ಬಿಗ್‌ಬಾಸ್‌ನಲ್ಲಿ ರಾಗಿಣಿ, ರವಿಶಂಕರ್ ಗೌಡ; ಫೆ.23ರಿಂದ ಕ್ವಾರಂಟೈನ್‌ನಲ್ಲಿರುವ ಸ್ಪರ್ಧಿಗಳು!
ಫೆ.28ರಿಂದ ಪ್ರಸಾರವಾಗುತ್ತಿರುವ ಬಿಗ್‌ಬಿಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಕ್ವಾರಂಟೈನ್‌ಲ್ಲಿ ಯಾರೆಲ್ಲಾ ಇದ್ದಾರೆ ನೋಡಿ.....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಫೆ.28ರಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ.
ಫೆ.23ರಿಂದ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು ಯಾರೆಲ್ಲಾ ಇರಲಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ರಾಗಿಣಿ ದ್ವಿವೇದಿ, ನಿರ್ದೇಶಕ ರವಿ ಶ್ರೀವತ್ಸ, ಕಾಮಿಡಿ ಕಿಲಾಡಿಗಳು ನಟಿ ನಯನಾ, ಸುಕೃತಾ, ಅಮೃತಾ, ಗೀತಾ ಭಾರತಿ ಭಟ್, ರಜನಿ, ಸಮೀಕ್ಷಾ, ನಟ ಕಿರಣ್ ಶ್ರೀನಿವಾಸ.
ಸುನೀಲ್ ರಾವ್, ಲವ್ ಗುರು ಖ್ಯಾತಿಯ ರೇಡಿಯೋ ಜಾಕಿ ರಾಜೇಶ್, ಹಾಸ್ಯ ನಟರಾದ ತಬಲಾ ನಾಣಿ, ತರಂಗ ವಿಶ್ವ, ಸರಿಗಮಪ ವಿನ್ನರ್ ಹನುಮಂತು, ರಘು ಗೌಡ, ರವಿಶಂಕರ್ ಗೌಡ ಹೀಗೆ ಹಲವರ ಹೆಸರುಗಳು ಪಟ್ಟಿಯಲ್ಲಿ ಚಾಲ್ತಿಯಲ್ಲಿವೆ.
28ರಿಂದ 100 ದಿನಗಳ ಕಾಲ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ಯಾರೆಲ್ಲಾ ಮತ್ತಷ್ಟು ಫೇಮ್ ಗಳಿಸುತ್ತಾರೆ, ಯಾರೆಲ್ಲಾ ಹೆಸರು ಹಾಳು ಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಸ್ಪರ್ಧಿಗಳಿಗಿಂತ ವೀಕ್ಷಕರು ನಟ ಸುದೀಪ್ ನಿರೂಪಣೆ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ
ಅದರಲ್ಲೂ ಸುದೀಪ್ ವಸ್ತ್ರ ವಿನ್ಯಾಸದ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಕುತೂಹಲವಿದೆ.