ಉಪಾಧ್ಯಕ್ಷ, ಹಿಟ್ಲರ್ ಕಲ್ಯಾಣ ಟೀಮ್ ಜೊತೆ ಮಲೈಕಾ ವಸುಪಾಲ್ ಅದ್ಧೂರಿ ಬರ್ತಡೇ
ಹಿಟ್ಲರ್ ಕಲ್ಯಾಣ ಸೀರಿಯಲ್ ಮತ್ತು ಉಪಾಧ್ಯಕ್ಷ ಸಿನಿಮಾ ಮೂಲಕ ಜನರನ್ನು ರಂಜಿಸಿದ ನಟಿ ಮಲೈಕಾ ವಸುಪಾಲ್ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಅದರ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಮಲೈಕಾ ವಸುಪಾಲ್ (Malaika Vasupal), ಎಡವಟ್ಟು ಲೀಲಾ ಎಂದೇ ಜನಪ್ರಿಯತೆ ಪಡೆದು, ಜನರ ಫೆವರಿಟ್ ನಾಯಕಿ ಕೂಡ ಆದರು.
ಮೊದಲ ಸೀರಿಯಲ್ ಮೂಲಕವೆ ಗುರುತಿಸಿಕೊಂಡ ಮಲೈಕಾ ಬಳಿಕ ಹಿರಿತೆರೆಗೂ ಎಂಟ್ರಿ ಕೊಟ್ಟರು, ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಸಿನಿಮಾದಲ್ಲಿ ನಟಿಸುವ ಮೂಲಕ , ಅಲ್ಲೂ ಜನರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾದರು.
ಈ ಮಿಲ್ಕಿ ಬ್ಯೂಟಿ ಮಲೈಕಾ ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಂಡಿದ್ದು, ಅದರ ಸಂಭ್ರಮದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಲೈಕಾ ತಮ್ಮ ಸೀರಿಯಲ್ ಹಿಟ್ಲರ್ ಕಲ್ಯಾಣದ (Hitler Kalyana) ಸಹ ನಟ-ನಟಿಯರು ಮತ್ತು ಉಪಾಧ್ಯಾಕ್ಷ ಸಿನಿಮಾದ ನಟರು, ಸಿನಿಮಾ ತಂಡ ಮತ್ತು ತಮ್ಮ ಫ್ಯಾಮಿಲಿ ಜೊತೆ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿದ್ದರು.
ಬೆಣ್ಣೆ ನಗರಿ ದಾವಣಗೆರೆಯ ಈ ಮಿಲ್ಕಿ ಬ್ಯೂಟಿ ಹುಟ್ಟು ಹಬ್ಬಕ್ಕೆ ನಟ ಚಿಕ್ಕಣ್ಣ, ದರ್ಶಿನಿ, ವಿದ್ಯಾ ಮೂರ್ತಿ, ನೇಹಾ ಪಾಟೀಲ್, ಪದ್ಮಿನಿ, ರಾಕೇಶ್ ಪೂಜಾರಿ, ದೀಪಿಕಾ ಆರಾಧ್ಯ, ವಿನಯ್ ಕಶ್ಯಪ್ ಮೊದಲಾದ ನಟರು ಆಗಮಿಸಿ ಶುಭ ಕೋರಿದ್ದರು.
ಮಲೈಕಾ ಕೆಂಪು ಶಾರ್ಟ್ ಡ್ರೆಸ್ ನಲ್ಲಿ ಮಿಂಚಿದರೆ, ಅವರಿಗೆ ಸಾತ್ ನೀಡಿ ಮಲೈಕಾ ತಾಯಿ ಕೂಡ ಕೆಂಪು ಚೂಡಿದಾರ್ ಧರಿಸಿದ್ದರು. ಉಳಿದವರು ಕಪ್ಪು ಬಣ್ಣದ ಔಟ್ ಫಿಟ್ ನಲ್ಲಿ ಬರ್ತ್ ಡೇ ಥೀಮ್ ಗೆ ಕಳೆ ನೀಡಿದರು.
ಇನ್ನು ಮಲೈಕಾ ಬಗ್ಗೆ ಹೇಳೊದಾದ್ರೆ ದಾವಣಗೆರೆಯ ಈ ಹುಡುಗಿ ಇಂಜಿನಿಯರಿಂಗ್ (engineering)ಪದವೀಧರೆ, ಆದರೆ ಬಾಲ್ಯದಿಂದಲೂ ನಟಿಯಾಗಬೇಕೆಂದು ಕನಸು ಹೊತ್ತುಕೊಂಡು ಬಂದ ನಟಿ ಇವರು.
ನಟಿಯಾಗಲು ಅವಕಾಶಕ್ಕಾಗಿ ಅವಾಗವಾಗ ಬೆಂಗಳೂರಿಗೆ ಬಂದು ಸಾಕಷ್ಟು ಆಡಿಶನ್ ಕೊಟ್ಟು ಹೋಗ್ತಿದ್ದರಂತೆ. ಆ ಸಮಯದಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ಗೆ ಮುಗ್ಧಪಾತ್ರದ ಹುಡುಕಾಟ ನಡೆಸುವಾಗ ಸಿಕ್ಕಿದ್ದೆ ಈ ಸುಂದರಿ, ಉಳಿದದ್ದು ಇತಿಹಾಸ.
ಇದೀಗ ಉಪಾಧ್ಯಕ್ಷ ಸಿನಿಮಾದಲ್ಲಿ ಉಪಾಧ್ಯಾಕ್ಷನ ಪ್ರೇಯಸಿಯಾಗಿ ಮಿಂಚುತ್ತಿರುವ ಹುಡುಗಿ ಮಲೈಕಾಗೆ ಬರ್ತ್ ಡೇ ಸಂಭ್ರಮದ ಜೊತೆಗೆ ಸಿನಿಮಾ 25 ದಿನಗಳ ಯಶಸ್ವಿ ಪ್ರದರ್ಶನ ಕಂಡ ಖುಷಿಯಲ್ಲೂ ತೇಲುತ್ತಿದ್ದಾರೆ.
ಮಲೈಕಾ ಬರ್ತ್ ಡೇ ಫೋಟೊಗಳನ್ನು ಹಂಚಿಕೊಂಡು, ಈ ಸುಂದರ ಸಂಜೆಗೆ ಧನ್ಯವಾದಗಳು ಎಂದು ಬರೆದಿದ್ದಾರೆ. ನೆಚ್ಚಿನ ನಟಿಯ ಬರ್ತ್ ಡೇ ಫೋಟೋ ನೋಡಿ ಅಭಿಮಾನಿಗಳೂ ಸಂಭ್ರಮಿಸಿದ್ದು, ನಮ್ಮ ಫ್ಯೂಚರ್ ಸ್ಯಾಂಡಲ್ ವುಡ್ ಕ್ವೀನ್ ಇವರೇನೆ ಎಂದು ಹೊಗಳಿದ್ದಾರೆ.