Exclusive Photos: ತಾಳಿ ಕಟ್ಟಲು ಅನುಮತಿ ಕೇಳಿದ ಅರುಣ್ ಗೌಡ; ನಾಚಿ ನೀರಾದ ರಜಿನಿ!
ಅಮೃತವರ್ಷಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ ನಟಿ ರಜಿನಿ ಅವರು ಮದುವೆಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮದುವೆಯಾಗಿದೆ, ಮದುವೆಯ ಸುಂದರ ಫೋಟೋಗಳು ಇವೆ. ಫೋಟೋಗಳನ್ನು ನೋಡಿ..

ಅಮೃತವರ್ಷಿಣಿ ಸೀರಿಯಲ್ ನಟಿ
ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ ಅವರು ಸರಳವಾಗಿ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅರುಣ್ ಗೌಡ ಯಾರು?
ಅರುಣ್ ಗೌಡ ಅವರು ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.
ಖ್ಯಾತ ಕಿರುತೆರೆ ನಟಿ
ನಟಿ ರಜಿನಿ ಅವರು ಕನ್ನಡ ಕಿರುತೆರೆಯಲ್ಲಿ ನಟಿ, ಡ್ಯಾನ್ಸರ್ ಆಗಿ ಹೆಸರು ಮಾಡಿದ್ದಾರೆ.
ಅಮೃತವರ್ಷಿಣಿ ತಂಡ
ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದ ಸ್ವಾತಿ ರಾಯಲ್, ಅನಿಲ್, ರಕ್ಷಿತ್, ಅಮೃತಧಾರೆ ಧಾರಾವಾಹಿ ನಟ ಆನಂದ್ ದಂಪತಿ ಕೂಡ ಈ ಮದುವೆಗೆ ಬಂದಿದ್ದರು.
ಅದೇ ಸ್ನೇಹ
ಅಮೃತವರ್ಷಿಣಿ ಧಾರಾವಾಹಿ ಮುಗಿದು ಎಷ್ಟೋ ವರ್ಷಗಳಾಗುತ್ತ ಬಂತು. ಆದರೂ ಇವರ ಸ್ನೇಹ ಹಾಗೆ ಇದೆ.
ನಟ ರಕ್ಷತ್ ಆಗಮನ
ಅಮೃತವರ್ಷಿಣಿ ಧಾರಾವಾಹಿ ನಟ ರಕ್ಷತ್ ಅವರು ‘ಯಜಮಾನಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅಪರೂಪಕ್ಕೆ ಅವರು ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ.
ಕಿರುತೆರೆ ಗಣ್ಯರು ಭಾಗಿ
ಈ ಮದುವೆಗೆ ಕಿರುತೆರೆ ತಾರೆಯರು ಭಾಗಿಯಾಗಿದ್ದಾರೆ. ಎಲ್ಲರೂ ರಜಿನಿ ಮದುವೆಯಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.
ತಾರೆಯರ ಬಳಗ
ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿ ರಜಿನಿ ಅವರು ಸುಂದರವಾದ ಸಂದೇಶ ನೀಡಿದ್ದಾರೆ.
ತಾಳಿ ಕಟ್ಟುವ ಸಮಯ
ರಜಿನಿ ಹಾಗೂ ಅರುಣ್ ಗೌಡ ಅವರು ಮದುವೆಯಾಗುವ ಸುಂದರ ಸಮಯ. ಎಲ್ಲರ ಅನುಮತಿ ಪಡೆದು ಅರುಣ್ ತಾಳಿ ಕಟ್ಟಿದ್ದಾರೆ.
ನಾಚಿ ನೀರಾದ ರಜಿನಿ
ಅರುಣ್ ಗೌಡ ಅವರು ತಾಳಿ ಕಟ್ಟುವಾಗ ಅನುಮತಿ ಪಡೆದಿದ್ದಾರೆ. ಆಗ ರಜಿನಿ ನಾಚಿ ನೀರಾಗಿದ್ದಾರೆ.
ಶುಭ ಹಾರೈಕೆ
ಹೊಸ ಜೀವನಕ್ಕೆ ಕಾಲಿಟ್ಟ ರಜಿನಿ, ಅರುಣ್ ಗೌಡ ಅವರಿಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಾರೈಸಿದ್ದಾರೆ.