ನಾವು ಭಾರತದಲ್ಲಿದ್ದೇವಾ, ಪಾಕಿಸ್ತಾನದಲ್ಲಿದ್ದೇವಾ? ಮತ್ತೆ ರಣರಂಗವಾಯ್ತು ಕೆರೆಗೋಡು ಹನಮಧ್ವಜ ಸಂಘರ್ಷ!
'ನಾವು ಭಾರತದಲ್ಲಿ ಇದ್ದೇವಾ? ಇಲ್ಲಾ ಪಾಕಿಸ್ತಾನದಲ್ಲಿ ಇದ್ದೇವಾ? ಶಾಂತಿಯುತವಾಗಿ ನಡೆಯುವ ಕಾರ್ಯಕ್ರಮಕ್ಕೆ ಯಾಕೆ ಅಡ್ಡಿಪಡಿಸುತ್ತಿದ್ದೀರಿ?' ಎಂದು ಕೆರೆಗೋಡು ಪಂಜಿನ ಮೆರವಣಿಗೆಯಲ್ಲಿ ಬಾಗಿಯಾಗಲು ಅವಕಾಶ ನೀಡದ ಪೊಲೀಸರ ವಿರುದ್ಧ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಕೆರೆಗೋಡು ಹನಮಧ್ವಜ ಸಂಘರ್ಷ
ಕೆರೆಗೋಡು ಹನುಮಧ್ವಜ ಇಳಿಸಿ ಒಂದು ವರ್ಷವಾದ ಹಿನ್ನೆಲೆ ಹನುಮ ಧ್ವಜ ಸಮಿತಿಯಿಂದ ಕೆರೆಗೋಡಿನ ಕರಾಳ ದಿನಾಚರಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಪುನೀತ್ ಕೆರೆಹಳ್ಳಿಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಗದೆ ಬೆಂಗಳೂರಿಗೆ ವಾಪಸ್ ತೆರಳಬೇಕಾಯಿತು.
ನಾನು ಹಿಂದೂ ನನಗೆ ಧಾರ್ಮಿಕ ಹಕ್ಕಿಲ್ಲವಾ?
ನಾನು ಹಿಂದೂ. ನನಗೆ ಧಾರ್ಮಿಕ ಹಕ್ಕಿಲ್ಲವಾ? ನನ್ನ ಧರ್ಮದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಹಕ್ಕಿಲ್ವ? ನಾನು ಕೆರೆಗೋಡಿಗೆ ಹೋಗಬಾರದು ಎಂದರೆ ಹೇಗೆ? ಯಾವ ಕಾರಣಕ್ಕೆ ನಿರ್ಬಂಧ. ಆದೇಶ ಪ್ರತಿಕೊಡಿ. ಇಲ್ಲದಿದ್ದರೆ ನಾನು ನಿಮ್ಮ ಜೊತೆಗೆ ಬರೋದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಕೆರೆಗೋಡು ಹನಮಧ್ವಜ ಸಂಘರ್ಷ
ಹಿಂದೂಗಳು ಸಂಘಟಿತರಾಗದಂತೆ ತಡೆಯುವುದು ಕಾಂಗ್ರೆಸ್ ಸರ್ಕಾರ ಸಂಚು ನಡೆಸಿದೆ. ಕೆರಗೋಡು ಗ್ರಾಮದಲ್ಲಿ ನಡೆಯುವ ಶಾಂತಿಯುತ ಪಂಜಿನ ಮೆರವಣಿಗೆಗೂ ಭಾಗಿಯಾಗಲು ಬಿಡದಂತೆ ಡಿಸಿ, ಎಸ್‌ಪಿ ಆದೇಶಿಸಿದ್ದಾರೆ. ನಾನೊಬ್ಬ ಹಿಂದೂ, ನನ್ನ ಧರ್ಮದ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಡೆಯಲು ಯಾವ ಆದೇಶವಿದೆ? ಆದೇಶವಿಲ್ಲದೆ ನಿರ್ಬಂಧಿಸುವುದು ಸಂವಿಧಾನ ವಿರೋಧಿ ಅಲ್ಲವೇ? ಪೊಲೀಸರು ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕೆರೆಗೋಡು ಹನಮಧ್ವಜ ಸಂಘರ್ಷ
ರಾಜ್ಯದಲ್ಲಿರೋದು ತುಘಲಕ್ ಸರ್ಕಾರ. ಈ ಸರ್ಕಾರ ಪೊಲೀಸರ ಮೂಲಕ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕೆರೆಗೋಡು ಶಾಂತಿಯುತ ಹೋರಾಟ ನಡೆಯುವುದು ನಿಮ್ಮ ಉದ್ದೇಶವಾ? ಅಥವಾ ಹಿಂದೂಗಳನ್ನು ಜಾಗೃತರಾಗದಂತೆ ತಡೆಯುವ ಉದ್ದೇಶವಾ? ಎಂದು ಪೊಲೀಸರನ್ನ ಪ್ರಶ್ನಿಸಿದ ಪುನೀತ್ ಕೆರೆಹಳ್ಳಿ, ನನ್ನಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ನಾನು ವಾಪಸ್ಸಾಗಲು ನಿರ್ಧರಿಸಿದ್ದೇನೆ.ಕಾರ್ಯಕರ್ತರು ಭಾವೋದ್ವೇಗಕ್ಕೊಳಗಾಗುವುದು ಬೇಡ. ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನ ಬಂಧಿಸಿ, ಕೇಸ್ ಹಾಕುವುದು ಬೇಡ. ಮುಂದಿನದಿನಗಳಲ್ಲಿ ನಾನು ಮತ್ತೆ ಕೆರಗೋಡಿಗೆ ಬಂದೇ ಬರುತ್ತೇನೆ. ಹಿಂದೂಗಳನ್ನ ಒಗ್ಗೂಡಿಸುವ ಕೆಲಸ ಮಾಡ್ತೇನೆ ಎಂದರು.
ಕೆರೆಗೋಡು ಹನಮಧ್ವಜ ಸಂಘರ್ಷ
ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬಂದಿದ್ದ ಪುನೀತ್ ಕೆರೆಹಳ್ಳಿ, ಅಂಕಣದೊಡ್ಡಿ ಗ್ರಾಮದಲ್ಲಿನ ಹಿಂದೂ ಕಾರ್ಯಕರ್ತರೊಬ್ಬರ ಮನೆಯೊಂದರಲ್ಲಿ ತಂಗಿದ್ದರು. ಇತ್ತ ಪುನೀತ್ ಕೆರೆಹಳ್ಳಿ ಬಂದಿರುವ ಸುದ್ದಿ ಕೇಳಿ ಪುನೀತ್ ಕೆರೆಹಳ್ಳಿ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಪುನೀತ್ ಕೆರೆಹಳ್ಳಿ ತಂಗಿದ್ದ ಮನೆಯ ಸಮೀಪ ಪೊಲೀಸರು ಸರ್ಪಗಾವಲು
ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬಂದಿದ್ದ ಪುನೀತ್ ಕೆರೆಹಳ್ಳಿ, ಅಂಕಣದೊಡ್ಡಿ ಗ್ರಾಮದಲ್ಲಿನ ಹಿಂದೂ ಕಾರ್ಯಕರ್ತರೊಬ್ಬರ ಮನೆಯೊಂದರಲ್ಲಿ ತಂಗಿದ್ದರು. ಇತ್ತ ಪುನೀತ್ ಕೆರೆಹಳ್ಳಿ ಬಂದಿರುವ ಸುದ್ದಿ ಕೇಳಿ ಪುನೀತ್ ಕೆರೆಹಳ್ಳಿ ತಂಗಿದ್ದ ಮನೆಯ ಸಮೀಪ ಪೊಲೀಸರು ಸರ್ಪಗಾವಲು ಹಾಕಿದ್ದರು. ಪುನೀತ್ ಕೆರೆಹಳ್ಳಿ ಬಂಧಿಸಲು ಮುಂದಾಗುತ್ತಿದ್ದ ಪೊಲೀಸರು ಇದೇ ವೇಳೆ ಪುನೀತ್ ಇದ್ದದ ಮನೆಯತ್ತ ನೂರಾರು ಹನುಮ ಭಕ್ತರು ಜೈಶ್ರೀರಾಮ್ ಘೋಷಣೆ ಮೂಲಕ ಆಗಮಿಸಿದರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆದರೆ ಕೆರೆಗೋಡಿಗೆ ಹೋಗದಂತೆ ಪುನೀತ್ ಕೆರೆಹಳ್ಳಿಗೆ ಎಸ್‌ಪಿ ತಿಮ್ಮಯ್ಯ ಸೂಚಿಸಿದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಬೆಂಗಳೂರಿಗೆ ವಾಪಸ್ ತೆರಳಿದರು.