ಅರವಿಂದ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದಿವ್ಯಾ ಉರುಡುಗ: ಫೋಟೋ ವೈರಲ್
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಅವರ ರೋಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡುತ್ತಿರುವ ಫೋಟೋ ಇದಾಗಿವೆ.
ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದರು. ಬಿಗ್ ಬಾಸ್ ಮನೆಯಿಂದನೇ ಇಬ್ಬರ ಪ್ರೀತಿ ಪ್ರಾರಂಭವಾಗಿತ್ತು. ಅಲ್ಲಿಂದ ಜೊತೆಯಲ್ಲಿದ್ದವರು ಈಗಲೂ ಜೊತೆಯಲ್ಲಿದ್ದಾರೆ. ಇಬ್ಬರೂ ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿರುತ್ತಾರೆ.
ದಿವ್ಯಾ ಉರುಡುಗ ಮತ್ತು ಅರವಿಂದ್ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರೂ ಇತ್ತೀಚಿಗಷ್ಟೆ ಡಿನ್ನರ್‍ಗೆ ಹೋಗಿದ್ದು ಫೋಟೋಗಳು ಹರಿದಾಡುತ್ತಿವೆ.
ದಿವ್ಯಾ ಮತ್ತು ಅರವಿಂದ್ ಕೆಪಿ ಅವರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರು ಊಟ ಮಾಡುತ್ತಾ ಒಂದಿಷ್ಟು ತರ್ಲೆ ಮಾಡುತ್ತಿರುವ ಫೋಟೋಗಳು ಗಮನ ಸೆಳೆಯುತ್ತಿವೆ.
ದಿವ್ಯಾ ಉರುಡುಗ ಕಿರುತೆರೆ ನಟಿಯಾಗಿ, ಸಿನಿಮಾ ನಟಿಯಾಗಿ ಗುರುತಿಸಿಕೊಂಡಿದ್ದ ದಿವ್ಯಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಮತ್ತಷ್ಟು ಖ್ಯಾತಿಗಳಿಸಿದರು.
ಅರವಿಂದ್ ಹಾಗೂ ದಿವ್ಯಾ ‘ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಬಳಿಕ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ ಈ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ.
ದಿವ್ಯಾ ಉರುಡುಗ ಕನ್ನಡದಲ್ಲಿ ಧ್ವಜ, ಫೇಸ್ 2 ಫೇಸ್ ಮತ್ತು ರಾಂಚಿ ಸಿನಿಮಾಗಳಲ್ಲಿ ನಟಿಸಿಸಿದ್ದಾರೆ. ಹುಲಿರಾಯ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು.