ಅಮೃತಧಾರೆ ತಂಡ ಸೇರಿದ ರಾಧಾ… ರಾಮಾಚಾರಿ ತಂಗಿ ಪಾತ್ರಕ್ಕೆ ಶೀಲಾ ಎಂಟ್ರಿ
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ತಂಗಿ ಶೃತಿ ಪಾತ್ರಕ್ಕೆ ಈಗ ಹೊಸ ನಟಿಯ ಎಂಟ್ರಿಯಾಗಿದೆ. ಯಾರು ಈಕೆ? ಹಿಂದೆ ನಟಿಸುತ್ತಿದ್ದ ಶ್ರುತಿ ಎಲ್ಲೋದ್ರು ಫುಲ್ ಡಿಟೇಲ್ಸ್ ಇಲ್ಲಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಮಾಚಾರಿ. ಸದ್ಯ ಧಾರಾವಾಹಿಯಲ್ಲಿ ಚಾರು ತನ್ನ ಗಂಡ ರಾಮಾಚಾರಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರೋದಕ್ಕೆ ಸತತ ಪ್ರಯತ್ನ ಮಾಡ್ತಿದ್ದಾಳೆ.
ಅದು ಬಿಡಿ, ವಿಷ್ಯ ಏನಂದ್ರೆ ಇಲ್ಲಿವರೆಗೆ ರಾಮಾಚಾರಿ ತಂಗಿ ಶ್ರುತಿ ಪಾತ್ರದಲ್ಲಿ ರಾಧಾ ಭಗವತಿ (Radha Bhagavati)ನಟಿಸುತ್ತಿದ್ದರು. ರಾಮಾಚಾರಿಯ ಪ್ರೀತಿಯ ತಂಗಿಯಾಗಿ, ಚಾರುವನ್ನು ಕಂಡರೆ ಆಗದ, ಬಳಿಕ ಅತ್ತಿಗೆಯ ಪ್ರೀತಿ ಕಂಡ ಪಾತ್ರ ಶ್ರುತಿಯದ್ದು.
ರಾಧಾ ಈ ಪಾತ್ರವನ್ನು ತುಂಬಾನೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಶ್ರುತಿ ಪಾತ್ರವನ್ನು ಜನರು ಸಹ ಮೆಚ್ಚಿಕೊಂಡಿದ್ದರು. ಅಪ್ಪ ಹಾಕಿದ ಗೆರೆಯನ್ನು ದಾಟನ್ನು ಸಂಸ್ಕಾರವಂತ ಮಗಳಾಗಿ ರಾಧಾ ಜನಕ್ಕೆ ಇಷ್ಟವಾಗಿದ್ದರು.
ಆದರೆ ರಾಧಾ ಕೆಲವು ಸಮಯದಿಂದ ಸೀರಿಯಲ್ ನಲ್ಲಿ ಕಾಣಿಸಿಕೊಂಡೇ ಇರಲಿಲ್ಲ. ಕಾರಣ ಅವರು ರಾಮಾಚಾರಿ ಸೀರಿಯಲ್ ಬಿಟ್ಟು ಅಮೃತಧಾರೆ ತಂಡ ಸೇರಿಕೊಂಡಿದ್ದರು. ಅಮೃತಧಾರೆಯಲ್ಲಿ (Amruthadhare) ಕೆಲಸದವನ ಮೊಮ್ಮಗಳು ಮಲ್ಲಿಯಾಗಿ ಅಭಿನಯಿಸುತ್ತಿದ್ದಾರೆ.
ಇದೀಗ ರಾಮಾಚಾರಿ ಸೀರಿಯಲ್ ನಲ್ಲೂ ಶ್ರುತಿ ಪಾತ್ರಕ್ಕೆ ಬೇರೋಬ್ಬ ನಟಿಯ ಆಯ್ಕೆಯೂ ಆಗಿದ್ದು, ಈಗಾಗಲೆ ತೆರೆ ಮೇಲೆ ಕಾಣಿಸಿಕೊಂಡಿದ್ದು ಆಗಿದೆ. ಆದರೆ ಯಾರು ಶ್ರುತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಎನ್ನುವ ಪ್ರಶ್ನೆ ನಿಮ್ಮದಾಗಿದ್ರೆ ನಾವ್ ಹೇಳ್ತೀವಿ ಕೇಳಿ.
ಶ್ರುತಿ ಪಾತ್ರದಲ್ಲಿ ಇನ್ನು ಮುಂದೆ ನಿಮ್ಮ ಮುಂದೆ ಬರಲಿದ್ದಾರೆ ಶೀಲಾ (Sheela). ಕಳೆದ ಹಲವು ವರ್ಷಗಳಲ್ಲಿ ಕಿರುತೆರೆಯಲ್ಲಿ ಜೊತೆಗೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿರುವ ಶೀಲಾ, ಇದಿಗ ಶ್ರುತಿಯಾಗಿ ಕಾಣಿಸಿಕೊಂಡಿದ್ದಾರೆ.
ಶೀಲಾ ಈ ಹಿಂದೆ ಇಂತಿ ನಿಮ್ಮ ಆಶಾದಲ್ಲಿ ಊರ್ಮಿಯಾಗಿ, ಗಿಣಿರಾಮ ಸೀರಿಯಲ್ ನಲ್ಲಿ ಸೀಮಾ ಆಗಿ, ರಾಧಿಕಾ ಸೀರಿಯಲ್ ನಲ್ಲಿ ಅನಘ ಆಗಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಮುಂದೆ ರಾಮಾಚಾರಿಯಲ್ಲಿ ಶ್ರುತಿಯಾಗಿ ನಟಿಸಲಿದ್ದಾರೆ.