ಸಾರಿಗೆ ನೌಕರರ ಸಭೆ: ಬೇಡಿಕೆ ಪಟ್ಟಿ ಹಿಡಿದು ಸಿಎಂ ಭೇಟಿಯಾದ ಸವದಿ
ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಪ್ರತಿಭಟನೆ 4 ನೇ ದಿನಕ್ಕೆ ತಲುಪಿದೆ. ಈ ಸಂಬಂಧ ಇಂದು (ಭಾನುವಾರ) ಮಹತ್ವದ ಸಭೆ ನಡೆದಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಯೂನಿಯನ್ ನಾಯಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಯೂನಿಯನ್ ನಾಯಕರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಮಹತ್ವದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಯೂನಿಯನ್ ನಾಯಕರ ಜೊತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲು ಲಕ್ಷ್ಮಣ ಸವದಿ ಅವರು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದರು.
ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ಫೈನಲ್ ಘೋಷಣೆ ಮಾಡಲಿರುವ ಸವದಿ
ಸರ್ಕಾರಿ ನೌಕರರನ್ನ ಖಾಯಂ ಗೊಳಿಸಲು ಸಾಧ್ಯವಿಲ್ಲ ಅಂದ್ರೆ ಬೇಡ. ಆದ್ರೆ ವೇತನ ಪರಿಷ್ಕರಣೆ ಮಾಡದಿರೋದು ಏಕೆ ಎಂದು ಪ್ರಶ್ನಿಸಿರುವ ಸಾರಿಗೆ ನೌಕರರ ಯೂನಿಯನ್ ಮುಖಂಡರು..
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗಬೇಕು.. ಜವರಿಯಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಒತ್ತಾಯಿಸಿರುವ ಸಾರಿಗೆ ನೌಕರರ ಯೂನಿಯನ್ ಗಳು.. ಮೂಲ ವೇತನದಲ್ಲಿ ಶೇ 15 ರಷ್ಟು ಹೆಚ್ಚಳಕ್ಕೆ ಯೂನಿಯನ್ ಗಳ ಒತ್ತಾಯ.
ಶೇ 10 ರಷ್ಟು ಮೂಲ ವೇತನದಲ್ಲಿ ಹೆಚ್ಚಳ ಮಾಡಿಕೊಡುವ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ಫೈನಲ್ ಘೋಷಣೆ ಮಾಡಲಿರುವ ಸವದಿ