ಝೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾಗ್ತಿದ್ದಾರೆ ರೌಡಿ ಬೇಬಿ ನಿಶಾ ರವಿಕೃಷ್ಣನ್!
ಗಟ್ಟಿಮೇಳ ಸೀರಿಯಲ್ ನಲ್ಲಿ ರೌಡಿಬೇಬಿ ಅಮೂಲ್ಯ ಪಾತ್ರದಲ್ಲಿ ಮಿಂಚಿ ಕರ್ನಾಟಕದ ಜನರ ಮನಗೆದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಮತ್ತೆ ಹೊಸ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ರೌಡಿ ಬೇಬಿ ಅಮೂಲ್ಯ ಆಗಿ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಅಂದ್ರೆ ನಿಶಾ ರವಿಕೃಷ್ಣನ್ (Nisha Ravikrishnan).
ಗಟ್ಟಿಮೇಳ (Gattimela) ಸೀರಿಯಲ್ ಬಳಿಕ ನಟಿ ತೆಲುಗು ಸೀರಿಯಲ್ ಮತ್ತು ಕನ್ನಡ ಸಿನಿಮಾದಲ್ಲಿ ಬ್ಯುಸಿಯಾದರು. ನಿಶಾ ಕನ್ನಡದಲ್ಲಿ ಅಂಶು ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಹಾಡುಗಳು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಅಂಶು ಸಿನಿಮಾ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಇದು ಭ್ರೂಣ ಹತ್ಯೆಯ ಕುರಿತಾದ ಚಿತ್ರ. ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೋಲೋ ಸಿನಿಮಾ ಇದಾಗಿದ್ದು, ಇದೊಂದು ಮಹಿಳಾ ಪ್ರಧಾನ ಸಿನಿಮಾ.
ನಿಶಾ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದು, ತೆಲುಗಿನಲ್ಲಿ ಅಮ್ಮಾಯಿಗಾರು ಧಾರಾವಾಹಿಯಲ್ಲಿ (serial) ಯಶವಂತ್ ಗೌಡನಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಧಾರಾವಾಹಿ ಈಗ ಕನ್ನಡದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.
ಗಟ್ಟಿಮೇಳದ ನಂತರ ವೀಕ್ಷಕರು ಮತ್ತೆ ನಿಶಾ ಅವರನ್ನು ಕಿರುತೆರೆಯಲ್ಲಿ ನೋಡಲು ಬಯಸಿದ್ದರು. ಇದೀಗ ವೀಕ್ಷಕರ ಆಸೆ ನೆರವೇರುವಂತಿದೆ, ಯಾಕಂದ್ರೆ ಮತ್ತೆ ಹೊಸ ಸೀರಿಯಲ್‌ನಲ್ಲಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ.
ಹೌದು, ಝೀಕನ್ನಡದಲ್ಲಿ ಪ್ರಸಾರವಾಗಲಿರುವ ಅಣ್ಣಯ್ಯ (Annaiah) ಧಾರಾವಾಹಿಯಲ್ಲಿ ನಿಶಾ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ನಟಿ ಎಲ್ಲೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಆದರೆ ಇವರು ನಟಿಸುವ ಬಗ್ಗೆ ಕಳೆದ ಎರಡು ಮೂರು ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.
ಝೀ ಕನ್ನಡಲ್ಲಿ ಈಗಾಗಲೇ ಅಣ್ಣಯ್ಯ ಸೀರಿಯಲ್ ಪ್ರೊಮೋ ರಿಲೀಸ್ ಆಗಿದ್ದು, ನಾಲ್ಕು ಜನ ತಂಗಿಯರು ಮತ್ತು ಅಣ್ಣನ ಕಥೆ ಇದು. ನಿಶಾ ಒಬ್ಬ ತಂಗಿಯಾಗಿ ನಟಿಸುವ ಸಾಧ್ಯತೆ ಇದೆ. ಇನ್ನು ಈ ಸೀರಿಯಲ್ ಯಾವಾಗ ಪ್ರಸಾರವಾಗಲಿದೆ ಎನ್ನುವ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ನಿಶಾಗೆ ಜೋಡಿಯಾಗಿ ವಿಕಾಸ್ ಉತ್ತಯ್ಯ ನಟಿಸುತ್ತಿದ್ದಾರೆ.