- Home
- Entertainment
- TV Talk
- TV Actresses Transformation: ಈ ಟಾಪ್ ಸೀರಿಯಲ್ ನಟಿಯರು ಹೆಂಗಿದ್ದೋರು ಹೆಂಗಾದ್ರು ನೋಡಿ…
TV Actresses Transformation: ಈ ಟಾಪ್ ಸೀರಿಯಲ್ ನಟಿಯರು ಹೆಂಗಿದ್ದೋರು ಹೆಂಗಾದ್ರು ನೋಡಿ…
ಟಿವಿ ಜಗತ್ತಿನಲ್ಲಿ ತಮ್ಮ ಮ್ಯಾಜಿಕ್ ಅನ್ನು ಹರಡಿದ, ತಮ್ಮ ಸಿಂಪಲ್ ಲುಕ್ ನಿಂದ ಜನಮನ ಗೆದ್ದಿದ್ದ ನಟಿಯರು ಇದೀಗ ಸಂಪೂರ್ಣವಾಗಿ ಮಾಡರ್ನ್ ಆಗಿ ಬದಲಾಗಿದ್ದಾರೆ.. ದಿವ್ಯಾಂಕಾ ತ್ರಿಪಾಠಿಯಿಂದ ನಿಯಾ ಶರ್ಮಾ, ಮೌನಿ ರಾಯ್ ವರೆಗೆ ಯಾರೆಲ್ಲಾ, ಶಾಕಿಂಗ್ ಟ್ರಾನ್ಸ್ ಫಾರ್ಮೇಶನ್ ಹೊಂದಿದ್ದಾರೆ ನೋಡೋಣ.

ಗ್ಲಾಮರ್ ಈಗ ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ, ವಿಶೇಷವಾಗಿ ನೀವು ಮನರಂಜನಾ ಉದ್ಯಮಕ್ಕೆ ಸೇರಿದಾಗ ಎಲ್ಲವೂ ಫ್ಯಾಶನೇಬಲ್ ಆಗಿದೆ. ಈ ಟಿವಿ ನಟಿಯರು ತಮ್ಮ ಮೊದಲ ಸೀರಿಯಲ್ ಗಿಂತ ಈವಾಗ ಸಂಪೂರ್ಣವಾಗಿ ಭಿನ್ನವಾಗಿ ಕಾಣುತ್ತಿದ್ದಾರೆ. ಮೌನಿ ರಾಯ್ (Mouni Roy), ದಿಶಾ ಪರ್ಮಾರ್, ರುಬಿನಾ ದಿಲೈಕ್ ಮತ್ತು ಇತರ ಅನೇಕ ಟಿವಿ ಸೆಲೆಬ್ರಿಟಿಗಳು ಕಳೆದ ಕೆಲವು ವರ್ಷಗಳಲ್ಲಿ ಶಾಕಿಂಗ್ ಎನಿಸುವಷ್ಟು ಬದಲಾಗಿದ್ದಾರೆ. ಯಾರೆಲ್ಲಾ ಬದಲಾಗಿದ್ದಾರೆ ನೋಡೋಣ.
ರುಬಿನಾ ದಿಲೈಕ್ (Rubina Dilaik)
ರುಬಿನಾ ತನ್ನ ಚೊಚ್ಚಲ ಸೀರಿಯಲ್ 'ಛೋಟಿ ಬಹು' ಮೂಲಕ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ರುಬಿನಾ ಅವರ ತೆರೆಯ ಮೇಲಿನ ಪಾತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು ಮತ್ತು ಪ್ರಶಂಸಿಸಿದರು. ಅಂದು ಸಿಂಪಲ್ ಆಗಿದ್ದ ನಟಿ ಇದೀಗ ಸ್ಟೈಲಿಶ್ ಆಗಿದ್ದಾರೆ.
ನಿಯಾ ಶರ್ಮಾ (Nia Sharma)
ನಿಯಾ ಶರ್ಮಾ ಮೊದಲ ಬಾರಿಗೆ ಟಿವಿಯಲ್ಲಿ 'ಕಾಲಿ - ಏಕ್ ಅಗ್ನಿಪರಿಕ್ಷಾ' ನಲ್ಲಿ ಅನು ಆಗಿ ಕಾಣಿಸಿಕೊಂಡರು, ಆದರೆ ಅಂದಿನ ನಿಯಾ ಶರ್ಮಾಗೂ ಇಂದಿನ ನಿಯಾಗೂ ಬಹಳಷ್ಟು ವ್ಯತ್ಯಾಸವಿದೆ. ನಟಿ ಬೋಲ್ಡ್ ಮತ್ತು ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ ಮತ್ತು ಅವರ ಸಾಮಾಜಿಕ ಮಾಧ್ಯಮ ಅಭಿಮಾನಿಗಳ ಜೊತೆ ತನ್ನ ಹಾಟ್ ಮಾಡರ್ನ್ ಲುಕ್ ಮೂಲಕ ಹತ್ತಿರವಾಗುತ್ತಿದ್ದಾರೆ.
ಮೌನಿ ರಾಯ್ (Mouni Roy)
ಮೌನಿ ರಾಯ್ ಕಿರುತೆರೆಯಲ್ಲಿ ಬಹಳ ಹಿಂದಿನಿಂದಲೂ ನಟಿಸುತ್ತಾ ಬಂದಿದ್ದಾರೆ. ಅವರು ತಮ್ಮ ಚೊಚ್ಚಲ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಮೂಲಕ ಕಿರುತೆರೆ ಪ್ರವೇಶಿಸಿದರು, ಆವಾಗ ನಟಿಯ ತುಂಬಾನೆ ಸಿಂಪಲ್ ಆಗಿದ್ದರು. ನಟಿ ಆಗಲೂ ಸುಂದರವಾಗಿ ಕಾಣುತ್ತಿದ್ದರು. ಆದರೆ ಈಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸಂಪೂರ್ಣವಾಗಿ ಬದಲಾಗಿದ್ದಾರೆ.
ಕರಿಷ್ಮಾ ತನ್ನಾ (Karishma Tanna)
ಕರಿಷ್ಮಾ ತನ್ನಾ 2001 ರಲ್ಲಿ ತನ್ನ ಟಿವಿ ಶೋ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಯೊಂದಿಗೆ ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡರು. ಅವರು ಕಳೆದ ದಶಕದಲ್ಲಿ ತುಂಬಾನೆ ಟ್ರಾನ್ಸ್ಫಾರ್ಮೇಶನ್ ಹೊಂದಿದ್ದಾರೆ. ಕರಿಷ್ಮಾ ಅವರ ಜಿಮ್ ಲುಕ್ ಅನೇಕರಿಗೆ ಸ್ಫೂರ್ತಿಯಾಗಿದೆ.
ಜೆನ್ನಿಫರ್ ವಿಂಗೆಟ್ (Jennifer Vinget)
ಜೆನ್ನಿಫರ್ ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಶಕಾ ಲಕಾ ಬೂಮ್ ಬೂಮ್' ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು. ಆವಾಗ ಅವರು ಇನ್ನೂ ಹರೆಯದಲ್ಲಿದ್ದರು, ನಂತರ ಜೆನ್ನಿಫರ್ ಕಿರುತೆರೆಯ ಬಹಳಷ್ಟು ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರು. ಕಳೆದ ಕೆಲವು ವರ್ಷಗಳಲ್ಲಿ, ಅವರು ಸಂಪೂರ್ಣವಾಗಿ ವಿಭಿನ್ನ ಲುಕ್ ಹೊಂದಿದ್ದಾರೆ.
ಹೀನಾ ಖಾನ್ (Hina Khan)
'ಬಿಗ್ ಬಾಸ್ 11' ರ ಪ್ರಯಾಣದ ಸಮಯದಲ್ಲಿ ಸಲ್ಮಾನ್ ಖಾನ್ ನೀಡಿದ ಹೇಳಿಕೆ 'ಬಹು ಬನಿ ಬೇಬ್ಸ್' ಗೆ ನಿಜವಾದ ಉದಾಹರಣೆ ಹೀನಾ ಖಾನ್. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೇ ಸೀರಿಯಲ್ ನಲ್ಲಿ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಿದ್ದ ಅಕ್ಷರಾ, ಇದೀಗ ಪೂರ್ತಿಯಾಗಿ ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದಿವ್ಯಾಂಕಾ ತ್ರಿಪಾಠಿ (Divyanka Tripathi)
ದಿವ್ಯಾಂಕಾ ತನ್ನ ಪ್ರಯಾಣದ ಪ್ರಾರಂಭದಿಂದಲೂ ಅತ್ಯಂತ ನೆಚ್ಚಿನ ಟಿವಿ ನಟಿಯಾಗಿದ್ದಾರೆ. ಅವರು 'ಬಾನು ಮೈ ತೇರಿ ದುಲ್ಹಾನ್' ಎಂಬ ಟಿವಿ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿಲುಕ್ ನಿಂದ ನೋಟದಿಂದ ಅನೇಕ ಹೃದಯಗಳನ್ನು ಗೆದ್ದಿದ್ದರು.