು ಡಾ.ರೋಹಿತ್ ನಿಶ್ಚಿತಾರ್ಥ
ಕಿರುತೆರೆ ಜನಪ್ರಿಯ ನಟಿ ಐಶ್ವರ್ಯ ಮತ್ತು ಡಾ. ರೋಹಿತ್ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್...
'ಯಾರಿವಳು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ ಐಶ್ವರ್ಯ ಮತ್ತು ಖ್ಯಾತ ಡಾ. ರೋಹಿತ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಐಶ್ವರ್ಯ, ಇದೇ ಧಾರಾವಾಹಿ ಕನ್ನಡಕ್ಕೆ 'ಕೃಷ್ಣ ಸುಂದರಿ' ಎಂದು ಡಬ್ ಆಗುತ್ತಿದೆ.
ಕೃಷ್ಣ ಸುಂದರಿ ಧಾರಾವಾಹಿಯಲ್ಲಿ ಶ್ಯಾಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ವೀಕ್ಷಕರಿಗೆ ಈ ಪಾತ್ರ ತುಂಬಾನೇ ಹತ್ತಿರವಾಗಿದೆ.
ಫೆಬ್ರವರಿ 24ರಂದು ಐಶ್ವರ್ಯ ನಿಶ್ಚಿತಾರ್ಥ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ರೋಹಿತ್ ಮತ್ತು ಐಶ್ವರ್ಯ (Aishwarya) ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಐಶ್ವರ್ಯ ವರಿಸಿರುವ ಹುಡುಗ ರೋಹಿತ್ ಬೆಳಗಾವಿಯಲ್ಲಿ ಡಾಕ್ಟರ್ ಆಗಿದ್ದಾರೆ. 'ಹ್ಯಾಪಿಲಿ ಎಂಗೇಜ್ಡ್' ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.