ಡಿಕೆಡಿಯಲ್ಲಿ ಅರುಣ್ ಯೋಗಿರಾಜ್, ಜೈ ಶ್ರೀರಾಮ್ ಕೂಗುವಾಗ ಸದ್ಯ ನಾದಬ್ರಹ್ಮ ಇರ್ಲಿಲ್ಲವೆಂದ ನೆಟ್ಟಿಗರು!
ಝೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಕಾರ್ಯಕ್ರಮದಲ್ಲಿ ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಆಗಮಿಸಿದ್ದು, ನೆಟ್ಟಿಗರು ಆರಾಧ್ಯ ದೈವ ರಾಮ ಲಲ್ಲಾ ನಿರ್ಮಾತೃವನ್ನ ನೋಡಿ ಜೈ ಶ್ರೀರಾಮ್ ಎಂದಿದ್ದಾರೆ.
ಝೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ (Dance Karnataka Dance) ಕಾರ್ಯಕ್ರಮದಲ್ಲಿ ಡ್ಯಾನ್ಸ್ ಗಂಧ ಗಾಳಿಯೇ ಇಲ್ಲದ ಆರ್ಯವರ್ಧನ್ ಗುರೂಜಿ, ಒಳ್ಳೆ ಹುಡುಗ ಪ್ರಥಮ್, ಗಗನ ಭಾರಿ, ಮಿಮಿಕ್ರಿ ಗೋಪಿ ಸೇರಿ ಹಲವರು ಸ್ಪರ್ಧಿಸುವ ಮೂಲಕ ಸುದ್ದಿಯಾಗಿತ್ತು. ಜೊತೆಗೆ ಒಳ್ಳೊಳ್ಳೆ ಡ್ಯಾನ್ಸ್ ಟ್ಯಾಲೆಂಟ್ ಗಳನ್ನೂ ಕೂಡ ಪರಿಚರಿಸಿ ಜನಪ್ರಿಯತೆ ಪಡೆದಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar), ಜಾನಿ ಮಾಸ್ಟರ್, ವಿಜಯ್ ರಾಘವೇಂದ್ರ , ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಪ್ರತಿ ಬಾರಿ ಅತಿಥಿಗಳಾಗಿ ಸಿನಿಮಾ ತಾರೆಯರೇ ಆಗಮಿಸುತ್ತಿದ್ದರು. ಆದರೆ ಈ ಭಾರಿ ವಿಶೇಷವಾಗಿ ಅಯೋಧ್ಯೆ ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪೊ ಅರ್ಣ್ ಯೋಗಿರಾಜ್ ಅವರನ್ನು ಆಹ್ವಾನಿಸಿದ್ದಾರೆ.
ಈ ವಾರದ ಡ್ಯಾನ್ಸ್ ಕಾರ್ಯಕ್ರಮದ ಥೀಮ್, ಒಂದೊಂದು ರೀತಿಯ ಕಥೆಗಳನ್ನು ತಮ್ಮ ಡ್ಯಾನ್ಸ್ ಮೂಲಕ ಪ್ರದರ್ಶಿಸುವುದಾಗಿದ್ದು, ಒಬ್ಬರು ಸ್ಪರ್ಧಿ ಅಯೋಧ್ಯೆ ರಾಮ ಮಂದಿರ (Ayodhya Ram Mandir), ರಾಮ ಮೂರ್ತಿಯ ಕಥೆಯನ್ನು ವೇದಿಕೆ ಮೇಲೆ ಪ್ರಸ್ತುತ ಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಯೋಗಿರಾಜ್ ಅವರನ್ನು ಅತಿಥಿಗಳಾಗಿ ಬರಮಾಡಿಕೊಂಡಿದ್ದು, ಅರುಣ್ ರಾಮ ಲಲ್ಲಾ ನಿರ್ಮಾಣದ ಕುರಿತು ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಬಾಲ ರಾಮನ ಮೂರ್ತಿ ನಿರ್ಮಾಣದ ಬಗ್ಗೆ ಮಾತನಾಡಿದ ಅರುಣ್ (Arun Yogiraj), ನಾನು ಮಾಡ್ತಿದ್ರೆ ಅದು ತುಂಬಾನೆ ದೊಡ್ಡ ಜವಾಬ್ಧಾರಿ, ಅದನ್ನ ನನ್ನಿಂದ ಮಾಡೋದಕ್ಕೆ ಸಾಧ್ಯ ಆಗ್ತಿಲ್ಲಾಯ್ತು. ಆ ಜವಾಬ್ಧಾರಿನ ಕಡಿಮೆ ಮಾಡೋದಕ್ಕೆ , ಆ ಜವಾಬ್ಧಾರಿನ ರಾಮಲಲ್ಲ ಮೇಲೆ ಹಾಕ್ಬಿಟ್ಟೆ ಎಂದಿದ್ದಾರೆ ಅರುಣ.
ಅಷ್ಟೇ ಅಲ್ಲ ನಿಮಗೇನು ಬೇಕು ಅದನ್ನ ಮಾಡಿಸ್ಕೊಳಿ ಅಂತ ರಾಮನ ಮೇಲೆ ಜವಾಬ್ಧಾರಿ ಹೇರಿದ್ರಂತೆ ಅರುಣ್. ಯಾವ ದೇವಸ್ಥಾನದಲ್ಲೂ ಯಾವ ಶಿಲ್ಪಿಯ ಹೆಸರು ಕೂಡ ಇರೋದಿಲ್ಲ, ಯಾಕಂದ್ರೆ ಅದು ದೇವರು ಮಾಡಿಸ್ಕೊಂಡು ಹೋಗ್ತಾನೆ ಎನ್ನುವ ಭಾವನೆಯಿಂದ ನಿರ್ಮಾಣ ಮಾಡಲಾಗುತ್ತೆ. ನಾನು ಮಾಡಿದೆ ಎನ್ನುವ ಭಾವನೆಯಿಂದ ಅಲ್ಲ ಎಂದಿದ್ದಾರೆ ಅರುಣ್ ಯೋಗಿರಾಜ್.
ನಾನು ಈ ಭೂಮಿ ಮೇಲೆ ಹುಟ್ಟಿರೋದಕ್ಕೆ ಕಾರಣಾನೇ ರಾಮ ಲಲ್ಲ ನಿರ್ಮಾಣ ಮಾಡೋದಕ್ಕೆ ಇರಬಹುದೇನೋ ಎಂದು ಹೇಳುವ ಮೂಲಕ ಪ್ರತಿಯೊಬ್ಬರ ಮುಖದಲ್ಲೂ, ಮನಸಲ್ಲೂ ಗೌರವ, ಹೆಮ್ಮೆ ಮೂಡುವಂತೆ ಮಾಡಿದ್ದಾರೆ, ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್.
ಇನ್ನು ಝೀ ಕನ್ನಡದ ಡಿಕೆಡಿ ವೇದಿಕೆಯಲ್ಲಿ ಅರುಣ್ ಯೋಗಿರಾಜ್ ಅವರನ್ನ ನೋಡಿ, ಜನ ಇದೊಂದು ಝೀ ಒಳ್ಳೆ ಕೆಲ್ಸ ಮಾಡಿದಿರಾ ನೋಡಿ, ಅರುಣ್ ಯೋಗಿರಾಜ್ ಅವರ ಮಾತುಗಳು ಕೇಳಿ ತುಂಬಾ ಖುಷಿ ಆಯ್ತು ಎಂದು ಒಬ್ಬರು ಹೇಳಿದ್ರೆ, ಇನ್ನೊಬ್ಬರು ಅರುಣ್ ಯೋಗಿರಾಜ್ ಅವರನ್ನ ನೋಡಿ ಖುಷಿಯಾಯ್ತು ಎಂದಿದ್ದಾರೆ.
ಇನ್ನೊಬ್ಬರು ಕಾಮೆಂಟ್ ಮಾಡಿ ಝೀ ಕನ್ನಡ ವೇದಿಕೆ ಮೇಲೆ ಜೈ ಶ್ರೀರಾಮ್ (Jai Sri Ram) ಘೋಷಣೆ ಕೇಳಿ ಖುಷಿಯಾಯ್ತು. ಆದರೆ ನಾದ ಬ್ರಹ್ಮ ಅನ್ನೋ ಸಂಗೀತ ನಿರ್ದೇಶಕ ಬಂದಿದ್ರೆ ಏನಾಗ್ತಿತ್ತೋ ಏನೋ ಎಂದು ಬರೆದುಕೊಂಡಿದ್ದಾರೆ. ಇದನ್ನ ಹಲವು ಜನರು ಲೈಕ್ ಕೂಡ ಮಾದಿದ್ದಾರೆ.