ಕೊರೋನಾದಿಂದ ಸಂಕಷ್ಟ: 'KSRTC ಉಳಿವಿಗೆ ಕಟ್ಟುನಿಟ್ಟಿನ ಕ್ರಮ ಅತ್ಯಗತ್ಯ'

First Published 17, Oct 2020, 10:27 AM

ಬೆಂಗಳೂರು(ಅ.17): ಕೊರೋನಾದಿಂದ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಉಳಿವಿಗೆ ದುಂದು ವೆಚ್ಚ, ಆದಾಯ ಸೋರಿಕೆಗೆ ಕಡಿವಾಣ ಹಾಕಬೇಕೆಂದು ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

<p>ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ನಿಗಮದ ವಿವಿಧ ವಿಭಾಗಗಳ ಮುಖಸ್ಥರು ಹಾಗೂ 17 ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಾರಿಗೆ ನಿಗಮಗಳ ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡಿದ್ದಾರೆ. ಸಿಬ್ಬಂದಿ ವೇತನಕ್ಕಾಗಿ ಸಾವಿರಾರು ಕೋಟಿ ರು. ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ದುಡಿಮೆಯಲ್ಲೇ ನಿಗಮ ನಡೆಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.</p>

ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ನಿಗಮದ ವಿವಿಧ ವಿಭಾಗಗಳ ಮುಖಸ್ಥರು ಹಾಗೂ 17 ವಿಭಾಗೀಯ ನಿಯಂತ್ರಣಾಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಾರಿಗೆ ನಿಗಮಗಳ ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡಿದ್ದಾರೆ. ಸಿಬ್ಬಂದಿ ವೇತನಕ್ಕಾಗಿ ಸಾವಿರಾರು ಕೋಟಿ ರು. ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ದುಡಿಮೆಯಲ್ಲೇ ನಿಗಮ ನಡೆಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.

<p>ಲಾಕ್‌ ಡೌನ್‌ ಪೂರ್ವದಲ್ಲಿ ನಿಗಮ ಪ್ರತಿ ದಿನ 8,200 ಬಸ್‌ ಕಾರ್ಯಾಚರಣೆ ಮಾಡುತ್ತಿದ್ದು, 30 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಲಾಕ್‌ಡೌನ್‌ ಸಡಿಲಿಕೆ ಬಳಿಕ 5,100 ಬಸ್‌ ಕಾರ್ಯಾಚರಿಸುತ್ತಿದ್ದರೂ ಕೇವಲ 10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ನೇಮಕಾತಿಗಳನ್ನು ತಾತ್ಕಾಲಿಕವಾಗಿ ತಡೆಯುವುದು, ಒಪ್ಪಂದದ ಮೇರೆಗೆ ಅಧಿಕ ಬಸ್‌ಗಳನ್ನು ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದರು.</p>

ಲಾಕ್‌ ಡೌನ್‌ ಪೂರ್ವದಲ್ಲಿ ನಿಗಮ ಪ್ರತಿ ದಿನ 8,200 ಬಸ್‌ ಕಾರ್ಯಾಚರಣೆ ಮಾಡುತ್ತಿದ್ದು, 30 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಲಾಕ್‌ಡೌನ್‌ ಸಡಿಲಿಕೆ ಬಳಿಕ 5,100 ಬಸ್‌ ಕಾರ್ಯಾಚರಿಸುತ್ತಿದ್ದರೂ ಕೇವಲ 10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ನೇಮಕಾತಿಗಳನ್ನು ತಾತ್ಕಾಲಿಕವಾಗಿ ತಡೆಯುವುದು, ಒಪ್ಪಂದದ ಮೇರೆಗೆ ಅಧಿಕ ಬಸ್‌ಗಳನ್ನು ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುವುದು ಎಂದರು.

<p>ನಿಗಮದ ಆಂತರಿಕ ನಿಯತ ಕಾಲಿಕೆ ‘ಸಾರಿಗೆ ಸಂಪದ’ವನ್ನು ಅಧ್ಯಕ್ಷರು ಬಿಡುಗಡೆಗೊಳಿಸಿದ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ&nbsp;</p>

ನಿಗಮದ ಆಂತರಿಕ ನಿಯತ ಕಾಲಿಕೆ ‘ಸಾರಿಗೆ ಸಂಪದ’ವನ್ನು ಅಧ್ಯಕ್ಷರು ಬಿಡುಗಡೆಗೊಳಿಸಿದ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ 

<p>ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಭದ್ರತೆ ಮಸತ್ತು ಜಾಗೃತ ವಿಭಾಗದ ನಿರ್ದೇಶಕ ಡಾ.ರಾಮ್‌ ನಿವಾಸ್‌ ಸೆಪೆಟ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.</p>

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಭದ್ರತೆ ಮಸತ್ತು ಜಾಗೃತ ವಿಭಾಗದ ನಿರ್ದೇಶಕ ಡಾ.ರಾಮ್‌ ನಿವಾಸ್‌ ಸೆಪೆಟ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

loader