ಟ್ಯಾಟೂ ಕಾಣಿಸುವಂತೆ ಕ್ಲೋಸ್ ಅಪ್ ಫೋಟೊ ಶೇರ್ ಮಾಡಿ Pick one amongst these ಎಂದ ಜ್ಯೋತಿ ರೈ
ಇಂಟರ್ನೆಟ್ ಸೆನ್ಸೇಶನ್ ಆಗಿರುವ ನಟಿ ಜ್ಯೋತಿ ರೈ ಇದೀಗ ಎದೆ ಮೇಲಿನ ಬಟರ್ ಫ್ಲೈ ಟ್ಯಾಟೂ ಕಾಣಿಸುವಂತೆ ಫೋಟೋ ಶೇರ್ ಮಾಡಿ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ತಮ್ಮ ಹಾಟ್ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುವ ಬೆಡಗಿ ಅಂದ್ರೆ ಅದು ಕನ್ನಡ, ತೆಲುಗು ಸೀರಿಯಲ್ ಗಳಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಜ್ಯೋತಿ ರೈ.
ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಸೀರಿಯಲ್ (serial) ಸಿನಿಮಾಗಳಲ್ಲಿ ಗೌರಮ್ಮನಾಗಿ ಜನಪ್ರಿಯತೆ ಪಡೆದಿದ್ದ ಜ್ಯೋತಿ, ಇದೀಗ ಸಿನಿಮಾ ವೆಬ್ ಸೀರೀಸ್ ಗಳಲ್ಲಿ ಪೂರ್ತಿ ಬ್ಯುಸಿಯಾಗಿದ್ದಾರೆ.
ಕನ್ನಡದಲ್ಲಿ ಗೌರಮ್ಮನಂತಹ ಪಾತ್ರಗಳಲ್ಲೇ ಕಾಣಿಸಿಕೊಂಡು, ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ ಇದೀಗ ಗ್ಲಾಮರಸ್ ಆಗಿ ಬದಲಾಗಿದ್ದು, ಮಾತ್ರ ಅಭಿಮಾನಿಗಳಿಗೆ ಶಾಕ್ ನೀಡಿತ್ತು, ಮಿನಿ ಸ್ಕರ್ಟ್, ಬಿಕಿನಿಯಲ್ಲಿ ಪೋಸ್ ನೀಡುತ್ತಾ ಫೋಟೋ ಶೇರ್ ಮಾಡುತ್ತಿರುವ ಜ್ಯೋತಿಯನ್ನು (Jyothi Rai) ನೋಡಿದ್ರೆ, ಇವರೇನ ಮೊದಲಿನ ನಟಿ ಎನ್ನುವಷ್ಟು ಬದಲಾಗಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ನಟಿ ಜ್ಯೋತಿ ರೈ ನೋ ಮೋರ್ ಸೀಕ್ರೆಟ್, ಪ್ರೆಟಿ ಗರ್ಲ್ ಎನ್ನುವ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದು, ಅದಕ್ಕೆ ಸಂಬಂಧಿಸಿದ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದಂತೂ ನಿಜ.
ಇನ್ನೂ ಇತ್ತೀಚೆಗಷ್ಟೇ ನಟಿ ತಮ್ಮ ಎದೆಯ ಮೇಲೆ ಬಟರ್‌ಫ್ಲೈ (butterfly) ಜೊತೆಗೆ ಹೋಪ್ ಅನ್ನೋ ಪದವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸುವ ವಿಡೀಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಗ, ಭಾರಿ ಸುದ್ದಿಯಾಗಿತ್ತು. ಜನರಂತೂ ಟ್ಯಾಟೂ ಆರ್ಟಿಸ್ಟ್ ತುಂಬಾ ಲಕ್ಕಿ ಎಂದೆಲ್ಲಾ ಹೇಳಿದ್ದರು.
ಇದೀಗ ತನ್ನ ಎದೆಯ ಮೇಲಿನ ಟ್ಯಾಟೂ ಸರಿಯಾಗಿ ಕಾಣುವಂತೆ ಕ್ಲೋಸ್ ಅಪ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಜ್ಯೋತಿ ರೈ, ಪಿಕ್ ಒನ್ ಅಮಂಗ್ ದೀಸ್ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಅಪ್ಸರೆ ತರ ಕಾಣಿಸ್ತಿದ್ದೀರಾ, ಸೆಕ್ಸಿ, ಹಾಟ್, ಬೋಲ್ಡ್ ಲುಕ್, ನೈಸ್ ಟ್ಯಾಟೂ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ತಮ್ಮ ಕರಿಯರ್ ಗಿಂತ ಹೆಚ್ಚಾಗಿ ತಮ್ಮ ಪರ್ಸನಲ್ ಲೈಫ್ ಮತ್ತು ಮೇಕ್ ಓವರ್ ನಿಂದಾನೇ ಸುದ್ದಿಯಾಗಿರುವ ಮಂಗಳೂರು ಬೆಡಗಿ ಜ್ಯೋತಿ ರೈ, ಅವರ ವೆಬ್ ಸೀರೀಸ್ ಗಳು ಇನೆಷ್ಟು ಬೋಲ್ಡ್ ಆಗಿರಬಹುದು ಅಂತಿದ್ದಾರೆ ಜನ. ಎಲ್ಲವೂ ಸೀರೀಸ್ ರಿಲೀಸ್ ಆದಮೇಲೆನೆ ಗೊತ್ತಾಗುತ್ತೆ.