ಚಿತ್ರದುರ್ಗ: ಮಳೆ ಅವಾಂತರಕ್ಕೆ ತತ್ತರಿಸಿದ ಮಲ್ಲಾಪುರ ಗ್ರಾಮದ ಜನರು!
ಮಳೆಯಿಲ್ಲದೇ ಬರದ ಬೆಂಗಾಡಾಗಿದ್ದ ಕೋಟೆನಾಡಲ್ಲಿ ಧಾರಾಕಾರವಾಗಿ ಸುರಿದ ಮಳೆ ಭಾರೀ ಮಳೆಗೆ ಅವಾಂತರ ಸೃಷ್ಟಿಸಿದೆ. ತೀವ್ರ ಗಾಳಿ ಮಳೆಯಿಂದಾಗಿ ಹತ್ತು ಮನೆಗಳಿಗೆ ಹಾನಿಯಾಗಿದ್ದು, ಐವರು ಗ್ರಾಮಸ್ಥರು ಗಾಯಗೊಂಡು ಆಸ್ಪತ್ರೆಸೇರಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಸಿಲ ಬೇಗೆಯಿಂದ ಬಸವಳಿದಿದ್ದ ಚಿತ್ರದುರ್ಗದಕೆಲವೆಡೆ ವರುಣ ತಡರಾತ್ರಿ ಆರ್ಭಟಿಸಿದ್ದಾನೆ. ಹೀಗಾಗಿ ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ತೀವ್ರ ಗಾಳಿ ಮಳೆಗೆ ಸಿಲುಕಿದ ಖಾಸಗಿ ಶಾಲೆಯ ಕಬ್ಬಿಣದ ಶೀಟಿನ ಮೇಲ್ಚಾವಣೆ ತೇಲಿಬಂದು ಮನೆಗಳಮೇಲೆ ಅಪ್ಪಳಿಸಿದೆ. ಮನೆಯೊಳಗೆ ನೀರು ನುಗ್ಗಿ ದವಸ ಧಾನ್ಯ ನೀರುಪಾಲಾಗಿದೆ. ಆದ್ರೆ ಅಧೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಹೀಗಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ನೊಂದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬರದನಾಡು ಚಿತ್ರದುರ್ಗದಲ್ಲಿ ಸುರಿದ ಮಳೆರಾಯ ಬಾರಿ ಅವಾಂತರ ಸೃಷ್ಟಿಸಿದ್ದಾನೆ. ಮಳೆ ಬೆಳೆಯಿಲ್ಲದೇ ಕಂಗಲಾಗಿದ್ದ ಕೋಟೆನಾಡಿಗೆ ವರುಣನ ಆಗಮನ ಒಂದೆಡೆ ಸಂತಸವಾದರೂ ಸಹ ಮತ್ತೊಂದೆಡೆ ಬಡವರ ಬದುಕು ಬೀದಿಗೆ ಬಂದಿದೆ. ಹೀಗಾಗಿ ಸರ್ಕಾರ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕುಟುಂಬಗಳಿಗೆ ತುರ್ತಾಗಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕಿದೆ.
ಮನೆಯ ಮೇಲ್ಚಾವಣೆ ನೆಲಕ್ಕೆ ಕುಸಿದಿವೆ. ಗುಡುಗು ಸಿಡಿಲಿನ ಅಬ್ಬರಕ್ಕೆ ಗೋಡೆಗಳು ಬಿರುಕು ಬಿಟ್ಟಿವೆ.ಅಲ್ದೆ ಈ ವೇಳೆ ಮನೆಯಲ್ಲಿ ಮಲಗಿದ್ದ ಕೃಷ್ಣಮ್ಮ ಎಂಬ ವೃದ್ಧೆಯ ಮೇಲೆ ಶೀಟುಕುಸಿದುಬಿದ್ದು,ತಲೆ ಹಾಗು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಇನ್ನು ಈ ವಿಷಯ ತಿಳಿದ ಚಿತ್ರದುರ್ಗ ತಹಸೀಲ್ದಾರ್ ನಾಗವೇಣಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕೃತಿ ವಿಕೋಪದಿಂದ ಆದ ನಷ್ಟಕ್ಕೆ ಅಗತ್ಯ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳಿಯ ಶಾಸಕ ವೀರೇಂದ್ರ ಪಪ್ಪಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ್ರು ಆಗಮಿಸಲಿಲ್ಲ. ಅವರ ಬದಲಾಗಿ ನಡೆದಾಡುವ ಸೂಪರ್ ಶಾಸಕ ಎನಿಸಿರುವ ಶಾಸಕ ವೀರೇಂದ್ರ ಸಹೋದರ ನಾಗರಾಜ್ ಗ್ರಾಮಕ್ಕೆ ಭೇಟಿ ನೀಡಿ,ತಲಾ ಐದು ಸಾವಿರ ಪರಿಹಾರ ನೀಡಿದ್ರು. ಮುಂದಿನ ದಿನಗಳಲ್ಲಿ ಹಾನಿ ಆಗಿರುವ ಮನೆಗಳನ್ನು ಸರಿಪಡಿಸಿ ಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್