- Home
- Entertainment
- TV Talk
- ಅಣ್ಣಾವ್ರ ಮನೆಯಲ್ಲಿ ಕುಳಿತ 'ಅಮೃತಧಾರೆ' ಗೌತಮ್ ದಿವಾನ್; ಏನ್ ಕ್ಯಾಪ್ಶನ್ ಕೊಟ್ಟಿದಾರೆ ನೋಡಿ..!
ಅಣ್ಣಾವ್ರ ಮನೆಯಲ್ಲಿ ಕುಳಿತ 'ಅಮೃತಧಾರೆ' ಗೌತಮ್ ದಿವಾನ್; ಏನ್ ಕ್ಯಾಪ್ಶನ್ ಕೊಟ್ಟಿದಾರೆ ನೋಡಿ..!
ರಾಜೇಶ್ ನಟರಂಗ ಅವರು ಶೂಟಿಂಗ್ ಬಿಡುವಿನ ವೇಳೆ ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮನೆಗೆ ತೆರಳಿ ಕೆಲ ಗಂಟೆಗಳನ್ನ ಕಳೆದಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಕೂಡಾ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ಪೋಷಕ ಪಾತ್ರಗಳ ಮೂಲಕ ಬಣ್ಣದ ಲೋಕದಲ್ಲಿ ಮೋಡಿ ಮಾಡಿರುವ ರಾಜೇಶ್ ನಟರಂಗ ಇದೀಗ ಗೌತಮ್ ದಿವಾನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ಇನ್ನು ರಾಜೇಶ್ ನಟರಂಗ ಅವರು ಶೂಟಿಂಗ್ ಬಿಡುವಿನ ವೇಳೆ ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮನೆಗೆ ತೆರಳಿ ಕೆಲ ಗಂಟೆಗಳನ್ನ ಕಳೆದಿದ್ದಾರೆ.
ನಿರಂತರ ಚೈತನ್ಯ, ಅಣ್ಣಾವ್ರ ಮನೆಯಲ್ಲಿ.. ಭಕ್ತನಾಗಿ ಧನ್ಯನಾದೆ.. ಎಂಬ ಅಡಿಬರಹದ ಜೊತೆಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಇನ್ನು ರಾಜೇಶ್ ಅವರ ಸರಳತೆ, ಅಭಿನಯ ಸೇರಿದಂತೆ, ಡಾ.ರಾಜ್‌ಕುಮಾರ್ ಮೇಲೆ ಇಟ್ಟಿರೋ ಗೌರವ, ಪ್ರೀತಿ ಅಭಿಮಾನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.
ರಾಜೇಶ್ ನಟರಂಗ ಅವರು ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟ. ನಟನೆ ಮಾತ್ರವಲ್ಲದೇ, ಒಳ್ಳೆ ಬರಹಗಾರರು ಹೌದು. ಹಲವು ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ.
ಸದ್ಯ ಗೌತಮ್ ದಿವಾನ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಜೇಶ್ ನಟರಂಗ ನಿರ್ಮಾಪಕರಾಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿನ್ನಿಂದಲೇ ಧಾರಾವಾಹಿಯನ್ನು ನಿರ್ಮಿಸಿದ್ದರು.