ಬಿಗ್ ಬಾಸ್ 18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಪ್ರಕಟ, ಇಶಾ, ಸೆಲೆಬ್ರೆಟಿ ಚಾಯ್‌ವಾಲಾಗೆ ಚಾನ್ಸ್!
ಹಿಂದಿ ಬಿಗ್ ಬಾಸ್ 18ನೇ ಆವೃತ್ತಿ ಅಕ್ಟೋಬರ್ 5ರಂದು ಆರಂಭಗೊಳ್ಳುತ್ತಿದೆ. ಕುತೂಹಲ ಬಳಿಕ ಈ ಬಾರಿಯೂ ಸಲ್ಮಾನ್ ಖಾನ್ ಶೋ ನಡೆಸಿಕೊಡಲಿದ್ದಾರೆ. ಇದೀಗ 18ನೇ ಆವೃತ್ತಿಯ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಪ್ರಕಟಗೊಂಡಿದೆ.
ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಒಂದಾಗಿರುವ ಹಿಂದಿ ಬಿಗ್ ಬಾಸ್ ಶೋ ಇದೀಗ 18ನೇ ಆವೃತ್ತಿ ತಯಾರಿಯಲ್ಲಿದೆ. ಅಕ್ಟೋಬರ್ 5 ರಿಂದ ಪ್ರತಿ ದಿನ ರಾತ್ರಿ 10 ಗಂಟೆಗೆ ಹಾಗೂ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಆರಂಭಗೊಳ್ಳುತ್ತಿದೆ.
ಬಿಗ್ ಬಾಸ್ 18ನೇ ಆವೃತ್ತಿ ರಿಯಾಲಿಟಿ ಶೋವನ್ನು ಹೊಸ ನಿರೂಪಕರು ನಡೆಸಿಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಊಹಾಪೋಹಕ್ಕೆ ತೆರೆ ಬಿದ್ದಿದೆ. ಈ ಬಾರಿಯೂ ನಟ ಸಲ್ಮಾನ್ ಖಾನ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ.
ಬಾಲಿವುಡ್ ನಟಿ ಇಶಾ ಕೋಪಿಕ್ಕರ್ 18ನೇ ಆವೃತ್ತಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಈ ಮೂಲಕ ಮೊದಲ ಸ್ಪರ್ಧಿ ಯಾರು ಅನ್ನೋದು ಸ್ಪಷ್ಟವಾಗಿದೆ.
ಇಶಾ ಹೊರತಪಡಿಸಿದರೆ ಹಲವು ಹೆಸರು ಕೇಳಿಬರುತ್ತಿದೆ. ಈ ಪೈಕಿ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ನಟನೆಯಿಂದ ದೂರ ಉಳಿದಿರುವ ಸಮೀರಾ ರೆಡ್ಡಿ ಹೆಸರು ಮುಂಚೂಣಿಯಲ್ಲಿದೆ.
ಹಿಂದಿ ಸೀರಿಯಲ್ ನಟ ಶೋಯಿಬ್ ಇಬ್ರಾಹಂ, ನಟಿ ಕಾಶಿಶ್ ಕಪೂರ್, ನಟ ಝ್ಯಾನ್ ಸೈಫಿ, ಪೂಜಾ ಶರ್ಮಾ, ಶೀಝಾನ್ ಖಾನ್, ದಲ್ಜಿತ್ ಕೌರ್ ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ.
ಬಾಲಿವುಡ್ ಹಿರಿಯ ನಟಿ ರೇಖಾ ಈ ಬಾರಿಯಾ ಹಿಂದಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಕೆಲ ಸುತ್ತಿನ ಮಾತುಕತೆಗಳು ನಡೆದಿದೆ ಅನ್ನೋ ಚರ್ಚೆಗಳು ನಡೆಯುತ್ತಿದೆ.
ಸೆಲೆಬ್ರೆಟಿ ಚಾಯ್‌ವಾಲ ಡೋಲಿ ಚಾಯ್‌ವಾಲ ಈ ಬಾರಿಯ ಬಿಗ್ ಬಾಸ್‌ಗೆ ಆಹ್ವಾ ನೀಡಲಾಗಿದೆ ಎನ್ನಲಾಗುತ್ತಿದೆ. ಸಂಭಾವ್ಯ ಪಟ್ಟಿಯಲ್ಲಿ ಈ ಡೋಲಿ ಚಾಯ್‌ವಾಲ್ ಹೆಸರು ಮುಂಚೂಣಿಯಲ್ಲಿದೆ.
ಸೋಶಿಯಲ್ ಮೀಡಿಯಾ ಸ್ಟಾರ್ ಫೈಸಲ್ ಶೇಕ್, ಫುಕ್ರಾ ಇನ್ಸಾನ್ ಯೂಟ್ಯೂಬರ್ ಅಭಿಷೇಕ್ ಮಲ್ಹನ್, ಟಿವಿ ನಟಿ ನುಸ್ರತ್ ಜಹಾನ್, ನಟಿ ದೀಪಿಕಾ ಆರ್ಯ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.
ಕಾಮಿಡಿಯನ್ ಹರ್ಷಾ ಬೆನಿವಾಲ್, ಟಿವಿ ನಟಿ ಸುರ್ಭಿ ಜ್ಯೋತಿ, ನಟ ಕರನ್ ಪಟೇಲ್, ನಟ ಅಲೈಸ್ ಕೌಶಿಕ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಸೇರಿಕೊಂಡಿದೆ.