- Home
- Entertainment
- TV Talk
- ಬೇರೆ ಧರ್ಮದವಳ ಜೊತೆ ಲವ್‌ನಲ್ಲಿದ್ದೆ, ಮಾಟ ಮಂತ್ರ ಮಾಡಿ ಲೈಫ್ ಹಾಳು ಮಾಡಿದ್ಳು; Bigg Boss ಸ್ಪರ್ಧಿ
ಬೇರೆ ಧರ್ಮದವಳ ಜೊತೆ ಲವ್‌ನಲ್ಲಿದ್ದೆ, ಮಾಟ ಮಂತ್ರ ಮಾಡಿ ಲೈಫ್ ಹಾಳು ಮಾಡಿದ್ಳು; Bigg Boss ಸ್ಪರ್ಧಿ
ಬಿಗ್ ಬಾಸ್ 13 ಸ್ಪರ್ಧಿ ಪಾರಸ್ ಛಾಬ್ರಾ, ತಮ್ಮ ಮಾಜಿ ಪ್ರೇಯಸಿ ತನ್ನ ಮೇಲೆ ವಶೀಕರಣ ಮಾಡಿದ್ದರು ಎಂದು ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆ ಸಂಬಂಧದಲ್ಲಿದ್ದಾಗ ತಾನು ಭ್ರಮಾಲೋಕದಲ್ಲಿದ್ದೆ ಮತ್ತು ಸದಾ ನಿದ್ದೆಯ ಗುಂಗಿನಲ್ಲಿದ್ದೆ ಎಂದು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಿಯತಮೆಯಿಂದ ವಶೀಕರಣ
ಬಿಗ್ ಬಾಸ್ 13 ರ ಸ್ಪರ್ಧಿ ಪಾರಸ್ ಛಾಬ್ರಾ ಪಾಡ್‌ಕಾಸ್ಟ್ ವೇಳೆ ವೈಯಕ್ತಿಕ ಜೀವನದ ಬಗ್ಗೆ ದೊಡ್ಡ ಸೀಕ್ರೇಟ್‌ವೊಂದನ್ನು ರಿವೀಲ್ ಮಾಡಿದ್ದಾರೆ. ಪಾರಸ್ ಛಾಬ್ರಾ ಅವರು ತಮ್ಮ ಮಾಜಿ ಪ್ರೇಯಸಿ ಬಗ್ಗೆ ಮಾತನಾಡಿದ್ದು, ಮಾಟ ಮಂತ್ರ ಆಗಿತ್ತು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಶೋನಿಂದ ಅಂತ್ಯ
ಬಿಗ್ ಬಾಸ್ 13 ಶೋನಲ್ಲಿ ಭಾಗವಹಿಸುವ ಮುನ್ನ, ಪಾರಸ್ ಛಾಬ್ರಾ ಅವರು ನಟಿ ಅಕಾಂಕ್ಷಾ ಪುರಿಯನ್ನು ಪ್ರೀತಿಸುತ್ತಿದ್ದರು. ಬಿಗ್ ಬಾಸ್ ಶೋ ನಂತರ ಇವರಿಬ್ಬರು ದೂರ ಆದರು.
ವಶೀಕರಣ ಆಗಿತ್ತು
ಪಾಡ್‌ಕಾಸ್ಟ್‌ವೊಂದರಲ್ಲಿ ಪಾರಸ್ ಅವರು, “ನಟಿಯೊಬ್ಬರು ನನ್ನನ್ನು ಪ್ರೀತಿಸುತ್ತಿದ್ದರು, ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದರು. ಅವರು ಯಾರು ಎಂದು ನಾನು ಹೆಸರನ್ನೂ ಹೇಳುವುದಿಲ್ಲ, ಆದರೆ ನಾನು ಆ ನಟಿಯೊಂದಿಗೆ ಸಂಬಂಧದಲ್ಲಿದ್ದಾಗ, ಅವರು ನನ್ನ ಮೇಲೆ ವಶೀಕರಣ ಮಾಡುತ್ತಿದ್ದರು. ಆ ಟೈಮ್‌ನಲ್ಲಿ ನಾನು ತುಂಬಾ ತೊಂದರೆ ಅನುಭವಿಸಿದ್ದೆ” ಎಂದು ಹೇಳಿದ್ದರು.
3 ವರ್ಷ ರಿಲೇಶನ್‌ಶಿಪ್‌ನಲ್ಲಿದ್ದೆ
“ಮಾಟ ಮಂತ್ರ ಮಾಡಿದ ಟೈಮ್‌ನಲ್ಲಿ ನನ್ನ ಜೀವನದಲ್ಲಿ ಎಲ್ಲವೂ ಕೆಟ್ಟದಾಗಿ ನಡೆಯುತ್ತಿತ್ತು. ಹೃದಯ ಬಡಿತ ಜಾಸ್ತಿ ಆಗಿತ್ತು. ಟಾಯ್ಲೆಟ್‌ಗೆ ಹೋದರೂ ನಿದ್ದೆ ಗುಂಗು. ಯಾರೋ ನನ್ನ ಜೊತೆ ಮಾತನಾಡಿದ ಅನುಭವ, ಮತ್ತೆ ಕಣ್ಣು ಬಿಟ್ಟರೆ ಯಾರೂ ಇರಲಿಲ್ಲ, ಭ್ರಮಾ ಲೋಕದಲ್ಲಿದ್ದೆ. ಒಟ್ಟೂ ನಾನು ಅವಳ ಜೊತೆ ಮೂರು ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದೆ' ಎಂದು ಪಾರಸ್ ಛಾಬ್ರಾ ಹೇಳಿದ್ದಾರೆ.
ಅವಳ ಉದ್ದೇಶ ಏನು?
“ನಾನು ಅವಳ ಜೊತೆ ಇರಬೇಕು ಅಂತ ಬಯಸುತ್ತಿದ್ದಳು, ಅವರ ತಂದೆ-ತಾಯಿಗೆ ನಾನು ಅವಳ ಜೊತೆ ಇರೋದು ಇಷ್ಟ ಆಗುತ್ತಿರಲಿಲ್ಲ. ಅವಳು ಕೊಡುತ್ತಿದ್ದ ಊಟ ತಿಂಡಿ ತಿಂದು ನಾನು ಇಡೀ ದಿನ ನಿದ್ದೆ ಮಾಡುತ್ತಿದ್ದೆ" ಎಂದು ಹೇಳಿದ್ದಾರೆ.
ಮುಖ ಹಾಳಾಗಿತ್ತು
ಬೇರೆ ಧರ್ಮದವಳಾದ ಅವಳು ಮಂತ್ರ ಹೇಳಿ ಟೀಗೆ ಎಂಜಲು ತುಪ್ಪಿ ನನಗೆ ಕೊಡುತ್ತಿದ್ದಳು. ಒಳ್ಳೆಯದಕ್ಕೆ ಅಂತ ನಾನು ಭಾವಿಸಿದೆ. ಆದರೆ ನನಗೆ ಮಾನಸಿಕ ಖಿನ್ನತೆ ಎಲ್ಲವೂ ಶುರುವಾಗಿತ್ತು. ನಾನು ಡಾಕ್ಟರ್ ಬಳಿ ಹೋದಾಗ ಎಲ್ಲವೂ ಸರಿ ಇತ್ತು ಎಂದಿದ್ದರು. ಮುಖವಂತೂ ಸಂಪೂರ್ಣ ಹಾಳಾಗಿತ್ತು, ಏನೂ ಮಾಡಲು ಮನಸ್ಸು ಇರಲಿಲ್ಲ” ಎಂದು ಅವರು ಹೇಳಿದ್ದಾರೆ.