ರಸ್ತೆ ಗುಡಿಸಿ, ಸರಳತೆ ಮೆರೆದ ಸಚಿವ ಸುರೇಶ್ ಕುಮಾರ್ ದಂಪತಿ
ಸರಳ-ಸಜ್ಜನ ಎಂದೇ ಹೆಸರಾದವರು ಸಚಿವ ಸುರೇಶ್ ಕುಮಾರ್. ಹಲವು ಕಾರ್ಯಗಳ ಮೂಲಕ ಅವರು ತಾವೆಷ್ಟು ಸರಳ ಜೀವಿ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ತಮ್ಮ ಮನೆಯ ಮುಂದಿನ ರಸ್ತೆಯನ್ನು ಪತ್ನಿ ಸಾವಿತ್ರಿಯೊಂದಿಗೆ ಗುಡಿಸಿ, ಸ್ವಚ್ಛತೆಯೊಂದಿಗೆ ವ್ಯಾಯಾಮವೂ ಆಯಿತು ಎಂದು ಹೇಳಿದ್ದಾರೆ. ಅಲ್ಲದೇ ರಸ್ತೆಯ ಪೌರ ಕಾರ್ಮಿಕೆ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದಿದ್ದು, ಅಷ್ಟರ ಮಟ್ಟಿಗೆ ಆಕೆಗೆ ನೆರವಾಗಿದ್ದೇನೆ ಎಂಬ ತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ.
ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ನಿ ಸಾವಿತ್ರಿ ಅವರೊಂದಿಗೆ ಮನೆಯ ಮುಂದಿನ ರಸ್ತೆ ಗುಡಿಸಿದ್ದಾರೆ.
ಪೌರ ಕಾರ್ಮಿಕೆ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಇಷ್ಟು ಅವರಿಗೆ ಸಹಾಯವಾಗಬಹುದೆಂದು ಟ್ವೀಟ್ ಮಾಡಿದ್ದಾರೆ.
ರಸ್ತೆ ಕ್ಲೀನ್ ಆಗುವುದರೊಂದಿಗೆ, ಒಳ್ಳೆಯ ವ್ಯಾಯಾಮವೂ ಆಯಿತು ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕೆಲಸವನ್ನು ತಾವೇ ಮಾಡಿಕೊಂಡ ತೃಪ್ತಿಯೂ ದೊರೆಯಿತು ಎಂಬುವುದು ಸಚಿವರ ಅಭಿಪ್ರಾಯ.
ಇತ್ತೀಚೆಗೆ ಶಾಲಾ ಮಕ್ಕಳಿಗೆ ಸಚಿವರು ತಾವೇ ಊಟ ಬಡಿಸಿದ್ದರು.
ತಮ್ಮ ಸರಳತೆಯಿಂದಲೇ ರಾಜ್ಯದಲ್ಲಿ ಹೆಸರು ಮಾಡಿರುವ ಸಚಿವರು ಇವರು.
ಕುರನಾಡಲ್ಲಿ ಕೊರೋನಾ ವೈರಸ್ ಮಾಹಿತಿ ನೀಡುವ ಹೊಣೆಯೂ ಇದೀಗ ಇವರ ಮೇಲಿದೆ.