ನೀನಾದೆ ನಾ ಸೀರಿಯಲ್ ನ ಬಬ್ಲಿ ಹುಡುಗಿ ಖುಷಿ, ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನೀನಾದೆ ನಾ ಸೀರಿಯಲ್ ನಾಯಕಿ ವೇದಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಖುಷಿ ಶಿವು ಕುರಿತು ತುಂಬಾನೆ ಇಂಟ್ರೆಸ್ಟಿಂಗ್ ಆಗಿರೋ ವಿಷ್ಯಗಳು ಇಲ್ಲಿವೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನೀನಾದೆ ನಾ ಸೀರಿಯಲ್ ಸದ್ಯ ಮನೆ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸುಂದರವಾದ ಫ್ಯಾಮಿಲಿ ಕಥೆಯನ್ನು ಹೊಂದಿರುವ ಈ ಸೀರಿಯಲ್ ಈಗಾಗಲೇ ಅಪಾರ ಅಭಿಮಾನಿಗಳನ್ನು ಹೊಂದಿದೆ. ನಾಯಕಿ ವೇದಾ ಅಂತೂ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ನೀನಾದೆ ನಾ ಖುಷಿಯ (Khushi Shivu) ಮೊದಲ ಸೀರಿಯಲ್ ಅಲ್ಲ, ಮೊದಲ ಬಾರಿಗೆ ಇವರು ಪಿಯುಸಿಯಲ್ಲಿದ್ದಾಗ ಪಾರು ಸೀರಿಯಲ್ ನಲ್ಲಿ ವಿಲನ್ ಆಗಿ ನಟಿಸಿದ್ದರು. ಅನನ್ಯಾ ಪಾತ್ರದ ಮೂಲಕ ನಟಿ ಸೈ ಎನಿಸಿಕೊಂಡಿದ್ದರು. ಇದಾದ ನಂತರ ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಗಂಗಾ ಆಗಿ ನಟಿಸಿದ್ದರು. ಆ ಪಾತ್ರ ಕೂಡ ಸಖತ್ ಫೇಮಸ್ ಆಗಿತ್ತು.
ನೀನಾದೆ ನಾ (Neenade Naa) ಸೀರಿಯಲ್ ನಲ್ಲಿ ಬಬ್ಲಿ ಹುಡುಗಿಯಾಗಿ, ಜೊತೆಗೆ ಕುಟುಂಬವನ್ನು ಮತ್ತು ತನ್ನ ಗಂಡನನ್ನು ಸರಿದಾರಿಗೆ ತರುವ ಜವಾಬ್ಧಾರಿಯುತ ಹೆಂಡತಿಯ ಪಾತ್ರದಲ್ಲಿ ನಟಿಸುತ್ತಿರುವ ಖುಷಿ ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ.
ಅದು ಸೀರಿಯಲ್ ಸೆಟ್ (serial set) ಆಗಿರಲಿ ಅಥವಾ ಮನೆಯೇ ಆಗಿರಲಿ ಎಲ್ಲೆಂದರಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡಿಯೇ ಮಾಡ್ತಾರಂತೆ. ಬೇಕಂತಲೇ ಮಾಡದೇ ಇದ್ದರೂ ಅದಾಗಿಯೇ ಏನಾದರೊಂದು ಎಡವಟ್ಟು ಆಗುತ್ತಲೇ ಇರುತ್ತಂತೆ. ಹಿಟ್ಲರ್ ಕಲ್ಯಾಣದ ಎಡವಟ್ಟು ಲೀಲಾ ಪಾತ್ರಕ್ಕೆ ಸರಿಯಾಗಿ ಹೊಂದುತ್ತೆ ನನ್ನ ಕ್ಯಾರೆಕ್ಟರ್ ಎನ್ನುತ್ತಾರೆ ಖುಷಿ.
ಶಾಲೆಯಲ್ಲಿರುವಾಗಿನಿಂದಲೇ ತುಂಬಾನೆ ತರ್ಲೆಯಾಗಿರುವ ಖುಷಿ ಶಿವು, ತಮ್ಮ ತುಂಟಾಟಗಳಿಂದ ಪ್ರಿನ್ಸಿಪಲ್ ಕೈಯಿಂದ ಬೈಸಿಕೊಂಡಿದ್ದೂ ಇದೆಯಂತೆ. ಜೊತೆಗೆ ತನ್ನ ಎಡವಟ್ಟಿನಿಂದಾಗಿ ಅಮ್ಮನ ಕೈಯಿಂದ ಬೈಗುಳ, ಹೊಡೆದ ಅದೆಷ್ಟು ಬಿದ್ದಿದೆಯೋ ಗೊತ್ತಿಲ್ಲ ಅನ್ನುತ್ತಾರೆ ಖುಷಿ.
ನಟನೆ ಅನ್ನೋದು ಖುಷಿಗೆ ಬಾಲ್ಯದಲ್ಲಿಯೇ ಒಲಿದ ಕಲೆ. ಇವರು ಯುಕೆಜಿಯಲ್ಲಿರೋವಾಗ್ಲೇ ಮಂಡ್ಯ ರಮೇಶ್ (Mandya Ramesh) ಅವರ ನಟನ ಕ್ಕೆ ಎಂಟ್ರಿ ಕೊಟ್ಟು, ಸುಮಾರು ಹತ್ತು ವರ್ಷಗಳಿಂದ ಮಂಡ್ಯ ರಮೇಶ್ ಸ್ಟೂಡೆಂಟ್ ಆಗಿದ್ದಾರಂತೆ. ಅಲ್ಲಿಂದಲೇ ಡ್ಯಾನ್ಸ್, ನಟನೆ ಎಲ್ಲವನ್ನೂ ಕಲಿತಿದ್ದಾರೆ ಖುಷಿ.
ಖುಷಿ ಶಿವು ಫ್ಯಾಮಿಲಿ ವಿಷ್ಯಕ್ಕೆ ಬಂದ್ರೆ ಇವರಿಗೆ ಅಕ್ಕ ಇದ್ದಾರೆ. ಇವ್ರ ತಾಯಿ ಮೊದಲು ಮಾಡೆಲಿಂಗ್ ಮಾಡ್ತಿದ್ರಂತೆ, ಮಿಸ್ ಕರ್ನಾಟಕ ಮೊದಲಾದ ಫ್ಯಾಷನ್ ಶೋಗಳಲ್ಲಿ ಭಾಗಿಯಾಗಿದ್ರಂತೆ. ಇನ್ನೂ ತಂದೆಗೆ ನಟನಾಗುವ ಕನಸಿತ್ತು, ಅದನ್ನ ಮಗಳ ಮೂಲಕ ಸಾಕಾರ ಮಾಡಿದ್ದಾರಂತೆ.
ಸದ್ಯ ಡಿಗ್ರಿ ಫೈನಲ್ ಇಯರ್ ಓದುತ್ತಿರುವ ಖುಷಿ ನಟನೆ ಮತ್ತು ವಿದ್ಯಾಭ್ಯಾಸ ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇವರಿಗೆ ಕಾಲೇಜಿನಿಂದಲೂ ಉತ್ತಮ ಬೆಂಬಲ ಸಿಗೋದರಿಂದ ನಟನೆ ಮಾಡೋದು ಕಷ್ಟವಾಗಿಲ್ಲವಂತೆ. ಮುಂದೆ ನಟನೆ, ಡೈರೆಕ್ಷನ್ ನಲ್ಲಿ ಮುಂದುವರೆಯುವ ಆಸೆಯಂತೆ.
ಸೋಶಿಯಲ್ ಮೀಡಿಯಾದಲ್ಲಿ (Social media) ಖುಷಿ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ವಿಡಿಯೋ, ರೀಲ್ಸ್ ಮಾಡುತ್ತಾ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಖುಷಿ ಮತ್ತು ದಿಲೀಪ್ ಶೆಟ್ಟಿ ಹಲವಾರು ರೀಲ್ಸ್ ಗಳಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದು, ಅಭಿಮಾನಿಗಳು ಸಹ ಮೆಚ್ಚಿಕೊಂಡಿದ್ದಾರೆ.