ಗ್ರಾಮ ಪಂಚಾಯತ್ ಎರಡನೇ ಫೈಟ್: ಮತದಾನದ ಫೋಟೋಸ್
ಬೆಂಗಳೂರು(ಡಿ.27): ರಾಜ್ಯದಲ್ಲಿ ಇಂದು(ಭಾನುವಾರ) ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದೆ. ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಲ್ಲಿನ 39,378 ಸ್ಥಾನಗಳಿಗೆ ಮತದಾನ ಆರಂಭವಾಗಿದೆ. 2709 ಗ್ರಾಮ ಪಂಚಾಯಿತಿಯ ಒಟ್ಟು 43,291 ಸ್ಥಾನಗಳಿದ್ದು, ಈ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದೆ. 1,05,431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜನತೆ ಕೂಡ ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಪಂಚಮಸಲಿ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳಿಂದ ಮತದಾನ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಪಂ ಚುನಾವಣೆ ಹಿರಿಯ ನಾಗರಿಕರು, ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ
ಉಜ್ಜಿನಿಯಲ್ಲಿ ಜಗದ್ಗುರು ಶ್ರೀ ಸಿದ್ಧ ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮತದಾನ
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸ್ವಗ್ರಾಮ ಗುರುಗುಂಟಾ ಗ್ರಾಮದಲ್ಲಿ ಮತದಾನ. ಕೋವಿಡ್ ನಿಯಮ ಪಾಲಿಸಿ ಮತದಾನ ಮಾಡಿದ ಸಂಸದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಸಹಾಯಕರೊಂದಿಗೆ ಆಗಮಿಸಿ ಮತದಾನ ಮಾಡಿದ ವೃದ್ಧ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಸುಳ್ಳ ಗ್ರಾಮದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂದ ಮಹಿಳೆಯರು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದ ಬೂತ್ ನಂಬರ್ 47 ರಲ್ಲಿ ಯಾರ ಸಹಾಯವಿಲ್ಲದೇ ಎರಡು ಕೈಯಿಲ್ಲದ ಯುವತಿಯಿಂದ ಮತದಾನ. ಮತದಾನದ ಹಕ್ಕು ಚಲಾಯಿಸಿದ ಲಕ್ಷ್ಮೀದೇವಿ. ಪ್ರತಿ ಚುನಾವಣೆಯಲ್ಲಿಯೂ ಯಾರ ಸಹಾಯವಿಲ್ಲದೇ ಮತ ಚಲಾವಣೆ ಮಾಡುವ ಲಕ್ಷ್ಮೀದೇವಿ.
ಮತದಾರರಿಗೆ ಸ್ಕ್ರೀನಿಂಗ್ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು
ಕುಟುಂಬದೊಂದಿಗೆ ಬಂದು ಮತದಾನ ಮಾಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ . ಇದೇ ವೇಳೆ ಮಾತನಾಡಿದ ಅವರು, ಅಭಿವೃದ್ಧಿಗೆ ಅಡ್ಡಿಪಡಿಸುವ ಪರಿಸರವಾದಿಗಳನ್ನು ಸಹಿಸಲು ಸಾಧ್ಯವಿಲ್ಲ. ಜೆಡಿಎಸ್ ಬಿಜೆಪಿಗೆ ಬೆಂಬಲಿಸುವುದು ಸ್ವಾಗತಾರ್ಹ. ನಮ್ಮ ತತ್ವ ಸಿದ್ಧಾಂತ ಒಪ್ಪಿ ಯಾರೂ ಬೆಂಬಲ ನೀಡಬಹುದು. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಕು ಮತೆಗಟ್ಟೆಯಲ್ಲಿ ಹಕ್ಕು ಚಲಾಯಿಸಿದ 80 ವರ್ಷದ ವೃದ್ಧೆ ಹುಸೇನದ ಬೀ