- Home
- Entertainment
- TV Talk
- ಯುಟ್ಯೂಬ್‌ನಲ್ಲಿರೋ 7 ಸಸ್ಪೆನ್ಸ್, ಹಾರರ್ ಶಾರ್ಟ್ ಮೂವೀಸ್; ಅಚ್ಚರಿಗಳ ಜೊತೆ ಥ್ರಿಲ್ ಹುಟ್ಟಿಸೋ ಕಿರುಚಿತ್ರಗಳು
ಯುಟ್ಯೂಬ್‌ನಲ್ಲಿರೋ 7 ಸಸ್ಪೆನ್ಸ್, ಹಾರರ್ ಶಾರ್ಟ್ ಮೂವೀಸ್; ಅಚ್ಚರಿಗಳ ಜೊತೆ ಥ್ರಿಲ್ ಹುಟ್ಟಿಸೋ ಕಿರುಚಿತ್ರಗಳು
Horror Short Movies: ಸಮಯವಿಲ್ಲದೆಯೇ ಭಯಾನಕ ಅನುಭವ ಪಡೆಯಲು YouTubeನಲ್ಲಿ ಲಭ್ಯವಿರುವ ಕೆಲವು ಶಾರ್ಟ್ ಹಾರರ್ ಸಿನಿಮಾಗಳಿವು. ಕಡಿಮೆ ಸಮಯದಲ್ಲಿ ರೋಮಾಂಚನಗೊಳಿಸುವ ಈ ಸಿನಿಮಾಗಳು ಉಚಿತವಾಗಿ ಲಭ್ಯವಿದೆ.
19

Horror Short Movies
ಇಂದು ಬಹುತೇಕರ ಬಳಿ ಸಿನಿಮಾ ನೋಡಲು ಸಹ ಸಮಯ ಇರಲ್ಲ. ಓಟಿಟಿ ಪ್ಲಾಟ್‌ಫಾರಂಗಳ ಆಕ್ಸೆಸ್ ಸಹ ಇಂದು ದುಬಾರಿಯಾಗಿದೆ. ಸಬ್‌ಸ್ಕ್ರಿಪ್ಷನ್ ಮಾಡಿಕೊಂಡರೂ ಸಿನಿಮಾ, ವೆಬ್ ಸಿರೀಸ್ ನೋಡಲು ಸಹ ಆಗಲ್ಲ. ಇಂದು ನಾವು ನಿಮಗೆ YouTube ನಲ್ಲಿ ಲಭ್ಯವಿರುವ ಈ ಶಾರ್ಟ್ ಹಾರರ್ ಸಿನಿಮಾಗಳ ಬಗ್ಗೆ ಹೇಳುತ್ತಿದ್ದೇವೆ.
29
ಅಡುಗೆ ಮಾಡುವಾಗ, ಪ್ರಯಾಣದ ವೇಳೆ ಈ ಶಾರ್ಟ್ ಮೂವಿಗಳನ್ನು ನೋಡಿ ಮುಗಿಸಬಹುದು. ಕಡಿಮ ಸಮಯದಲ್ಲಿಯೇ ಈ ಸಿನಿಮಾಗಳು ನಿಮ್ಮನ್ನು ರೋಮಾಂಚನಗೊಳಿಸುತ್ತವೆ. ಇದಕ್ಕಾಗಿ ನೀವು ಯಾವುದೇ ಹಣ ಖರ್ಚು ಸಹ ಮಾಡಬೇಕಾಗಿಲ್ಲ.
39
1.Curve (2021)
ನಿಗೂಢ ಮತ್ತು ಆಳವಾದ ಗುಂಡಿಯ ಗೋಡೆಗೆ ಅಂಟಿಕೊಂಡ ಯುವತಿ ನಿಮಗೆ ಕಾಣಿಸುತ್ತಾಳೆ. ಕೆಳಗೆ ನೋಡಿದ್ರೆ ಆಳವಾದ ಕತ್ತಲು ಕಾಣಿಸುತ್ತದೆ. ಇಲ್ಲಿಂದ ಆ ಯುವತಿ ಬದುಕಿ ಬರುತ್ತಾಳೆ ಅನ್ನೋದು ಸ್ಟೋರಿ. ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ನಿಮ್ಮನ್ನು ಭಯಬೀಳಿಸುತ್ತದೆ.
49
2.Man On a Train (2021)
ಯುವತಿಯೊಬ್ಬಳು ಏಕಾಂಗಿಯಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾಳೆ. ಪ್ರಯಾಣದಲ್ಲಿ ವ್ಯಕ್ತಿಯೋರ್ವ ಆಕೆಯನ್ನು ಗುರಾಯಿಸಿ ನೋಡುತ್ತಿರೋದು ಯುವತಿಯ ಗಮನಕ್ಕೆ ಬರುತ್ತದೆ. ಸಮಯದಿಂದ ಸಮಯಕ್ಕೆ ಇದು ಆಕೆಯಲ್ಲಿ ಭಯ ಹುಟ್ಟಿಸುತ್ತದೆ. ಮುಂದೆ ಏನಾಗುತ್ತೆ ಅನ್ನೋದನ್ನು ಯುಟ್ಯೂಬ್‌ನಲ್ಲಿ ನೋಡಬಹುದು.
59
3.Other Side of the Box (2020)
ದಂಪತಿಗೆ ಒಂದು ಹಳೆಯ ಬಾಕ್ಸ್ ಸಿಗುತ್ತದೆ. ಈ ಬಾಕ್ಸ್ ಓಪನ್ ಮಾಡಿದ ಬಳಿಕ ದಂಪತಿಯ ಜೀವನದಲ್ಲಿ ಭಯಾನಕ ಅನುಭವಗಳು ಉಂಟಾಗುತ್ತವೆ. ಚಿತ್ರದ ಪ್ರತಿ ದೃಶ್ಯಗಳು ನಿಮ್ಮಲ್ಲಿ ಹೊಸತನದ ಭಯವನ್ನು ಸೃಷ್ಟಿಸುತ್ತದೆ.
69
4.Portrait of God (2022)
ಧಾರ್ಮಿಕ ನಂಬಿಕೆ ಮತ್ತು ಅಜ್ಞಾತ ಭಯದ ಆಧಾರಿತ ಕಿರುಚಿತ್ರವೇ Portrait of God. ಹುಡುಗಿಯೊಬ್ಬಳಳು ನಿಗೂಢವಾದ ವರ್ಣಚಿತ್ರವನ್ನು ನೋಡುತ್ತಾಳೆ, ಅದನ್ನು 'ದೇವರ ಭಾವಚಿತ್ರ' ಎಂದು ಕರೆಯಲಾಗುತ್ತದೆ. ಈ ಫೋಟೋ ನೋಡಿದ ಬಳಿಕ ಆಕೆಯ ಜೀವನದಲ್ಲಿ ಏನಾಗುತ್ತೆ ಎಂಬುವುದೇ ಸ್ಟೋರಿಯ ಒನ್ ಲೈನ್ ಕಥೆ.
79
5.The Ballerina (2021)
ನಿಮಗೆ ಪ್ರತಿಬಿಂಬ ಮತ್ತು ನೆರಳು ಕಂಡ್ರೆ ಭಯವೇ? ಹಾಗಿದ್ರೆ ಈ ಶಾರ್ಟ್ ಮೂವಿಯನ್ನು ನೀವು ನೋಡಲೇಬೇಕು. ಬ್ಯಾಲೆ ಡ್ಯಾನ್ಸರ್ ತನ್ನ ಪ್ರತಿಬಿಂಬ ಬೇರೆಯದೇ ಮಾರ್ಗದಲ್ಲಿ ಚಲಿಸೋದನ್ನು ಗಮನಿಸುತ್ತಾಳೆ. ಮುಂದೆ ಏನು ಆಗುತ್ತೆ ಅನ್ನೋದನ್ನು ಕಿರುಚಿತ್ರದಲ್ಲಿ ನೋಡಬೇಕು.
89
6.The Chair (2023)
ಒಬ್ಬ ವ್ಯಕ್ತಿ ತನ್ನ ಮನೆಗೆ ಹಳೆಯ ಕುರ್ಚಿಯನ್ನು ತಂದಾಗ, ಅವನ ಜೀವನದಲ್ಲಿ ಭಯಾನಕ ಘಟನೆಗಳು ಸಂಭವಿಸಲು ಶುರುವಾಗುತ್ತವೆ. ಇದೆಲ್ಲಾ ಆ ಕುರ್ಚಿಯಿಂದಲೇ ಅಂತ ತಿಳಿದಾಗ ಭಯಗೊಳ್ಳುತ್ತಾನೆ. ಇದು ಭೂತ ಮತ್ತು ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ.
99
7.The Smiling Man (2015)
ಕೆಲವರು ಚಿಕ್ಕ-ಪುಟ್ಟ ವಿಷಯಗಳಿಗೂ ಹೆದರಿಕೊಳ್ಳುತ್ತಿರುತ್ತಾರೆ. ಅಂತಹವುದೇ ಒಂದು ಕಥೆ ದಿ ಸ್ಮೈಲಿಂಗ್ ಮ್ಯಾನ್. ಮನೆಯೊಂದರಲ್ಲಿ ಪುಟ್ಟು ಹುಡುಗಿ ಒಂಟಿಯಾಗಿರುತ್ತಾಳೆ. ಈ ಸಮಯದಲ್ಲಿ ಸ್ಮೈಲ್ ನೀಡುವ ಭಯಾನಕ ವ್ಯಕ್ತಿಯನ್ನು ನೋಡುತ್ತಾಳೆ. ಅವನ ನಿಗೂಢ ನಗು ಅವಳ ಭಯಕ್ಕೆ ದೊಡ್ಡ ಕಾರಣವಾಗಿದೆ.
Latest Videos