- Home
- Technology
- Mobile Tower: ಮೊಬೈಲ್ ಟವರ್‌ನಿಂದ ನಿಮ್ಮ ಫೋನ್‌ಗೆ ಸಿಗ್ನಲ್ ಹೇಗೆ ಬರುತ್ತದೆ? ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿ
Mobile Tower: ಮೊಬೈಲ್ ಟವರ್‌ನಿಂದ ನಿಮ್ಮ ಫೋನ್‌ಗೆ ಸಿಗ್ನಲ್ ಹೇಗೆ ಬರುತ್ತದೆ? ಪ್ರತಿಯೊಬ್ಬರೂ ತಿಳಿಯಬೇಕಾದ ಮಾಹಿತಿ
ಮೊಬೈಲ್ ಟವರ್‌ಗಳು ರೇಡಿಯೋ ಸಿಗ್ನಲ್‌ಗಳ ಮೂಲಕ ನಿಮ್ಮ ಫೋನ್‌ನ್ನು ನೆಟ್‌ವರ್ಕ್‌ಗೆ ಸಂಪರ್ಕಿಸಿ, ಕರೆ ಮತ್ತು ಇಂಟರ್ನೆಟ್ ಸೇವೆಗಳು ಕ್ಷಣಾರ್ಧದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತಾ?

ಮೊಬೈಲ್ ಟವರ್
ಇಂದು ಮೊಬೈಲ್ ಇಲ್ಲದೆ ಕಳೆಯುವುದು ಕಷ್ಟ. ಪೋನ್, ವಾಟ್ಸ್ ಅಫ್, ಯೂಟ್ಯೂಬ್, ಯುಪಿಐ ಎಲ್ಲವೂ ಮೊಬೈಲ್ ನೆಟ್‌ವರ್ಕ್‌ನ ಮೇಲೆ ನಿಂತಿದೆ. ಆದರೆ ನಿಮ್ಮ ಮೊಬೈಲ್‌ನಲ್ಲಿರುವ ಸಿಗ್ನಲ್ ಹೇಗೆ ಬರುತ್ತವೆ? ಫೋನ್ ಮಾಡಿದರೆ ಅದು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಗೆ ಸೆಕೆಂಡ್‌ನಲ್ಲಿ ಹೇಗೆ ತಲುಪುತ್ತದೆ? ಗೊತ್ತಾ.
ಮೊಬೈಲ್ ಟವರ್ ಎಂದರೇನು?
ಮೊಬೈಲ್ ಟವರ್ ಕೇವಲ ಎತ್ತರದ ಕಬ್ಬಿಣದ ಕಂಬವಲ್ಲ. ಅದರ ಮೇಲಿರುವ ಆಂಟೆನಾ ಮತ್ತು ಕೆಳಭಾಗದಲ್ಲಿರುವ ಸಂವಹನ ಸಾಧನಗಳು ನಿಮ್ಮ ಮೊಬೈಲ್‌ನಿಂದ ಬರುವ ರೇಡಿಯೋ ಸಿಗ್ನಲ್‌ಗಳನ್ನು ಸ್ವೀಕರಿಸಿ, ಅವುಗಳನ್ನು ಟೆಲಿಕಾಂ ನೆಟ್‌ವರ್ಕ್‌ಗೆ ರವಾನಿಸುತ್ತವೆ. ಅಲ್ಲಿಂದ ಆ ಮಾಹಿತಿ ಮತ್ತೊಂದು ಟವರ್ ಮೂಲಕ ಎದುರಿನ ವ್ಯಕ್ತಿಯ ಮೊಬೈಲ್‌ಗೆ ತಲುಪುತ್ತದೆ.
ಮೊಬೈಲ್ ಸಿಗ್ನಲ್ ಹೇಗೆ ಬರುತ್ತದೆ?
ನೀವು ಕರೆ ಮಾಡಿದ ಕ್ಷಣದಲ್ಲೇ ನಿಮ್ಮ ಮೊಬೈಲ್ ರೇಡಿಯೋ ತರಂಗಗಳ (Radio Frequency Signals) ಮೂಲಕ ಹತ್ತಿರದ ಮೊಬೈಲ್ ಟವರ್‌ಗೆ ಸಿಗ್ನಲ್ ಕಳುಹಿಸುತ್ತದೆ. ಆ ಟವರ್ ಅದನ್ನು ಫೈಬರ್ ಆಪ್ಟಿಕ್ ಕೇಬಲ್ ಅಥವಾ ಮೈಕ್ರೋವೇವ್ ಲಿಂಕ್ ಮೂಲಕ ಟೆಲಿಕಾಂ ನೆಟ್‌ವರ್ಕ್‌ಗೆ ರವಾನಿಸುತ್ತದೆ. ಅಲ್ಲಿಂದ ಎದುರಿನ ವ್ಯಕ್ತಿಯ ಹತ್ತಿರದ ಟವರ್‌ಗೆ ಮಾಹಿತಿ ಹೋಗಿ, ಅಂತಿಮವಾಗಿ ಅವರ ಮೊಬೈಲ್‌ಗೆ ಕರೆ ತಲುಪುತ್ತದೆ. ಈ ಸಂಪೂರ್ಣ ಪ್ರಕ್ರಿಯೆ ಮಿಲಿಸೆಕೆಂಡ್‌ಗಳಲ್ಲಿ ನಡೆಯುತ್ತದೆ.
ಟವರ್‌ಗಳನ್ನು 'ಸೆಲ್' ಎಂದು ಯಾಕೆ ಕರೆಯುತ್ತಾರೆ?
ಪ್ರತಿಯೊಂದು ಮೊಬೈಲ್ ಟವರ್ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೇವೆ ನೀಡುತ್ತದೆ. ಈ ಪ್ರದೇಶವನ್ನು 'ಸೆಲ್' ಎಂದು ಕರೆಯಲಾಗುತ್ತದೆ. ನೀವು ವಾಹನದಲ್ಲಿ ಪ್ರಯಾಣಿಸುವಾಗ ನಿಮ್ಮ ಮೊಬೈಲ್ ಒಂದು ಟವರ್‌ನಿಂದ ಮತ್ತೊಂದು ಟವರ್‌ಗೆ ಸ್ವಯಂಚಾಲಿತವಾಗಿ ಸಂಪರ್ಕ ಬದಲಾಯಿಸುತ್ತದೆ. ಇದನ್ನೇ ಹ್ಯಾಂಡ್ಓವರ್ (Handover) ಎಂದು ಕರೆಯುತ್ತಾರೆ. ಇದರಿಂದ ಕರೆ ಕಡಿತವಾಗದೆ ನಿರಂತರವಾಗಿ ಮುಂದುವರಿಯುತ್ತದೆ.
ಕೆಲವೊಮ್ಮೆ ಸಿಗ್ನಲ್ ಯಾಕೆ ಕಡಿಮೆಯಾಗುತ್ತದೆ?
ಟವರ್‌ನಿಂದ ಹೆಚ್ಚು ದೂರ ಇದ್ದರೆ ಸಿಗ್ನಲ್ ಕಮ್ಮಿಯಾಗುತ್ತೆ. ಎತ್ತರದ ಕಟ್ಟಡಗಳು, ದಪ್ಪ ಗೋಡೆಗಳು, ಬೆಟ್ಟಗಳು ಹಾಗೂ ಕಾಡುಗಳು ಸಿಗ್ನಲ್ ವೇವ್ಸ್ ತಡೆಯಬಹುದು. ಒಂದೇ ಟವರ್‌ಗೆ ಒಂದೇ ಸಮಯದಲ್ಲಿ ಹೆಚ್ಚು ಜನ ಸಂಪರ್ಕಿಸಿದರೆ ನೆಟ್‌ವರ್ಕ್ ನಿಧಾನವಾಗಬಹುದು. ಅಂಡರ್ ಗ್ರೌಂಡ್ ಪಾರ್ಕಿಂಗ್, ಲಿಫ್ಟ್ ಅಥವಾ ಬೇಸ್‌ಮೆಂಟ್‌ನಲ್ಲಿ ಸಿಗ್ನಲ್ ಕಡಿಮೆಯಾಗುವುದು ಸಾಮಾನ್ಯ.
ಹೆಚ್ಚು ಟವರ್ ಇದ್ದರೆ ಸಿಗ್ನಲ್ ಉತ್ತಮವೇ?
ಹೌದು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸಾವಿರಾರು ಜನ ಒಂದೇ ಸಮಯದಲ್ಲಿ ನೆಟ್‌ವರ್ಕ್ ಬಳಸುವುದರಿಂದ ಹೆಚ್ಚು ಟವರ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ನೆಟ್‌ವರ್ಕ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕರೆ ಮತ್ತು ಇಂಟರ್ನೆಟ್ ಗುಣಮಟ್ಟ ಉತ್ತಮವಾಗುತ್ತದೆ.
ಮೊಬೈಲ್ ಟವರ್‌ಗಳಿಂದ ಆರೋಗ್ಯಕ್ಕೆ ಅಪಾಯ ಇದೆಯೇ?
ಇದುವರೆಗೆ ನಡೆದ ಅನೇಕ ವೈಜ್ಞಾನಿಕ ಅಧ್ಯಯನಗಳಲ್ಲಿ, ಸರ್ಕಾರ ನಿಗದಿಪಡಿಸಿರುವ ಮಿತಿಯೊಳಗಿನ ಮೊಬೈಲ್ ಟವರ್‌ಗಳ ರೇಡಿಯೋ ಫ್ರೀಕ್ವೆನ್ಸಿ ಸಿಗ್ನಲ್‌ಗಳು ಮಾನವ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.