MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸೀತಾ-ರಾಮ ಮದ್ವೆಗೆ ಅಮೃತಧಾರೆ ಭೂಮಿ ಸೇರಿ ಎಲ್ಲರೂ ರೆಡಿಯಾಗಿದ್ದು ಹೀಗೆ! ಅಂಬಾನಿ ಮಗನ ಮದ್ವೆಗಿಂತಲೂ ಹೆಚ್ಚು!

ಸೀತಾ-ರಾಮ ಮದ್ವೆಗೆ ಅಮೃತಧಾರೆ ಭೂಮಿ ಸೇರಿ ಎಲ್ಲರೂ ರೆಡಿಯಾಗಿದ್ದು ಹೀಗೆ! ಅಂಬಾನಿ ಮಗನ ಮದ್ವೆಗಿಂತಲೂ ಹೆಚ್ಚು!

ಸೀತಾ ರಾಮರ ಮದುವೆ ತಯಾರಿ ಎಲ್ಲಾ ಅದ್ದೂರಿಯಾಗಿ ನಡೆಯುತ್ತಿದೆ. ಇವರಿಬ್ಬರ ಮದುವೆಗೆ ಕುಟುಂಬದ ಜನ ಹೇಗೆ ತಯಾರಿದ್ದಾರೆ ನೋಡಿ. ಮದ್ವೆಯಲ್ಲಿ ಶಾಂತಮ್ಮನ ವಠಾರದ ಜನರು ಸೇರಿ, ಅಮೃತಧಾರೆಯ ಭೂಮಿಕಾ ಸಹ ಗೆಸ್ಟ್ ಆಗಿ ಆಗಮಿಸಿರುವುದು ವಿಶೇಷ. ಸಿಹಿ ಅಂತೂ ಮುದ್ದಾಗಿ ಸೀರೆಯುಟ್ಟು, ಮೂಗುಬೊಟ್ಟು ತೊಟ್ಟು ತಯಾರಾಗಿದ್ದಾಳೆ.  

2 Min read
Pavna Das
Published : Jul 10 2024, 04:02 PM IST| Updated : Jul 10 2024, 04:30 PM IST
Share this Photo Gallery
  • FB
  • TW
  • Linkdin
  • Whatsapp
19

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿಯಲ್ಲಿ ಕಳೆದು ಒಂದು ತಿಂಗಳಿಂದ ಸೀತಾ ರಾಮರ ಮದುವೆ ತಯಾರಿ ನಡೆಯುತ್ತಿದೆ. ಅದ್ಧೂರಿ ಮದುವೆಯ ಸಡಗರವೇ ಮುಗಿಯುತ್ತಿಲ್ಲ. ಅದಕ್ಕೆ ನೆಟ್ಟಿಗರು ಅನಂತ್ ಅಂಬಾನಿ ಮಗನ ಮದ್ವೆಗಿಂತಲೂ ಅದ್ಧೂರಿ ಎಂದು ಕಾಲೆಳೆಯುತ್ತಿದ್ದಾರೆ.

29

ಸೀತಾ ಮನೆಯ ಶಾಸ್ತ್ರದಿಂದ ಹಿಡಿದು, ರಾಮನ ಮನೆಯ ಶಾಸ್ತ್ರದಿಂದ ಹಿಡಿದು, ಮೆಹೆಂದಿ ಶಾಸ್ತ್ರ, ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ತಾಳಿ ಶಾಸ್ತ್ರ ಇನ್ನೊಂದು ಮತ್ತೊಂದು ಎಂದು ಒಂದು ತಿಂಗಳಿಂದ ಶಾಸ್ತ್ರಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ. 
 

39

ಮದುವೆ ಈ ಎಪಿಸೋಡ್ ಗಳು (wedding episodes) ಕುತೂಹಲವನ್ನು ಹೆಚ್ಚಿಸುತ್ತಿದೆ. ಭಾರ್ಗವಿ ಹೆಣೆದ ಸುಳ್ಳು ಸೀತಾ ಬದುಕಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲಿದೆ. ಸೀತಾ ಮದುವೆ ಬೇಡವೇ ಬೇಡ ಎನ್ನುವ ನಿರ್ಧಾರವನ್ನೂ ಮಾಡ್ತಾಳೆ, ಆಮೇಲೆ ತಾತನ ಜೊತೆ ಮಾತನಾಡಿದ ಮೇಲೆ ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿದೆ. 
 

49

ಇನ್ನು ಸೀರಿಯಲ್‌ನ ಒಂದೊಂದು ಪ್ರೋಮೋ ನೋಡಿ ಜನರು ಕನ್‌ಫ್ಯೂಸ್ ಆಗಿದ್ದಾರೆ. ಒಂದು ಪ್ರೊಮೋದಲ್ಲಿ ಸೀತಾ ನನಗೆ ಈ ಮದುವೆ ಬೇಡವೇ ಬೇಡ ಎಂದು ಹೊರಡಲು ರೆಡಿಯಾಗುತ್ತಿದ್ದರೆ, ಮತ್ತೊಂದು ಪ್ರೊಮೋದಲ್ಲಿ ರಾಮ ಸೀತೆಗೆ ತಾಳಿ ಕಟ್ಟಿ ಸಿಹಿಯನ್ನು ತನ್ನ ಮಗಳು ಎನ್ನುವ ವಿಡಿಯೋ ಕೂಡ ಸದ್ದು ಮಾಡ್ತಿದೆ. 
 

59

ಸೀತಾ ರಾಮರ ಮದುವೆ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಮದುವೆಗೆ ಮನೆಮಂದಿ ರೆಡಿಯಾಗಿರೋ ರೀತಿ ಮಾತ್ರ ವೀಕ್ಷಕರಿಗೆ ತುಂಬಾನೆ ಹಿಡಿಸಿದೆ. ಒಬ್ಬರಿಗಿಂತ ಒಬ್ಬರು ಅಂದವಾಗಿ ಕಾಣಿಸ್ತಿದ್ದಾರೆ. ಅದರಲ್ಲಿಯೂ ಉತ್ತರ ಕರ್ನಾಟಕದ ಸೀರೆಯುಟ್ಟ ಹೆಂಗಳೆಯರು ಹಾಗೂ ಪೇಟಾ ತೊಟ್ಟ ಪುರುಷರ ಬಾಡಿ ಲ್ಯಾಂಗ್ಜೇಜ್ ನೋಡಲು ಎರಡು ಕಣ್ಣು ಸಾಲದು.
 

69

ದೇಸಾಯಿ ಕುಟುಂಬ ಆಗಿರೋದರಿಂದ ಥೇಟ್ ಹುಬ್ಬಳ್ಳಿ ಶೈಲಿಯಲ್ಲಿ ಸೀತಾ -ರಾಮರ ಮದುವೆಯಾಗುತ್ತಿದ್ದು, ಮದುವೆಗೆ ಪ್ರತಿಯೊಬ್ಬರೂ ಸಹ ಹುಬ್ಬಳ್ಳಿಯ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. 
 

79

ವಧು-ವರರಾದ ಸೀತಾ ರಾಮ, ಸಿಹಿ, ಭಾರ್ಗವಿ, ತಾತ, ಪ್ರಿಯಾ, ಅಶೋಕ್ ಸೇರಿ ಭೂಮಿಕಾ ಸಹ ಮದುವೆಗೆ ಅದ್ಭುತವಾಗಿ ರೆಡಿಯಾಗಿದ್ದಾರೆ. ನಿಮಗೆ ಯಾರ ಸ್ಟೈಲ್ ತುಂಬಾನೆ ಇಷ್ಟ ಆಯ್ತು ಹೇಳಿ. 
 

89

ಇನ್ನು ಸೀತಾ ರಾಮರ ಮದುವೆಯ ಉಡುಗೆ ವೀಕ್ಷಕರ ಮನಸ್ಸನ್ನು ಗೆದ್ದಿದ್ದು ಬಯಲು ಸೀಮೆ ಡ್ರೆಸ್ಸಿಂಗ್ ಸೆನ್ಸ್ ಪ್ರಪಂಚದಲ್ಲೇ ಮೋಸ್ಟ್ ಬ್ಯೂಟಿಫುಲ್, ಸೀತಾ ರಾಮರ ಉಡುಗೆ ಸಕ್ಕತಾಗಿದೆ, ಸತ್ಯ ಚಿಕ್ಕಪ್ಪ ಸಾಧನಾ ಚಿಕ್ಕಿ ಅಂತೂ ಸೂಪರ್ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. 
 

99

ಅಷ್ಟೇ ಅಲ್ಲ ಭೂಮಿಕಾ ಟೀಚರ್ ಸೀತಾ ಮದುವೆಗೆ ಸುಂದರವಾಗಿ ರೆಡಿಯಾಗಿರೋದು ನೋಡಿ ಕೂಡ ಜನ ಖುಷಿ ಪಟ್ಟಿದ್ದಾರೆ. ನಮ್ಮ ರಾಮನಿಗೆ ನಿಜವಾಗ್ಲೂ ಮದುವೆ ಕಳೆ ಬಂದಿದೆ ಅಂತಾನೂ ಹೇಳ್ತಿದ್ದಾರೆ ಜನ. ಒಟ್ನಲ್ಲಿ ಎಲ್ಲಾ ಜೋಡಿಗಳು ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮದುವೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved