ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ
ಪ್ರಧಾನಿ ಮೋದಿ ಪೆಟ್ರೋಲ್ ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದಾರೆ. ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಸರಬರಾಜು ಕೊರತೆ ಎದುರಾಗಿದೆ.

ಯುದ್ಧ ಕಾರಣದಿಂದ ಇಂಧನ ಸರಬರಾಜು ಕೊರತೆ
ಯುದ್ಧದಿಂದ ಮತ್ತೆ ಇಂಧನ ಸರಬರಾಜು ಕೊರತೆ ಎದುರಾಗಿದೆ. ಹಣದುಬ್ಬರ, ವಿದೇಶಿ ವಿನಿಮಯ, ಆರ್ಥಿಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೋದಿ ಮಹತ್ವದ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಬಳಕೆ, ಅನಗತ್ಯ ಪ್ರವಾಸ ಕಡಿತ, ಮನೆಯಿಂದ ಕೆಲಸಗಳಿಂದ ಇಂಧನ ಉಳಿತಾಯಕ್ಕೆ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲವೆಡೆ ಇಂಧನ ಕೊರತೆ ಎದುರಾಗಿದೆ.

ಲಗ್ಗರೆ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಕೊರತೆ
ಬೆಂಗಳೂರಿನ ಲಗ್ಗರೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಡೀಸೆಲ್ ಕೊರತೆ ಎದುರಾಗಿದೆ. ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಿದೆ. ಇದರ ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ.
ಬಂಕ್ ಮುಚ್ಚಿದ ಸಿಬ್ಬಂದಿ
ಲಗ್ಗರೆ ಪೆಟ್ರೋಲ್ ಬಂಕ್‌ಗೆ ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್ ಮುಚ್ಚಲಾಗಿದೆ. ನಿನ್ನೆ(ಮೇ.10) ಸಂಜೆಯಿಂದಲೇ ಲಗ್ಗೆರೆ ಬಳಿ ಇರುವ ಹೆಚ್‌ಪಿ ಪೆಟ್ರೋಲ್ ಬಂಕ್ ಕ್ಲೋಸ್ ಮಾಡಲಾಗಿದೆ. ಗ್ರಾಹಕರು ಪೆಟ್ರೋಲ್ ಬಳಿ ಬಂದು ಮತ್ತೆ ಬೇರೆಡೆ ತೆರಳು ಪರಿಸ್ಥಿತಿ ಎದುರಾಗಿದೆ.
ಅರ್ಧ ಕಿಮಿ ನಡೆದುಕೊಂಡು ಹೋಗಿ ಪೆಟ್ರೋಲ್ ತಂದ ವ್ಯಕ್ತಿ
ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ನಡೆದುಕೊಂಡು ಬಂದ ವ್ಯಕ್ತಿಗೆ ನಿರಾಸೆಯಾಗಿದೆ. ಬಳಿಕ ಅರ್ಧ ಕಿಲೋಮೀಟರ್ ದೂರ ನಡೆದ ಬಾಟಲಿಯಲ್ಲಿ ಪೆಟ್ರೋಲ್ ತಂದ ಘಟನೆ ನಡೆದಿದೆ. ಹಲವರು ಬಾಟಲಿ ಮೂಲಕ ಪೆಟ್ರೋಲ್ ಖರೀದಿಸುತ್ತಿದ್ದಾರೆ.
ಮೋದಿ ಮಹತ್ವದ ಸಂದೇಶ
ವಿದೇಶದಲ್ಲಿ ಮದುವೆ ಮಾಡುವ ಬದಲು ಭಾರತದಲ್ಲಿ ಮದುವೆ, ವಿದೇಶಿ ಪ್ರವಾಸ ರದ್ದು ಮಾಡಿ, ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಂತೆ ಮೋದಿ ಸೂಚಿಸಿದ್ದಾರೆ. ಸ್ಥಳೀಯ ಉತ್ಪನ್ನಗಳ ಖರೀದಿ, ಸಾರಿಗೆ ವಾಹನಗಳ ಬಳಕೆ ಸೇರಿದಂತೆ ಪ್ರಮುಖ ಸೂತ್ರಗಳನ್ನು ಮೋದಿ ನೀಡಿದ್ದಾರೆ. ಯುದ್ಧ ಕಾರಣದಿಂದ ಇಂಧನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸ್ವಾಲಂಬಿಯಾಗಲು ಮೋದಿ ಸೂಚಿಸಿದ್ದಾರೆ.
ಮೋದಿ ಮಹತ್ವದ ಸಂದೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

