ನಟ ನಾಗಾರ್ಜುನ ಸ್ವೆಟರ್ 2 ಲಕ್ಷ, ಶೂ 71 ಸಾವಿರ; ದುಡ್ಡಿಗೆ ಬೆಲೆ ಇಲ್ವಾ ಎಂದು ಟೀಕೆ!
ವಾರ ವಾರಕ್ಕೂ ದುಬಾರಿ ಉಡುಪು ಧರಿಸುತ್ತಿರುವ ನಾಗಾರ್ಜುನ. ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಂಡ ನೆಟ್ಟಿಗರು......

ಟಾಲಿವುಡ್ ಸಿಂಪಲ್ ಹಾಗೂ ಹೂಮ್ಲಿ ಸ್ಟಾರ್ ನಾಗಾರ್ಜುನ್ ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ.
ವೀಕೆಂಡ್ ಎಪಿಸೋಡ್‌ಗೆ ನಾಗಾರ್ಜುನ ಏನು ಧರಿಸುತ್ತಾರೆ ಅನ್ನೋದು ನೆಟ್ಟಿಗರಿಗೆ ಕ್ಯೂರಿಯಾಸಿಟಿ ಇದ್ದೇ ಇರುತ್ತದೆ. ನೋಡಿದ ಮೇಲೆ ಶಾಕ್ ಆಗೋದು ಕ್ಯಾರಂಟಿ.
ಹೌದು! ಕಳೆದ ವಾರ ನಾಗಾರ್ಜುನ ಧರಿಸಿದ ಕಲರ್ ಕಲರ್ ಶರ್ಟ್ Valentino ಅನ್ನೋ ಬ್ರ್ಯಾಂಡ್‌ಗೆ ಸೇರಿದ್ದು. ಇದರ ಬೆಲೆ 1,29,146 ರೂಪಾಯಿ ಎಂದು ಟಾಲಿವುಡ್ ಕ್ಲಾಸೆಟ್ ಪೋಸ್ಟ್ ಹಾಕಿದೆ.
ಶರ್ಟ್ ದುಬಾರಿ ಅಂದ್ಮೇಲೆ ಅದಕ್ಕೆ ಮ್ಯಾಚ್ ಆಗುವ ಶೂ? ನೀಲಿ ಬಣ್ಣದ ಶೂ Fendi ಅನ್ನೋ ಬ್ರ್ಯಾಂಡ್‌ಗೆ ಸೇರಿದ್ದು, ಇದರ ಬೆಲೆ 71, 096 ರೂಪಾಯಿ ಎಂದು ಟಾಲಿವುಡ್ ಕ್ಲಾಸೆಟ್ ಪೋಸ್ಟ್ ಹಾಕಿದೆ.
ಮತ್ತೊಂದು ವಾರ ಸಖತ್ ಚಳಿ ಇತ್ತು ಎಂದು ಸ್ವೆಟರ್ ಧರಿಸಿದ್ದರು. ಬಿಳಿ ಬಣ್ಣದ ಸ್ವೆಟರ್‌ನ ಮೇಲೆ ಮುಖದ ಚಿತ್ರವಿದೆ. ನೋಡಲು ಸಖತ್ ಕ್ಲಾಸಿಯಾಗಿದೆ.
ಈ ಸ್ವೆಟರ್ Louis Vuitton ಅನ್ನೋ ಬ್ರ್ಯಾಂಡ್‌ಗೆ ಸೇರಿದ್ದು...ಕ್ಯಾಶ್ಮೀರಿ ವುಲ್ ಕ್ರೂನೆಕ್ ಸ್ವೆಟರ್ ಇದಾಗಿದ್ದು, ಇದರ ಬೆಲೆ 1,92,635 ರೂಪಾಯಿಗಳು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.