ಶ್ರೀ ಗೌರಿಯಾಗಿ ಮತ್ತೆ ಕನ್ನಡ ಕಿರುತೆರೆಗೆ ಬಂದ ಕಮಲಿ ಚೆಲುವೆ ಅಮೂಲ್ಯ ಗೌಡ
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಸದ್ಯದಲ್ಲೇ ಪ್ರಸಾರವಾಗಲಿರುವುದು, ಈ ಸೀರಿಯಲ್ ಮೂಲಕ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ಅಮೂಲ್ಯ ಗೌಡ (Amulya Gowda), ಇದೀಗ ಬಹಳ ಸಮಯದ ನಂತರ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ.
ಹೌದು ಕಮಲಿ ನಂತರ ತೆಲುಗು ಕಿರುತೆರೆಯಲ್ಲಿ ಅಮೂಲ್ಯ ಬ್ಯುಸಿಯಾಗಿದ್ದರು, ನಂತರ ಕನ್ನಡ ಬಿಗ್ ಬಾಸ್ (Bigg Boss) ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು ಮತ್ತೆ ಕನ್ನಡ ಕಿರುತೆರೆಯಲ್ಲಿ ನೋಡಲು ಜನರು ಆತುರದಿಂದ ಕಾಯುತ್ತಿದ್ದರು. ಇದೀಗ ಆ ಸಮಯ ಬಂದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಶ್ರೀ ಗೌರಿಯಲ್ಲಿ ನಾಯಕಿಯಾಗಿ ಅಮೂಲ್ಯ ಗೌಡ ನಟಿಸಲಿದ್ದಾರೆ. ಸದ್ಯ ಪ್ರೋಮೋ ಬಿಡುಗಡೆಯಾಗಿದ್ದು, ವಿಭಿನ್ನ ಕಥೆಗೆ ಜನರು ಥ್ರಿಲ್ ಆಗಿದ್ದಾರೆ.
ಸೀರಿಯಲ್ ನಲ್ಲಿ ಅಮೂಲ್ಯ ಗೌರಿಯಾಗಿ ನಟಿಸಿದರೆ, ಆಕೆಯ ತಂದೆಯಾಗಿ ಸುನೀಲ್ ಪುರಾಣಿಕ್ (Sunil Puranik) ನಟಿಸಿದ್ದಾರೆ. ಇದು ಅಪ್ಪ-ಮಗಳ ಬಾಂಧವ್ಯದ ಕಥೆ ಅನ್ನೋದು ನೋಡಿದ್ರೇನೆ ಗೊತ್ತಾಗುತ್ತೆ.
ಇರುವೆಗೂ ಕಷ್ಟ ಆಗಬಾರದು ಅನ್ನೋ ಮುದ್ದು ಹುಡುಗಿ ಗೌರಿ. ಯಾವ ರೀತಿ ಲೆಕ್ಕ ಹಾಕಿದ್ರೂ ಇವಳೇ ಸರಿ ಅನ್ನೋ ಅಪ್ಪ. ನಿನ್ನ ನಾಲಿಗೆ ಕೆಂಪಾಗಿದೆ ಅಂದ್ರೆ ಬೇಗನೆ ನಿನ್ನ ಮದ್ವೆ ಆಗುತ್ತೆ ಎಂದು ಮುದ್ದು ಮಾಡೊ ಅಜ್ಜ.
ಪ್ರೀತಿಯಿಂದ ಎಲ್ಲಾ ಕೆಲಸ ಮಾಡಿಸಿಕೊಂಡು ಅಪ್ಪನನ್ನು ಪ್ರೀತಿಯಿಂದ ಕಟ್ಟು ಹಾಕೋ, ಅಪ್ಪನ ಉಸಿರು, ಮಗಳು, ಗೌರಿ. ತನಗೆ ಇಷ್ಟ ಆಗೋದನ್ನೆಲ್ಲಾ ಮುಕ್ತ ಮನಸಿನಿಂದ ಮಾಡುವ ಹುಡುಗಿ ಗೌರಿ.
ಬೆಳಗ್ಗೆ ಸಂತೋಷವನ್ನೆ ನೀಡುವ ಗೌರಿ, ರಾತ್ರಿ ಕಣ್ಣು ಮುಚ್ಚುವಾಗ ಮಾತ್ರ ಬದಲಾಗುತ್ತಾಳೆ. ಅಪ್ಪ ಮಗಳ ಕಾಲಿಗೆ ಸಂಕೋಲೆ ಹಾಕಿ, ಬೀಗ ಹಾಕಿ ಕಣ್ಣೀರು ಹಾಕುತ್ತಾನೆ. ಹಗಲು ನಗುವ ಮಗಳಿಗೆ ರಾತ್ರಿಯೆಲ್ಲಾ ಗ್ರಹಣ ಎನ್ನುತ್ತಾ… ಕುತೂಹಲಕಾರಿ ಕಥೆಯನ್ನು ಹೇಳಹೊರಟಿರೋ ಸೀರಿಯಲ್ ಬೇಗನೆ ಆರಂಭವಾಗಲಿ ಎಂದು ಅಭಿಮಾನಿಗಲು ಕಾಯ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.