ಮಗಳಿಗೆ 'ಭಾರ್ಗವಿ' ಎಂದು ನಾಮಕರಣ ಮಾಡಿದ 'ಎದೆ ತುಂಬಿ ಹಾಡುವೆನು' ಗಾಯಕ ಸಂದೇಶ್!
ಮಗಳಿಗೆ ಅದ್ಧೂರಿಯಾಗಿ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ಮಾಡಿದ ಗಾಯಕ. ಎಲ್ಲೆಡೆ ಫೋಟೋ ವೈರಲ್.....

2021ರ ಜನಪ್ರಿಯ 'ಎದೆ ತುಂಬಿ ಹಾಡುವೆನು' ಸಂಗೀತ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಟ್ರೋಫಿ ಪಡೆದಿರುವ ಸಂದೀಪ್ ಸ್ಯಾಂಡಿ (Sandeep Sandy).
ಕರಾವಳಿ ಪ್ರತಿಭಾವಂತ ಗಾಯಕ ಸಂದೇಶ್ ಸ್ಯಾಂಡಿ ಮತ್ತು ಮನೀಶಾ ದಂಪತಿ ಮಗಳಿಗೆ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ.
'ಮುದ್ದು ಮಗಳ ಆಗಮನ ನಮ್ಮ ಬದುಕಲ್ಲಿ ಹೊಸ ಬೆಳಕನ್ನು ತಂದಿದೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಸಂದೀಪ್ ಸ್ಯಾಂಡಿ ಬರೆದುಕೊಂಡಿದ್ದಾರೆ.
'ನಮ್ಮ ಮನೆಯ ಬೆಳಕು ಭಾರ್ಗವಿ( ಆರ್ವಿ)' ಎಂದು ಸಂದೇಶ್ ಮಗಳ ಹೆಸರು ರಿವೀಲ್ ಮಾಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಂಗೀತ ಕಾರ್ಯಕ್ರಮದ ನಂತರ 'ರಾಜಾ ರಾಣಿ- 2' (Raja Rani 2) ರಿಯಾಲಿಟಿ ಶೋನಲ್ಲಿ ಸಂದೇಶ್ ಮತ್ತು ಮನೀಷಾ ಸ್ಪರ್ಧಿಸಿದ್ದಾರೆ.
ಬಣ್ಣದ ಪ್ರಪಂಚಕ್ಕೆ ಗಾಯಕನಾಗಿ ಪರಿಚಯ ಆಗುವ ಮುನ್ನ ಸಂದೇಶ್ ಸ್ಯಾಂಡಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಹೆಮ್ಮೆಯಿಂದ ಹಲವು ಬಾರಿ ಹೇಳಿಕೊಂಡಿದ್ದರು.
ಸಂದೀಪ್ ಗುಂಗುರು ಕೂದಲು ಹೊಂದಿದ್ದು ನೋಡಲು ತಕ್ಷಣ ಸಂಗೀತ ನಿರ್ದೇಶಕ ಗುರು ಕಿರಣ್ ರೀತಿ ಕಾಣಿಸುತ್ತಾರೆ ಎಂದು ಅನೇಕು ಅವರ ಬಳಿಯೇ ಹೇಳಿದ್ದಾರಂತೆ.