ಗೀತಾ ಸೀರಿಯಲ್ ವಿಲನ್ ಮುದ್ದಾದ ಸಂಸಾರ ಹೀಗಿದೆ ನೋಡಿ
ತುಳು ರಂಗಭೂಮಿ ಮತ್ತು ಸಿನಿಮಾಗಳಲ್ಲಿ ಮಿಂಚಿದ ಹಲವಾರ ಪ್ರತಿಭೆಗಳು ಇಂದು ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರಲ್ಲಿ ವಿಜಯ್ ಶೋಭರಾಜ್ ಪಾವೂರ್ ಕೂಡ ಒಬ್ಬರು. ಇವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ನೋಡೋಣ.
ತುಳು ರಂಗಭೂಮಿಯಲ್ಲಿ (Tulu theater) ಹೆಸರು ಮಾಡಿ, ನಂತರ ಕೋಸ್ಟಲ್ ವುಡ್ (Coastalwood) ಸಿನಿಮಾಗಳಲ್ಲಿ ನಟಿಸಿ ಇದೀಗ ಕನ್ನಡ ಕಿರುತೆರೆ (Kannada Small Screen) ಮತ್ತು ಸಿನಿಮಾಗಳಲ್ಲೂ ಸಹ ತಮ್ಮ ಸ್ಪಷ್ಟ ಮಾತು ಮತ್ತು ಅಭಿನಯದ ಮೂಲಕ ರಂಜಿಸುತ್ತಿರುವ ನಟ ವಿಜಯ್ ಶೋಭರಾಜ್ ಪಾವೂರ್.
ತುಳುನಾಡಿನ ನಾಟಕದ ದೈತ್ಯ ಪ್ರತಿಭೆ ದೇವದಾಸ್ ಕಾಪಿಕಾಡ್ ಅವರ ತಂಡದಲ್ಲಿ ಒಬ್ಬರಾಗಿದ್ದ, ವಿಜಯ್ (Vijay Shobaraj Pavoor) ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾ, ನಂತರ ಏಸಾ ಎನ್ನುವ ತುಳು ಸಿನಿಮಾ ಮೂಲಕ ಸಿನಿಮಾದಲ್ಲೂ ಕಾಣಿಸಿಕೊಂಡರು. ನಂತರ ಇಡೀ ಕರ್ನಾಟಕ ಇವರನ್ನು ಗುರುತಿಸುವಂತೆ ಮಾಡಿದ್ದು, ಗೀತಾ ಸೀರಿಯಲ್.
ಗೀತಾ ಸೀರಿಯಲ್ ನಲ್ಲಿ (Geeta serial) ಖಳನಾಯಕಿ ಭಾನುಮತಿಯ ಅಣ್ಣನಾಗಿ ನಟಿಸುತ್ತಾ, ಖಳನಾಯಕನೂ ಜೊತೆಗೆ ಕಾಮಿಡಿ ಮಾಡುತ್ತಾ, ಮನರಂಜನೆ ನೀಡುತ್ತಾ, ಜನರನ್ನು ನಗಿಸಿದ್ದರೂ, ಜೊತೆಗೆ ವಿಲನ್ ಆಗಿ ಅಭಿಮಾನಿಗಳಿಗೆ ಕೋಪವನ್ನೂ ತರಿಸಿದ್ದರು. ಇವರಿಗೆ ಅತ್ಯುತ್ತಮ ಶಕುನಿ ಪ್ರಶಸ್ತಿ ಕೂಡ ಲಭ್ಯವಾಗಿತ್ತು.
ಮಂಗಳೂರಿನವರಾದ ಶೋಭರಾಜ್‌ಗೆ ಬಾಲ್ಯದಿಂದಲೂ ನಟನೆಯ ಹುಚ್ಚು. ಅದಕ್ಕಾಗಿಯೇ 16ನೇ ವಯಸ್ಸಿನಲ್ಲಿಯೇ ಇವರು ನಟನೆಯಲ್ಲಿ ತೊಡಗಲು ನಾಟಕತಂಡದಲ್ಲಿ ಸೇರಿಕೊಂಡರು. ಸುಮಾರು 9 ವರ್ಷಗಳ ಕಾಲ ಇವರು ಥಿಯೇಟರ್ ನಲ್ಲಿ ಸಕ್ರಿಯರಾಗಿದ್ದರು.
ಕನ್ನಡ ಕಿರುತೆರೆಯಲ್ಲಿ (Kannada smallscreen)ಹಲವಾರು ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿ ವಿಜಯ್ ಗುರುತಿಸಿಕೊಂಡಿದ್ದಾರೆ. ಭಲೇ ಬಸವ, ನೂರೆಂಟು ಸುಳ್ಳು, ಮಂಗಳೂರು ಹುಡ್ಗಿ, ಹುಬ್ಳಿ ಹುಡುಗ ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ.
ವಿಜಯ್ ಶೋಭರಾಜ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಮುದ್ದಾದ ಮಗಳು ಕೂಡ ಇದ್ದಾಳೆ. ವಿಜಯ್ ತಮ್ಮ ಪತ್ನಿ ದೀಪಿಕಾ ಜೊತೆ ರಾಜಾ ರಾಣಿ 2 ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಇವರು, ಪತ್ನಿ ಹಾಗೂ ಮಗುವಿನ ಜೊತೆಗಿನ ಸುಂದರ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
ವಿಜಯ್ ಶೋಭರಾಜ್ ಒಬ್ಬ ಉತ್ತಮ ಗಾಯಕರೂ ಆಗಿದ್ದು, ಹಲವಾರು ಹಾಡುಗಳನ್ನು ಹಾಡಿ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಗಳ ಜೊತೆಗೆ ಕೊರಗಜ್ಜನ ಹಾಡು ಹಾಡಿದ್ದು, ಭಾರಿ ವೈರಲ್ ಆಗಿತ್ತು.