MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರದ ತ್ಯಾಜ್ಯ ಘಟಕದಲ್ಲಿ ಅಗ್ನಿ ಅವಘಡ: ಶಿರವಾಡದ ಡಂಪಿಂಗ್ ಯಾರ್ಡ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವನ್ನು ಕಾರವಾರ, ಅಂಕೋಲಾ ಮತ್ತು ಬಿಣಗಾದ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹತೋಟಿಗೆ ತಂದಿದ್ದಾರೆ.ಘಟನೆ ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

1 Min read
Author : Ravi Janekal
Published : Feb 06 2026, 12:15 PM IST
Share this Photo Gallery
  • FB
  • TW
  • Linkdin
  • Whatsapp
14
 ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ
Image Credit : Asianet News

ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ

ಕಾರವಾರದ ಹೊರವಲಯದ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಂದು ಮುಂಜಾನೆ ದಿಗಿಲು ಹುಟ್ಟಿಸುವ ಘಟನೆಯೊಂದು ಸಂಭವಿಸಿದೆ. ಇಡೀ ಊರು ನಿದ್ರೆಯ ಮಂಪರಿನಲ್ಲಿದ್ದಾಗ, ಡಂಪಿಂಗ್ ಯಾರ್ಡ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ಆಕಾಶವನ್ನೇ ಮುಟ್ಟುವಂತೆ ಎತ್ತರಕ್ಕೆ ಜಿಗಿಯತೊಡಗಿದವು. ದಟ್ಟವಾದ ಕಪ್ಪು ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದ್ದರಿಂದ ಸ್ಥಳೀಯರು ಉಸಿರುಗಟ್ಟಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

24
ಪ್ಲಾಸ್ಟಿಕ್ ರಾಶಿಗೆ ಹತ್ತಿದ ಬೆಂಕಿ ದಟ್ಟ ಹೊಗೆ ಭಯಂಕರ ಅಗ್ನಿ ನರ್ತನ!
Image Credit : Asianet News

ಪ್ಲಾಸ್ಟಿಕ್ ರಾಶಿಗೆ ಹತ್ತಿದ ಬೆಂಕಿ ದಟ್ಟ ಹೊಗೆ ಭಯಂಕರ ಅಗ್ನಿ ನರ್ತನ!

ತ್ಯಾಜ್ಯ ಘಟಕದಲ್ಲಿ ಟನ್‌ಗಟ್ಟಲೆ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯವು ಬೆಂಕಿಗೆ ತುಪ್ಪ ಸುರಿದಂತಾಯಿತು. ಪ್ಲಾಸ್ಟಿಕ್ ರಾಶಿಗೆ ಬೆಂಕಿ ತಗುಲಿದ್ದರಿಂದ ದಟ್ಟವಾದ ವಿಷಕಾರಿ ಹೊಗೆ ಕಿಲೋಮೀಟರ್‌ಗಳವರೆಗೆ ಹಬ್ಬಿತ್ತು. ಡಂಪಿಂಗ್ ಯಾರ್ಡ್‌ನ ಸುತ್ತಮುತ್ತ ಹಲವಾರು ವಸತಿ ಮನೆಗಳಿದ್ದು, ಒಂದು ವೇಳೆ ಬೆಂಕಿ ಮನೆಗಳಿಗೆ ಹಬ್ಬಿದ್ದರೆ ಭಾರೀ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿತ್ತು.

Related Articles

Related image1
ಬೆಂಗಳೂರು ಇಸ್ಕಾನ್ ಟೆಂಪಲ್ 'ಸ್ಕೈವಾಕ್' ಬಳಿ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!
Related image2
Kodagu: ಕೊಡಗಿನ ಕಾಡು ಕಾಯಲು 'ಅಗ್ನಿ' ರಣತಂತ್ರ: ಬೆಂಕಿ ರೇಖೆ ನಿರ್ಮಾಣ ಕಾರ್ಯ ಬಿರುಸು
34
ಮೂರು ಪಡೆಗಳಿಂದ ಜಂಟಿ ಕಾರ್ಯಾಚರಣೆ
Image Credit : Asianet News

ಮೂರು ಪಡೆಗಳಿಂದ ಜಂಟಿ ಕಾರ್ಯಾಚರಣೆ

ಘಟನಾ ಸ್ಥಳಕ್ಕೆ ಮೊದಲು ಆಗಮಿಸಿದ ಕಾರವಾರದ ಅಗ್ನಿಶಾಮಕ ದಳಕ್ಕೆ ಬೆಂಕಿಯ ತೀವ್ರತೆ ಕಂಡು ಕಂಗಾಲಾಗುವಂತಾಯಿತು. ಪರಿಸ್ಥಿತಿ ಹತೋಟಿ ಮೀರುತ್ತಿದ್ದನ್ನು ಗಮನಿಸಿ ತಕ್ಷಣವೇ ಅಂಕೋಲಾ ಹಾಗೂ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು. ಮೂರು ತಂಡಗಳ ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಹರಸಾಹಸ ಪಟ್ಟು, ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ನಂತರ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

44
ವಿಷಕಾರಿ ಗಾಳಿಯ ಆತಂಕ
Image Credit : Asianet News

ವಿಷಕಾರಿ ಗಾಳಿಯ ಆತಂಕ

ಬೆಂಕಿ ನಂದಿದರೂ ಪ್ಲಾಸ್ಟಿಕ್ ಸುಟ್ಟಿದ್ದರಿಂದ ಉಂಟಾದ ವಿಷಕಾರಿ ಹೊಗೆಯ ಪರಿಣಾಮ ಶಿರವಾಡ ಭಾಗದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಜನವಸತಿ ಪ್ರದೇಶದ ಸಮೀಪವೇ ಇಷ್ಟೊಂದು ಪ್ರಮಾಣದ ತ್ಯಾಜ್ಯ ರಾಶಿ ಹಾಕಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಉತ್ತರ ಕನ್ನಡ
ಅಗ್ನಿ ಅವಘಡ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರ: ಪಾದಚಾರಿ ಭಕ್ತರ ರಕ್ಷಣೆಗೆ ಅರಣ್ಯ ಇಲಾಖೆ ಹೈ ಅಲರ್ಟ್; ದಾರಿ ಉದ್ದಕ್ಕೂ ಡ್ರೋನ್ ಕಣ್ಗಾವಲು!
Recommended image2
ಸುಚಿತ್ರಾ ಚಿಟಿಕಿ ಹೊಡೆದ್ರೆ ಕ್ಯೂ ನಿಲ್ತಾರೆ, ನಾನೇ ನಾಯಿ ಥರ ಅವಳ ಹಿಂದೆ ಅಲೆದೆ: Kamalakar Bhat ಆಡಿಯೋ ವೈರಲ್
Recommended image3
ಕಾಂಗ್ರೆಸ್ ನಾಯಕರಿಗೆ ಮಹಾತ್ಮ ಗಾಂಧಿ ದೊಣ್ಣೆಯಿಂದ ಹೊಡೆಯುವ ಜಾಹೀರಾತು ನೀಡಿದ ಬಿಜೆಪಿ; ಪ್ರಿಯಾಂಕ್ ಖರ್ಗೆ ಆಕ್ರೋಶ
Related Stories
Recommended image1
ಬೆಂಗಳೂರು ಇಸ್ಕಾನ್ ಟೆಂಪಲ್ 'ಸ್ಕೈವಾಕ್' ಬಳಿ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!
Recommended image2
Kodagu: ಕೊಡಗಿನ ಕಾಡು ಕಾಯಲು 'ಅಗ್ನಿ' ರಣತಂತ್ರ: ಬೆಂಕಿ ರೇಖೆ ನಿರ್ಮಾಣ ಕಾರ್ಯ ಬಿರುಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved