ಮೋದಿಯ ಕರೆ ಕೇಳಿ, ಒಳ ದನಿಯ ಕರೆ ಕೇಳಿ ದೀಪ ಹಚ್ಚಿದ ಕನ್ನಡಿಗರು

First Published 6, Apr 2020, 4:48 PM

ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಓಗೊಟ್ಟ ಭಾರತೀಯರು ಅದ್ಭುತವಾಗಿ ದೀಪಾಂದೋಲನ ನಡೆಸಿದ್ದಾರೆ. ತಾವು ಹಚ್ಚುವ ದೀಪದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವಂತೆ ಸುವರ್ಣನ್ಯೂಸ್.ಕಾಮ್ ಕೂಡ ಕರೆ ನೀಡಿತ್ತು. ಅದಕ್ಕೆ ಸ್ಪಂದಿಸಿದ ಓದುಗರು ಕೆಲವು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಕೆಲವುದರ ಝಲಕ್ ಇದು...

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚ ||

ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ   ..

ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.

ಆರದಿರು, ಆರದಿರು, ಓ ನನ್ನ ಬೆಳಕೆ!  ಒಳಗಿರುವ ಬೆಳಕೆ, ಬೆಳಕೇ!

ತಾರದಿರು ಕಾರಿರುಳನೆದೆಯ ಮಂದಿರಕೆ; ಆಗು, ನಂದಾದೀಪವಾಗಿ ಬೆಳಗು, ನನ್ನತನದೆಳಮೊಳಕೆ, ಬೆಳಕೇ! ಓ ನನ್ನ ಬೆಳಕೇ!

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ ನೆರಳು, ಬಿಸಿಲು ಎಲ್ಲವೂ ನಿನ್ನವೆ ಇರಲಿ ಏಕರೀತಿ.

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು..

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು||

#ಬನ್ನಿದೀಪಬೆಳಗೋಣ ಎಂದು ದೀಪ ಬೆಳಗಿದ ಕನ್ನಡಿಗರು ಭಾರತಾಂಬೆಗೆ ವಂದಿಸಿದರು.

loader