ನಾಚಿಕೆ ಆಗ್ಬೇಕು; ಮದೀನಾ ಮಸೀದಿಯಲ್ಲಿ ಫೋಟೋಶೂಟ್ ಮಾಡಿಸಿದ ನಟಿ ಹಿನಾ ಖಾನ್ ವಿರುದ್ಧ ಆಕ್ರೋಶ
ಖ್ಯಾತ ಕಿರುತೆರೆ ನಟಿ ಹಿನಾ ಖಾನ್ ರಂಜಾನ್ ಪ್ರಯುಕ್ತ ಮೆಕ್ಕಾ ಯಾತ್ರೆ ಮಾಡುತ್ತಿದ್ದಾರೆ. ಮೆಕ್ಕಾ, ಮದೀನಾಗೆ ಭೇಟಿ ನೀಡಿರು ಹಿನಾ ಖಾನ್ ಫೋಟೋಶೂಟ್ ಮಾಡಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಖ್ಯಾತ ಕಿರುತೆರೆ ನಟಿ ಹಿನಾ ಖಾನ್ ರಂಜಾನ್ ಪ್ರಯುಕ್ತ ಮೆಕ್ಕಾ ಯಾತ್ರೆ ಮಾಡುತ್ತಿದ್ದಾರೆ. ಇದು ಹಿನಾ ಖಾನ್ ಅವರ ಮೊದಲ ಉಮ್ರಾ ಆಗಿದೆ. ಮೆಕ್ಕಾ, ಮದೀನಾಗೆ ಭೇಟಿ ನೀಡಿರುವ ನಟಿ ಹಿನಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ. ಪವಿತ್ರ ನಗರಕ್ಕೆ ತನ್ನ ಪ್ರವಾಸದ ಹಲವಾರು ಚಿತ್ರಗಳನ್ನು ನಟಿ ಟ್ವೀಟ್ ಸಹ ಮಾಡಿದ್ದಾರೆ.
ಬಿಗ್ ಬಾಸ್ 11ರ ಸ್ಪರ್ಧಿ ಹಿನಾ ಖಾನ್ ಮಂಗಳವಾರ ತನ್ನ ಮೊದಲ ಉಮ್ರಾ ನಿರ್ವಹಿಸಲು ತನ್ನ ಕುಟುಂಬದೊಂದಿಗೆ ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದರು. ಬಳಿಕ ಮದೀನಾಗೆ ಭೇಟಿ ನೀಡಿದ್ದಾರೆ. ಮದೀನಾದ ಮಸೀದಿಯಲ್ಲಿ ಹಿನಾ ಖಾನ್ ತರಹೇವಾರಿ ಫೋಟೋಶೂಟ್ ಮಾಡಿದ್ದಾರೆ.
ಮಸೀದಿಯಲ್ಲಿ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಹಿನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಿನಾ ಖಾನ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಕ್ರೋಶ ವ್ಯಕ್ತವಾಗಿದೆ. ಪವಿತ್ರ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿದ್ದು ಸರಿಯಲ್ಲ ಎಂದು ಕಿಡಿ ಕಾರುತ್ತಿದ್ದಾರೆ.
ಮದೀನಾದ ಮಸೀದಿ ಸುತ್ತಮುತ್ತ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ತರಹೇವಾರಿ ಪೋಸ್ ಗಳನ್ನು ನೀಡಿ ಮಿಂಚಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 'ಆರಾಧನೆಯ ಸ್ಥಳ ಮಕ್ಕಾ ಆದರೇ ಪ್ರೀತಿಯ ಸ್ಥಳ ಮದೀನಾ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಪವಿತ್ರ ಸ್ಥಳದಲ್ಲಿ ಫೋಟೋಶೂಟ್ ಮಾಡಿಸಿದ ನಟಿ ಹಿನಾ ಖಾನ್ ವಿರುದ್ಧ ಅನೇಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡಿ, ನೀವು ಊಮ್ರಾ ಮಾಡಲು ಹೋಗಿದ್ದೀರಾ ಅಥವಾ ಫೋಟೋಶೂಟ್‌ಗಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಮತ್ತೋರ್ವ ಕಾಮೆಂಟ್ ಮಾಡಿ, ನಾಚಿಕೆ ಆಗ್ಬೇಕು, ಸೆಲೆಬ್ರಿಟಿಯಾಗಿ ನೀವು ಕೊನೇಪಕ್ಷ ಸ್ವಲ್ಪ ಜವಾಬ್ದಾರಿಯಾಗಿ ನಡೆದುಕೊಳ್ಳಿ. ಇದು ಪವಿತ್ರ ಸ್ಥಳ, ದಯವಿಟ್ಟು ಗೌರವಿಸಿ' ಎಂದು ಹೇಳಿದ್ದಾರೆ.
ಮತ್ತೊಬ್ಬ ಕಾಮೆಂಟ್ ಮಾಡಿ, 'ಮಾಲ್ಡೀವ್ಸ್, ಬಾಲಿ, ಲಂಡನ್, ಸ್ವಿಟ್ಜರ್ಲೆಂಡ್ ಇತ್ಯಾದಿಗಳು ಸ್ಥಳೆಲ್ಲಾ ಆಯ್ತು ಜನರು ಈಗ ಫೋಟೋಶೂಟ್‌ಗಾಗಿ ಮೆಕ್ಕಾ, ಮದೀನಾ, ವೈಷ್ಣೋದೇವಿ, ಗೋಲ್ಡನ್ ಟೆಂಪಲ್ ಮುಂತಾದ ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ' ಎಂದು ಹೇಳಿದ್ದಾರೆ.
ಕಿರುತೆರೆ ಖ್ಯಾತ ನಟಿ, ಬಿಗ್ ಬಾಸ್ 11ರ ಸ್ಪರ್ಧಿ ತನ್ನ ಮೊದಲ ಉಮ್ರಾ ನಿರ್ವಹಿಸಲು ಕುಟುಂಬದೊಂದಿಗೆ ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದಾರೆ.