ಒಂದು ದಿನಕ್ಕೆ 30 ಲಕ್ಷ ರೂಪಾಯಿ; ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ ರೂಪಾಲಿ!
ಹಿಂದಿ ಕಿರುತೆರೆ ಲೋಕದಲ್ಲಿ ಸಖತ್ ಹೆಸರು ಮಾಡಿರುವ ರೂಪಾಲಿ ದಿನಕ್ಕೆ ಅಥವಾ ಸಂಚಿಕೆಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?
ಹಿಂದಿ ಕಿರುತೆರೆ ಜನಪ್ರಿಯ ನಟಿ ರೂಪಾಲಿ ಗಂಗೂಲಿ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಧಾರಾವಾಹಿ ನಟಿ ಎನ್ನುವ ಪಟ್ಟ ಪಡೆದಿದ್ದಾರೆ.
ಜನಪ್ರಿಯ ಅನುಪಮಾ ಧಾರಾವಾಹಿ ಚಿತ್ರೀಕರಣ ಮಾಡುವ ಸಮಯದಲ್ಲಿ ಒಂದು ಸಂಚಿಕೆಗೆ ಬರೊಬ್ಬರಿ 30 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ.
ಅಲ್ಲದೆ ಬಿಗ್ ಮ್ಯಾನ್ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 16ರಲ್ಲಿ ಕಾಣಿಸಿಕೊಳ್ಳಲು ಕೋಟಿಯಲ್ಲಿ ಸಂಭಾವನೆ ಪಡೆದಿದ್ದರಂತೆ.
ಏಪ್ರಿಲ್ 1977 ರಂದು ಜನಿಸಿದ ರೂಪಾಲಿ 7 ವರ್ಷದವರಿದ್ದಾಗ ನಟನಾ ಜಗತ್ತಿಗೆ ಪ್ರವೇಶಿಸಿದ್ದರು.ಅನಿಲ್ ಕಪೂರ್ ಮತ್ತು ಅಮೃತಾ ಸಿಂಗ್ ಅವರ ಸಾಹೇಬ್ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದು.
ತಮ್ಮ ಮದುವೆಗೆ 12 ವರ್ಷಗಳ ಮೊದಲೇ ಉದ್ಯಮಿ ಅಶ್ವಿನ್ ವರ್ಮಾ (Ashwin Verma) ಹಾಗೂ ರೂಪಾ ಗಂಗೂಲಿ ಪರಸ್ಪರ ಪರಿಚಯಸ್ಥರಾಗಿದ್ದರು. ಪ್ರೀತಿಸಿ ಮದುವೆಯಾದ ಇವರಿಗೆ ಒಬ್ಬ ಮಗನಿದ್ದಾನೆ.
ಮದುವೆಯ ನಂತರ ಗರ್ಭಿಣಿಯಾಗಲು ರೂಪಾಲಿ ಗಂಗೂಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅವರಿಗೆ ಥೈರಾಯ್ಡ್ ಸಮಸ್ಯೆ ಇತ್ತು, ಇದರಿಂದಾಗಿ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ.
ವೈದ್ಯರ ಸಲಹೆಯನ್ನು ಪಾಲಿಸಿ ತುಂಬಾ ಕಷ್ಟದಲ್ಲಿ ಗರ್ಭಿಣಿಯಾದೆ ಎಂದು ರೂಪಾಲಿ ಗಂಗೂಲಿ ಹೇಳಿಕೊಂಡಿದ್ದರು ಮದುವೆಯಾದ ಸುಮಾರು 2-3 ವರ್ಷಗಳ ನಂತರ ಅವಳು ರುದ್ರಾಂಶ್ ಎಂಬ ಮಗನಿಗೆ ಜನ್ಮ ನೀಡಿದ್ದರು.
ಮಗನ ಜನನದ ನಂತರ, ರೂಪಾಲಿ ಗಂಗೂಲಿ ನಟನೆಯಿಂದ ವಿರಾಮ ತೆಗೆದುಕೊಂಡು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುತ್ತಾ, ಮಗನ ಪಾಲನೆಯಲ್ಲಿ ಸಮಯ ಕಳೆದಿದ್ದರು. ನಂತರ ಇದ್ದಕ್ಕಿದ್ದಂತೆ ಅನುಪಮಾ ಧಾರಾವಾಹಿಯ ಆಫರ್ ಬಂದಿದ್ದರಿಂದ ಆಕೆ ಮತ್ತೆ ಟಿವಿಗೆ ಬಂದರು.