KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭ; ಇಲ್ಲಿದೆ ದರ, ಸಮಯದ ವಿವರ!
First Published Jan 5, 2021, 7:58 PM IST
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿದೆ. ಜನವರಿ 7 ರಿಂದ ನೂತನ ಪ್ಯಾಕೇಜ್ ಟೂರ್ ಆರಂಭಗೊಳ್ಳುತ್ತಿದೆ. ಬಸ್ ವಿವರ, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ(KSRTC) ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿದೆ. KSRTCಯ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಲ್ಲಿ ತಿರುಪತಿ ಟೂರ್ ಪ್ಯಾಕೇಜ್ ನೀಡಲಾಗಿದೆ.

ಬೆಂಗಳೂರಿನ ಶಾಂತಿನಗರದಿಂದ ಹೊರಡುವ ತಿರುಪತಿ ಬಸ್ಸು 8 ನಿಲ್ದಾಣಗಳಿಂದ ಪ್ರಯಾಣಿಕರನ್ನು ಪಿಕ್ ಮಾಡಲಿದೆ. ಪ್ರತಿ ದಿನ ರಾತ್ರಿ ಪ್ರತಿ ರಾತ್ರಿ 8:45 ಕ್ಕೆ ತಿರುಪತಿಗೆ ಬಸ್ಸು ಹೊರಡಲಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?