ಬ್ಲಾಕ್ ಬಸ್ಟರ್ ಸಿನಿಮಾ ಸೂಪರ್ ಸ್ಟಾರ್ ಹೀರೋಯಿನ್ ಆಗಿ ದಿವ್ಯಾ ಉರುಡುಗ ಕಿರುತೆರೆಗೆ ಎಂಟ್ರಿ
ಹಲವು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ದಿವ್ಯಾ ಉರುಡುಗ ಇದೀಗ ಮತ್ತೆ ಕನ್ನಡ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ. ಹೊಸ ಸೀರಿಯಲ್‌ನಲ್ಲಿ ದಿವ್ಯಾ ನಾಯಕಿಯಾಗಿ ನಟಿಸುತ್ತಿದ್ದು, ಈ ಬಗ್ಗೆ ಫುಲ್ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಸೀಸನ್ 8 ರ ಮೂಲಕ ಸಖತ್ ಸದ್ದು ಮಾಡಿದ ನಟಿ ದಿವ್ಯಾ ಉರುಡುಗ (Divya Uruduga), ಇವರು ಬಿಗ್ ಬಾಸ್ ಗೂ ಬರೋದಕ್ಕೂ ಮುನ್ನ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ ಮೂಲಕ ನಟನೆಗೆ ಎಂಟ್ರಿ ಕೊಟ್ಟ ದಿವ್ಯಾ ಬಳಿಕ ಅಂಬಾರಿ, ಖುಷಿ ಸೀರಿಯಲ್ ಗಳಲ್ಲಿ ನಟಿಸಿದ್ದರು.
ಸೀರಿಯಲ್ (Serial)ಗಳಲ್ಲಿ ಜನಪ್ರಿಯತೆ ಸಿಕ್ಕಿದ್ದೆ ಇವರಿಗೆ ಹಿರಿತೆರೆಯಲ್ಲೂ ಅವಕಾಶಗಳು ಹುಡುಕಿಕೊಂಡು ಬಂದವು. ದಿವ್ಯಾ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಹುಲಿರಾಯ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ದಿವ್ಯಾ ಬಳಿಕ 'ಫೇಸ್ ಟು ಫೇಸ್, ಧ್ವಜ, ಗಿರ್ಕಿ, ರಾಂಚಿ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದರು.
ಬಳಿಕ ಬಿಗ್ ಬಾಸ್ ನಲ್ಲಿ (Bigg Boss) ಸ್ಪರ್ಧಿಯಾಗುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು, ಬಿಗ್ ಬಾಸ್ ಬಳಿಕ ಅರವಿಂದ್ ಕೆಪಿ ಜೊತೆಯಾಗಿ ಅರ್ಧಂಭರ್ಧ ಪ್ರೇಮಕತೆ ಎನ್ನುವ ಸಿನಿಮಾದಲ್ಲೂ ನಟಿಸಿದರು. ಇದೀಗ ಮತ್ತೆ ದಿವ್ಯಾ ಉರುಡುಗ ಕಿರುತೆರೆಯಲ್ಲಿ ರಂಜಿಸೋಕೆ ಬರ್ತಾ ಇದ್ದಾರೆ.
ಕಲರ್ಸ್ ಕನ್ನಡದಲ್ಲಿ(Colors Kannada) ನಿನಗಾಗಿ ಎನ್ನುವ ಹೊಸ ಸೀರಿಯಲ್ ಪ್ರೋಮೋ ರೀಲೀಸ್ ಆಗಿದೆ. ಹೊಸ ತರನಾದ ಕಥೆಯನ್ನು ಹೊಂದಿರುವ ಈ ಪ್ರೋಮೋ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸೂಪರ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ರಚನಾಗೆ ಜನರ ಪ್ರೀತಿ ಸಿಕ್ಕಿದೆ, ಆದ್ರೆ ಅಮ್ಮನ ಮಮತೆ… ಎನ್ನುವ ಕ್ಯಾಪ್ಶನ್ ನೀಡುವ ಮೂಲಕ ಪ್ರೋಮೋ ಬಿಡುಗಡೆ ಮಾಡಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಹಿರೋಯಿನ್ (heroine) ನೋಡೋದಕ್ಕೆ ಜನ ಮುಗಿ ಬಿಳ್ತಿದ್ದಾರೆ, ಎನ್ನುತ್ತಾ ತಮ್ಮ ನಾಯಕಿಯನ್ನು ನೋಡಲು ಜೈಕಾರ ಹಾಕುತ್ತಿರುವ ಅಭಿಮಾನಿಗಳನ್ನು ತೋರಿಸಲಾಗಿದೆ. ಒಂದೆಡೆ ಹೀರೋಯಿನ್ ಫೋಟೋಗೆ ಹಾಲಿನ ಅಭಿಷೇಕ ಕೂಡ ನಡೆಯುತ್ತಿರುತ್ತೆ.
ಅಭಿಮಾನಿಗಳನ್ನು ನೋಡಲು ಬಂದ ನಾಯಕಿ ಜನರ ಪ್ರೀತಿ, ಹಂಬಲ ಕಂಡು ಮನಸೋತು, ಇವರೆಲ್ಲಾ ಯಾಕೆ ನನ್ನನ್ನು ಇಷ್ಟೋಂದು ಇಷ್ಟಪಡ್ತಾರೆ ಎಂದು ಕೇಳ್ತಾಳೆ, ಅದಕ್ಕೆ ಅಮ್ಮ ಇದರ ಬಗ್ಗೆ ನೀವು ಹೆಚ್ಚು ತಲೆಕೆಡಿಸ್ಕೋಬೇಡ, ನಾನು ಹೇಳಿದಷ್ಟು ಮಾಡು ಎಂದು ಮಗಳ ಕೈ ಎತ್ತಿ ಜನರತ್ತ ಕೈ ಬೀಸುವಂತೆ ಮಾಡ್ತಾರೆ.
ಇದನ್ನು ನೋಡಿದ್ರೇನೆ ಇದೊಂದು ಅಮ್ಮ ಮಗಳ ಸೆಂಟಿಮೆಂಟ್ ಕಥೆಯಾಗಿದ್ದು, ಜನರ ಪ್ರೀತಿಯಿಂದ ಮಿಂದ ನಾಯಕಿ ರಚನಾಗೆ ಅಮ್ಮನ ಪ್ರೀತಿಯೇ ಸಿಕ್ಕಿಲ್ಲ ಅನ್ನೋದು ಗೊತ್ತಾಗುತ್ತೆ. ಅಲ್ಲದೇ ಸ್ಟಾರ್ ನಾಯಕಿಯಾದರೂ ರಚನಾ ಅಮ್ಮನ ಕೈಗೊಂಬೆ ಅಷ್ಟೇ, ಅಮ್ಮ ಹೇಳಿದ್ದನ್ನಷ್ಟೇ ಮಾಡುವ ಹುಡುಗಿಯಾಗಿ ದಿವ್ಯಾ ಉರುಡುಗ ನಟಿಸಿದ್ದಾರೆ.
ಹಲವು ಸಮಯದ ಬಳಿಕ ದಿವ್ಯಾ ಉರುಡುಗ ಅವರನ್ನು ತೆರೆ ಮೇಲೆ ಮತ್ತೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅರವಿಂದ್ ಕೆಪಿ, ಕಾರ್ತಿಕ್ ಮಹೇಶ್, ನೇಹಾ ಗೌಡ, ದೀಪಿಕಾ ದಾಸ್, ಅಮೂಲ್ಯ ಗೌಡ ಸೇರಿ ಹಲವು ತಾರೆಯರು ದಿವ್ಯಾ ಉರುಡುಗ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.