MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ,  ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.

2 Min read
Author : Gowthami K
Published : May 11 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರೀ ಆದಾಯ ಗಳಿಸಿ ಮತ್ತೊಮ್ಮೆ ಗಮನ ಸೆಳೆದ ಕುಕ್ಕೆ
Image Credit : our own

ಭಾರೀ ಆದಾಯ ಗಳಿಸಿ ಮತ್ತೊಮ್ಮೆ ಗಮನ ಸೆಳೆದ ಕುಕ್ಕೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನೆಲೆಗೊಂಡಿರುವ ರಾಜ್ಯದ ಮುಜರಾಯಿ ಇಲಾಖೆ ಆಧೀನದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ 2025-26ನೇ ಹಣಕಾಸು ವರ್ಷದಲ್ಲಿ ಭಾರೀ ಆದಾಯ ಗಳಿಸಿ ಮತ್ತೊಮ್ಮೆ ಗಮನ ಸೆಳೆದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ದೇವಾಲಯವು ಒಟ್ಟು ₹167.89 ಕೋಟಿ ಆದಾಯ ಗಳಿಸಿದ್ದು, ಇದರಲ್ಲಿ ₹85.20 ಕೋಟಿ ವೆಚ್ಚ ಮಾಡಲಾಗಿದೆ. ಈ ಮೂಲಕ ಕಳೆದ 2024-25ನೇ ಸಾಲಿನ ₹155 ಕೋಟಿ ಆದಾಯವನ್ನು ಮೀರಿ ಸುಮಾರು ₹12 ಕೋಟಿ ಹೆಚ್ಚುವರಿ ಆದಾಯ ದಾಖಲಿಸಿದೆ. ಸತತ 15ನೇ ವರ್ಷವೂ ರಾಜ್ಯದ ಮುಜರಾಯಿ ದೇವಾಲಯಗಳ ಪೈಕಿ ಅತ್ಯಧಿಕ ಆದಾಯ ಗಳಿಸುವ ನಂ.1 ಸ್ಥಾನವನ್ನು ಈ ದೇವಾಲಯ ಕಾಯ್ದುಕೊಂಡಿದೆ.

Add Asianetnews Kannada as a Preferred SourcegooglePreferred
27
ಆದಾಯದ ಮೂಲಗಳು ಮತ್ತು ದಾಖಲೆ ಸಾಧನೆ
Image Credit : our own

ಆದಾಯದ ಮೂಲಗಳು ಮತ್ತು ದಾಖಲೆ ಸಾಧನೆ

ಈ ವರ್ಷ ದೇವಾಲಯವು ಪ್ರಪ್ರಥಮ ಬಾರಿಗೆ ₹167 ಕೋಟಿಗೂ ಅಧಿಕ ಆದಾಯ ದಾಖಲಿಸಿರುವುದು ವಿಶೇಷವಾಗಿದೆ. ದೇವಾಲಯದ ಪ್ರಮುಖ ಆದಾಯ ಮೂಲಗಳಲ್ಲಿ ಹರಕೆ ಸೇವೆಗಳು, ಕಾಣಿಕೆ ಹುಂಡಿ, ಇ-ಹುಂಡಿ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಛತ್ರಗಳ ಬಾಡಿಗೆ, ಕೃಷಿ ತೋಟಗಳಿಂದ ಲಭಿಸುವ ಆದಾಯ ಹಾಗೂ ವಿವಿಧ ಹೂಡಿಕೆಗಳಿಂದ ಬರುವ ಬಡ್ಡಿ ಸೇರಿವೆ.

Related Articles

Related image1
ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ
Related image2
Karnataka Budget: ಕುಕ್ಕೆ, ಕೊಲ್ಲೂರು ಕ್ಷೇತ್ರಗಳ ಅಭಿವೃದ್ಧಿಗೆ 'ಪ್ರಾಧಿಕಾರ' ರಚನೆ; ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ₹5,000 ಸಹಾಯಧನ!
37
ಯಾವುದರಲ್ಲಿ ಎಷ್ಟು?
Image Credit : our own

ಯಾವುದರಲ್ಲಿ ಎಷ್ಟು?

  • ಹರಕೆ ಸೇವೆಗಳಿಂದ ₹64.08 ಕೋಟಿ
  • ಕಾಣಿಕೆ ಹುಂಡಿಯಿಂದ ₹24.69 ಕೋಟಿ
  • ಕಾಣಿಕೆ (ನೇರ) ₹5.47 ಕೋಟಿ
  • ಇ-ಹುಂಡಿ ₹38.01 ಲಕ್ಷ
  • ಹೂಡಿಕೆ ಬಡ್ಡಿಯಿಂದ ₹49.11 ಕೋಟಿ
  • ಛತ್ರ ಸಂರಕ್ಷಣಾ ನಿಧಿಯಿಂದ ₹6.93 ಕೋಟಿ
  • ಅನ್ನಸಂತರ್ಪಣೆ ನಿಧಿಯಿಂದ ₹9.14 ಕೋಟಿ
  • ಗುತ್ತಿಗೆಗಳಿಂದ ₹2.53 ಕೋಟಿ
  • ಕಟ್ಟಡ/ಅಂಗಡಿಗಳ ಬಾಡಿಗೆಯಿಂದ ₹94.46 ಲಕ್ಷ
  • ಕೃಷಿ ತೋಟ ಮತ್ತು ಧಾನ್ಯದಿಂದ ₹10.50 ಲಕ್ಷ
  • ಇತರೆ ಮೂಲಗಳಿಂದ ₹3.20 ಕೋಟಿ ಸೇರಿದಂತೆ 

ಒಟ್ಟು ₹167.89 ಕೋಟಿ ಆದಾಯ ಬಂದಿದೆ.

ಈ ಸಾಧನೆ ದೇವಾಲಯದ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದ್ದು, ಭಕ್ತರ ವಿಶ್ವಾಸ ಮತ್ತು ದೇವಾಲಯದ ವ್ಯವಸ್ಥಾಪನಾ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ.

47
ನಿರಂತರ ಏರಿಕೆ: ಆದಾಯದ ಬೆಳವಣಿಗೆ ಪಥ
Image Credit : our own

ನಿರಂತರ ಏರಿಕೆ: ಆದಾಯದ ಬೆಳವಣಿಗೆ ಪಥ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು ಕಳೆದ ಎರಡು ದಶಕಗಳಿಂದ ನಿರಂತರ ಆದಾಯ ವೃದ್ಧಿಯನ್ನು ಸಾಧಿಸುತ್ತಿದೆ. 2006-07ರಲ್ಲಿ ಕೇವಲ ₹19.76 ಕೋಟಿ ಆದಾಯ ಹೊಂದಿದ್ದ ದೇವಾಲಯ, 2007-08ರಲ್ಲಿ ₹24.44 ಕೋಟಿಗೆ ಏರಿಕೆ ಕಂಡು ರಾಜ್ಯದ ಪ್ರಮುಖ ದೇವಾಲಯಗಳ ಪಟ್ಟಿಗೆ ಸೇರಿತು.

57
 ವರ್ಷದಿಂದ ವರ್ಷಕ್ಕೆ ಆದಾಯ ಏರಿಕೆ
Image Credit : our own

ವರ್ಷದಿಂದ ವರ್ಷಕ್ಕೆ ಆದಾಯ ಏರಿಕೆ

  • 2008-09: ₹31 ಕೋಟಿ
  • 2009-10: ₹38.51 ಕೋಟಿ
  • 2011-12: ₹56.24 ಕೋಟಿ
  • 2012-13: ₹66.76 ಕೋಟಿ
  • 2014-15: ₹77.60 ಕೋಟಿ
  • 2015-16: ₹88.83 ಕೋಟಿ
  • 2017-18: ₹95.92 ಕೋಟಿ
  • 2019-20: ₹98.92 ಕೋಟಿ
  • ಕೋವಿಡ್ ಅವಧಿಯಲ್ಲಿ 2020-21: ₹68.94 ಕೋಟಿ
  • 2022-23: ₹123.64 ಕೋಟಿ
  • 2023-24: ₹146 ಕೋಟಿ
  • 2024-25: ₹155 ಕೋಟಿ

ಹೀಗೆ ನಿರಂತರ ಏರಿಕೆಯನ್ನು ಸಾಧಿಸುತ್ತಾ ಬಂದ ದೇವಾಲಯವು ಇದೀಗ 2025-26ರಲ್ಲಿ ₹167 ಕೋಟಿಗೂ ಅಧಿಕ ಆದಾಯ ದಾಖಲಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

67
ಸತತ 15ನೇ ವರ್ಷ ನಂ.1 ಸ್ಥಾನ
Image Credit : our own

ಸತತ 15ನೇ ವರ್ಷ ನಂ.1 ಸ್ಥಾನ

ಕಳೆದ 14 ವರ್ಷಗಳಿಂದ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ಮುಜರಾಯಿ ದೇವಾಲಯವಾಗಿ ಹೊರಹೊಮ್ಮಿದ್ದ ಈ ಪವಿತ್ರ ಕ್ಷೇತ್ರವು, ಈ ವರ್ಷವೂ ತನ್ನ ಆ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಸತತ 15ನೇ ವರ್ಷವೂ ನಂ.1 ಸ್ಥಾನವನ್ನು ಉಳಿಸಿಕೊಂಡಿರುವುದು ದೇವಾಲಯದ ನಿರ್ವಹಣಾ ವ್ಯವಸ್ಥೆ, ಭಕ್ತರ ಹೆಚ್ಚುತ್ತಿರುವ ಸಂಖ್ಯೆ ಹಾಗೂ ಧಾರ್ಮಿಕ ನಂಬಿಕೆಗಳ ಬಲವನ್ನು ಸೂಚಿಸುತ್ತದೆ.

77
ಮುಂದಿನ ವರ್ಷದಲ್ಲಿ ಆದಾಯದಲ್ಲಿ ಹೆಚ್ಚಳ ಸಾಧಿಸುವ ನಿರೀಕ್ಷೆ
Image Credit : our own

ಮುಂದಿನ ವರ್ಷದಲ್ಲಿ ಆದಾಯದಲ್ಲಿ ಹೆಚ್ಚಳ ಸಾಧಿಸುವ ನಿರೀಕ್ಷೆ

ಒಟ್ಟಿನಲ್ಲಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ತನ್ನ ಆರ್ಥಿಕ ಸ್ಥಿರತೆ, ಭಕ್ತರ ಅಪಾರ ಬೆಂಬಲ ಮತ್ತು ಸುಧಾರಿತ ಆಡಳಿತ ಕ್ರಮಗಳ ಮೂಲಕ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮತ್ತೊಮ್ಮೆ ತನ್ನ ಮಹತ್ವವನ್ನು ಸಾಬೀತುಪಡಿಸಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಆದಾಯದಲ್ಲಿ ಹೆಚ್ಚಳ ಸಾಧಿಸುವ ನಿರೀಕ್ಷೆ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕುಕ್ಕೆ ಸುಬ್ರಹ್ಮಣ್ಯ
ದೇವಸ್ಥಾನ
ಕರ್ನಾಟಕ ಸುದ್ದಿ
ದಕ್ಷಿಣ ಕನ್ನಡ

Latest Videos
Recommended Stories
Recommended image1
ಆಂಜನೇಯನಿಗೆ 'ನಾಮ' ಹಾಕಿದ ಉದ್ಯಮಿ: ಅಂಜನಾದ್ರಿಗೆ ಕೊಟ್ಟಿದ್ದು ₹2.50Cr ಚಿನ್ನವಲ್ಲ, ತಾಮ್ರ ಲೇಪಿತ 28 ಗ್ರಾಂ ಬಂಗಾರ!
Recommended image2
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ. 1.50 ರಷ್ಟು ಹೆಚ್ಚಳ - ಸರ್ಕಾರದ ಆದೇಶ ಪ್ರಕಟ
Recommended image3
ಚಿರತೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಿ ಅರಣ್ಯ ಇಲಾಖೆ
Related Stories
Recommended image1
ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ
Recommended image2
Karnataka Budget: ಕುಕ್ಕೆ, ಕೊಲ್ಲೂರು ಕ್ಷೇತ್ರಗಳ ಅಭಿವೃದ್ಧಿಗೆ 'ಪ್ರಾಧಿಕಾರ' ರಚನೆ; ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ₹5,000 ಸಹಾಯಧನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved