ಹನಿಮೂನ್‌ನ 'ಹಾಟ್' ಫೋಟೋ ಶೇರ್ ಮಾಡಿಕೊಂಡ ಕಿರುತೆರೆ ನಟಿ!
ಇತ್ತೀಚೆಗೆ ಮದುವೆಯಾಗಿದ್ದ ದೇವೋಂನ್ ಕಾ ದೇವ್ ಮಹಾದೇವ್ ಸೀರಿಯಲ್‌ನ ಪಾರ್ವತಿ ಪಾತ್ರಧಾರಿ ಸೋನಾರಿಕಾ ಭಡೋರಿಯಾ ತಮ್ಮ ಹನಿಮೂನ್ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸೋನಾರಿಕಾ ಭಡೋರಿಯಾ ಸಖತ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಅವರ ವೈಭವದ ಮದುವೆ. ಸೋಶಿಯಲ್ ಮೀಡಿಯಾದಲ್ಲಿ ಇದರ ಸಾಕಷ್ಟು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಬಹುಕಾಲದ ಗೆಳೆಯ ವಿಕಾಸ್ ಪರಾಶರ್ ಜೊತೆ ಸೋನಾರಿಕಾ ಭಡೋರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ತಿಂಗಳ ಆರಂಭದಲ್ಲಿ ವಿವಾಹ ನೆರವೇರಿತ್ತು.
ಈಗ ಸೋನಾರಿಕಾ ಭಡೋರಿಯಾ ರೋಮಾಂಟಿಕ್ ಮೂಡ್‌ನಲ್ಲಿದ್ದಾರೆ. ಪತಿ ವಿಕಾಸ್ ಜೊತೆಗಿನ ಹನಿಮೂನ್‌ನ ಹಾಟ್ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಒಂದು ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಅವರು ಹನಿಮೂನ್‌ನ ಆಕರ್ಷಕ ಚಿತ್ರಗಳನ್ನು ಹಂಚಿಕೊಂಡಿದ್ದರೆ, ಅವರ ಅಭಿಮಾನಿಗಳು ಇನ್ನೊಂದು ಕುತೂಹಲವೆದ್ದಿದೆ.
ಸೋನಾರಿಕಾ ಭಡೋರಿಯಾ ಹಾಗೂ ವಿಕಾಶ್ ಪರಾಶರ್ ತಮ್ಮ ಹನಿಮೂನ್‌ಗೆ ಹೋಗಿದ್ದೆಲ್ಲಿಗೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಬಹುತೇಕ ಮಂದಿ ಸೋನಾರಿಕಾ ತಮ್ಮ ಹನಿಮೂನ್‌ಅನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಇದು ಲಕ್ಷದ್ವೀಪದ ಚಿತ್ರ ಎಂದಿದ್ದಾರೆ.
ಬೀಚ್‌ನಲ್ಲಿ ಬಿಕಿನಿ ಧರಿಸಿ ಸಂಭ್ರಮಿಸಿರುವ ವಿಡಿಯೋಗಳನ್ನು ಸೋನಾರಿಕಾ ಭಡೋರಿಯಾ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಾಕಿಕೊಂಡಿದ್ದಾರೆ.
ಬಿಳಿ ಬಣ್ಣದ ಬಿಕಿನಲ್ಲಿ ಸೋನಾರಿಕಾ ಬಹಳ ಹಾಟ್ ಆಗಿ ಕಂಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ, ಇದು ಯಾವ ಪ್ರದೇಶ ಎನ್ನುವ ಗುಟ್ಟನ್ನು ಸೋನಾರಿಕಾ ಬಿಟ್ಟುಕೊಟ್ಟಿಲ್ಲ.
ಮದುವೆಯಾದ ಕೆಲವೇ ದಿನಗಳಲ್ಲಿ ಸೋನಾರಿಕಾ ಹನಿಮೂನ್‌ಗೆ ಹಾರಿದ್ದರು ಎಂದು ವರದಿಯಾಗಿತ್ತು. ಇದರ ಚಿತ್ರಗಳನ್ನು ಮುಂಬೈನ ಎಂಟರ್‌ಟೇನ್‌ಮೆಂಟ್ ಪತ್ರಿಕೆಗಳು ಪ್ರಕಟಿಸಿದ್ದವು.
ಹಿಂದಿನ ಸೂಪರ್‌ಹಿಟ್ ಸೀರಿಯಲ್ ದೇವೋಂನ್ ಕಾ ದೇವ್ ಮಹಾದೇವ್‌ನಲ್ಲಿ ಪಾರ್ವತಿ ಪಾತ್ರವನ್ನು ಮಾಡುವ ಮೂಲಕ ಸೋನಾರಿಕಾ ಫೇಮಸ್ ಆಗಿದ್ದರು.
31 ವರ್ಷದ ಸೋನಾರಿಕಾ (Sonarika Bhadoria) 2015ರಲ್ಲಿ ಜಾದೂಗಾಡು ತೆಲುಗು ಚಿತ್ರದ ಮೂಲಕ ಸಿನಿರಂಗಕ್ಕೆ ಪ್ರವೇಶ ಪಡೆದಿದ್ದರು.
ಫೆಬ್ರವರಿ 18 ರಂದು ಸೋನಾರಿಕಾ ಭಡೋರಿಯಾ ವಿವಾಹ ಸಮಾರಂಭ ನಡೆದಿತ್ತು. 8 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ವಿಕಾಶ್ ಪರಾಶರ್‌ರನ್ನು ವಿವಾಹವಾಗಿದ್ದರು.
ಇದಕ್ಕೂ ಮುನ್ನ 2022ರಲ್ಲಿ ಮಾಲ್ಡೀವ್ಸ್‌ನಲ್ಲಿ ಸೋನಾರಿಕಾ ಭಡೋರಿಯಾ ಹಾಗೂ ವಿಕಾಶ್ ಪರಾಶರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಸೋನಾರಿಕಾ ಭಡೋರಿಯಾ ಹಾಗೂ ವಿಕಾಶ್ ಪರಾಶರ್ ಅವರ ಮದುವೆ ಸಮಾರಂಭ ರಣಥಂಬೋರ್‌ನ ನಹಾರ್‌ಗಢ ಪ್ಯಾಲೇಸ್‌ನಲ್ಲಿ ನಡೆದಿತ್ತು.
2022ರಲ್ಲಿ ಹಿಂದಿಯ ಹಿಂದುತ್ವ ಸಿನಿಮಾದಲ್ಲಿ ನಟಿಸಿದ್ದ ಸೋನಾರಿಕಾ ಭಡೋರಿಯಾ ಆ ಬಳಿಕ ಅಷ್ಟಾಗಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ.