ಸೀರಿಯಲ್‌ನ ಈ ಜೋಡಿ ನೋಡಿದ್ರೆ , ಆದ್ರೆ ಇವ್ರ ಥರ ಅರೇಂಜ್ ಮ್ಯಾರೇಜ್ ಆಗ್ಬೇಕು, ಲವ್ವು ಗಿವ್ವು ಬೇಡ ಅಂತೀರಿ!
ಮನೆಯವರಿಗೆ ಇಷ್ಟವಿಲ್ಲದ ಲವ್ ಮ್ಯಾರೇಜ್ ಆಗೋದಕ್ಕಿಂತ, ಮನೆಯವರೇ ನೋಡಿದ ಹುಡುಗೀನ ಮದ್ವೆ ಆದ್ರೆ ಜೀವನ ನಿಜಕ್ಕೂ ಸೂಪರ್ ಆಗಿರುತ್ತೆ, ಅಂತಾ ತೋರಿಸಿಕೊಟ್ಟ ಕಿರುತೆರೆ ಜೋಡಿಗಳು ಲಕ್ಷ್ಮೀ ಮತ್ತು ವೈಷ್ಣವ್ ಹಾಗೂ ಭೂಮಿಕಾ ಮತ್ತು ಗೌತಮ್.
ಸೀರಿಯಲ್ಸ್ (Serials) ನಮಗೆ ಮನರಂಜನೆ ನೀಡೋದು ಮಾತ್ರ ಅಲ್ಲ, ಅದು ನಮಗೆ ಜೀವನ ನಡೆಸುವಂತಹ, ಸುಂದರ ಸಂಸಾರ ಸಾಗಿಸುವಂತಹ ಜೀವನ ಪಾಠವನ್ನು ಮಾಡುತ್ತೆ ಅನ್ನೋದು ಸುಳ್ಳಲ್ಲ. ಎಷ್ಟೋ ಜನ ಸೀರಿಯಲ್ ನೋಡಿ ಜನ ಕೆಟ್ಟೋಗ್ತಿದ್ದಾರೆ ಅಂತಾರೆ. ಆದ್ರೆ ಅದರಲ್ಲಿನ ಒಳ್ಳೆತನವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡ್ರೆ, ಜೀವನ ವಾರೆ ವಾ ಎನ್ನುವಷ್ಟು ಸಖತ್ತಾಗಿರುತ್ತೆ.
ಈಗಿನ ಕಾಲದ ಜನ ರಿಲೇಶನ್ ಶಿಪ್ (Relationship) ಅಥವಾ ಮದುವೆ ಬಗ್ಗೆ ಏನು ಯೋಚ್ನೆ ಮಾಡ್ತಾರೆ ಅಂದ್ರೆ, ಲವ್ ಮಾಡಿದ್ರೆ ಒಳ್ಳೆದು, ಲವ್ ಮ್ಯಾರೇಜ್ ಆದ್ರೆ ಮಾತ್ರ ವೈವಾಹಿಕ ಜೀವನ ಚೆನ್ನಾಗಿರುತ್ತೆ. ಮನೆಯವರು ನೋಡಿರೋ ಹುಡುಗ/ಹುಡುಗಿಯನ್ನ ಅರೇಂಜ್ ಮ್ಯಾರೇಜ್ ಆದ್ರೆ ಜೀವನ ಚೆನ್ನಾಗಿರಲ್ಲ ಅಂತಾರೆ. ಆದ್ರೆ ಕನ್ನಡದ ಪ್ರಮುಖ ವಾಹಿನಿಗಳಲ್ಲಿ ಬರೋ ಈ ಜೋಡಿಗಳನ್ನ ನೋಡಿದ್ರೆ ಅರೇಂಜ್ ಮ್ಯಾರೇಜ್ ಆದ್ರೆ ಎಷ್ಟು ಚೆನ್ನಾಗಿರುತ್ತೆ ಜೀವನ ಅಂತ ನಿಮಗೆ ಅನಿಸದೇ ಇರದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಲಕ್ಷ್ಮೀ ಮತ್ತು ವೈಷ್ಣವ್ ಜೋಡಿ ಹಾಗೂ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಮೃತಧಾರೆ (Amruthadhare) ಧಾರಾವಾಹಿಯ ಗೌತಮ್-ಭೂಮಿಕಾ ಜೋಡಿ ನೋಡಿದ್ರೆ, ಆದ್ರೆ ಈ ಥರ ಅರೇಂಜ್ ಮ್ಯಾರೇಜ್ ಆಗ್ಬೇಕು, ಲವ್ವು ಗಿವ್ವು ಏನೂ ಬೇಡ್ವೇ ಬೇಡ ಅನ್ನೋದಂತೂ ಖಂಡಿತಾ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ತನ್ನ ಅಕ್ಕಮ್ಮನಿಗಾಗಿ ಮದುವೆಗೆ ಒಪ್ಪಿಕೊಂಡರೆ, ವೈಷ್ಣವ್ ಕಾವೇರಿಯ ಮೋಸದಾಟದ ಬಗ್ಗೆ ತಿಳಿದುಕೊಳ್ಳದೇ ತನ್ನ ತಾಯಿಗಾಗಿ ಮದುವೆಗೆ ಒಪ್ಪಿಕೊಂಡ. ಲಕ್ಷ್ಮೀ -ವೈಷ್ಣವ್ ಇಬ್ಬರೂ ಸಹ ತಮ್ಮ ಮನೆಯವರಿಗಾಗಿ ಇಷ್ಟವಿಲ್ಲದೇ ಇದ್ದರೂ ಮದುವೆಯಾಗಿ, ಮದುವೆಯಾದ ಮೇಲೆ ಚೆನ್ನಾಗಿ ಬಾಳಲೇ ಬೇಕೆಂಬ ಹಠದಿಂದ ಜೊತೆಯಾಗಿ ಬದುಕಿದರು, ಕಷ್ಟ ಸುಖಕ್ಕೆ ಜೊತೆಯಾದ ಜೋಡಿ ಇವರು.
ವೈಷ್ಣವ್ (Vaishnav) ಮನಸಿನಲ್ಲಿ ಇನ್ನೂ ತನ್ನ ಹಳೆ ಪ್ರೀತಿ ಕೀರ್ತಿ ಅಮರವಾಗಿದ್ದರೂ, ತನ್ನನ್ನೇ ನಂಬಿ ಬಂದವಳ ಬದುಕನ್ನು ನಾನು ಯಾವತ್ತೂ ಹಾಳು ಮಾಡಬಾರದು ಎನ್ನುವ ಕಾರಣಕ್ಕಾಗಿ, ಲಕ್ಷ್ಮಿಗೆ ಯಾವ ಹಂತದಲ್ಲೂ ನೋವಾಗದಂತೆ ಕಾವಲು ಕಾದ ಹುಡುಗ ವೈಷ್ಣವ್. ಇದೀಗ ಲಕ್ಷ್ಮಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಹೆಂಡತಿಗಾಗಿ ತನ್ನ ನೋವನ್ನೂ ಲೆಕ್ಕಿಸದೇ, ಅಮ್ಮನ ಮಾತನ್ನು ಯಾವತ್ತೂ ಮೀರದ ವೈಷ್ಣವ್ ಈಗ ಪೂಜೆ, ವೃತ ಎಲ್ಲವನ್ನೂ ಮಾಡ್ತಿದ್ದಾನೆ. ಇದನ್ನ ನೋಡಿದ್ರೆ, ವೈಷ್ಣವ್ -ಲಕ್ಷ್ಮೀ (Lakshmi) ಬೆಸ್ಟ್ ಗಂಡ ಹೆಂಡ್ತಿ ಎಂದು ನೀವು ಹೇಳಬಹುದು.
ಇನ್ನೊಂದೆಡೆ ಝೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲೂ ಗೌತಮ್ ಮತ್ತು ಭೂಮಿಕಾ (Gautham and Bhoomika) ಮದುವೆಯಾಗಿದ್ದೆ ತಮ್ಮ ಮತ್ತು ತಂಗಿಗಾಗಿ. ಒಬ್ಬರನ್ನೊಬ್ಬರು ನೋಡಿದ್ರೆ ಆಗದ ಈ ಜೋಡಿ, ತಮ್ಮ ಮನೆಯವರಿಗಾಗಿ , ತಮ್ಮ- ತಂಗಿಯ ಮದುವೆ ನಡೆಯೋದಕ್ಕಾಗಿ ಇಷ್ಟವಿಲ್ಲಾಂದ್ರೂ ಮದುವೆಯಾದರು. ನಿಧಾನವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಸ್ನೇಹಿತರಾದರು, ಪ್ರೇಮಿಗಳೂ ಆದರು.
ಸದ್ಯದ ಎಪಿಸೋಡ್ ನೋಡಿದ್ರೆ, ಅವರಿಬ್ಬರ ಪ್ರೇಮ ಪುರಾಣ, ಒಬ್ಬರಿಗೊಬ್ಬರು ಗೌರವ ಕೊಡುವ ರೀತಿ. ತಪ್ಪಾದಾಗ ಮುನಿಸ್ಕೊಂಡು ದೂರ ಓಡದೆ, ಇಬ್ಬರು ಜೊತೆಯಾಗಿ ಕುಳಿತು ಆ ಸಮಸ್ಯೆ ಬಗೆಹರಿಸುವ ರೀತಿ ಇದೆಲ್ಲವನ್ನೂ ನೋಡಿದ್ರೆ ಪರ್ಫೆಕ್ಟ್ ಜೋಡಿಗಳಿವರು (perfect couple). ಇದ್ರೆ ಇವರಂತೆ ಇರಬೇಕು. ಪ್ರತಿಯೊಬ್ಬ ಜೋಡಿಗಳಿಗೂ ಗೌತಮ್ -ಭೂಮಿಕ ಆದರ್ಶ ಅನ್ನುತ್ತಿದ್ದಾರೆ ಜನ. ನೀವೇ ಹೇಳಿ ಈ ಜೋಡಿಗಳನ್ನ ನೋಡಿದ್ರೆ ನಿಮಗೂ ಹಾಗೇ ಅನಿಸೋದಿಲ್ವೆ?