ರಾಯಚೂರು: ಒಂದು ಕೋಣೆಗೆ 12 ಪ್ರಶ್ನೆ ಪತ್ರಿಕೆ, 24 ಅಭ್ಯರ್ಥಿಗಳು! ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮತ್ತೆ ಯಡವಟ್ಟು!
ಪಿಡಿಒ ಸಾಮಾನ್ಯ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ಕೆಪಿಎಸ್ ಸಿ ಯಡವಟ್ಟಿನಿಂದಾಗಿ ಒಂದೇ ಕೋಣೆಯಲ್ಲಿ ಒಟ್ಟಿಗೆ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದ್ದು, ಅಭ್ಯರ್ಥಿಗಳು ಪಿಡಿಒ ಪರೀಕ್ಷೆ ಬಿಟ್ಟು ಪ್ರತಿಭಟನೆ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು. ಸಾಮಾನ್ಯ ಪ್ರಶ್ನೆ ಪ್ರತಿಕೆ ಪರೀಕ್ಷೆಯಲ್ಲಿ ಕೆಪಿಎಸ್ ಸಿ ಒಂದು ಕೋಣೆಗೆ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. 24 ಪ್ರಶ್ನೆ ಪತ್ರಿಕೆ ಬದಲು ಕೇವಲ 12 ಪ್ರಶ್ನೆ ಪ್ರತಿಕೆ ಕಳುಹಿಸಿದ ಕೆಪಿಎಸ್ ಸಿ. ಕೆಪಿಎಸ್ ಸಿ ಈ ಯಡವಟ್ಟುನಿಂದಾಗಿ 12 ಪ್ರಶ್ನೆ ಪತ್ರಿಕೆಗಳಿದ್ರೂ ಒಂದೇ ಕೋಣೆಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಹೆದ್ದಾರಿ ತಡೆದು ಪ್ರತಿಭಟನೆ:
ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 840ಕ್ಕೂ ಅಧಿಕ ಅಭ್ಯರ್ಥಿಗಳು ಪ್ರತಿಭಟನೆ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮುಂದಿನ ಕುಷ್ಟಗಿ - ಸಿಂಧನೂರು ರಸ್ತೆ ಬಂದ್ ಮಾಡಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿಂಧನೂರು ತಹಸೀಲ್ದಾರ್ ಅರುಣ್ ಕುಮಾರ್ ಭೇಟಿ ನೀಡಿದರು. ಈ ವೇಳೆ ಸಿಂಧನೂರು ಪೊಲೀಸರು ಹಾಗೂ ತಹಸೀಲ್ದಾರರು ಅಭ್ಯರ್ಥಿಗಳ ಮನವೊಲಿಸಲು ಯತ್ನಿಸಿದರು.
ತಹಸೀಲ್ದಾರ್ ಮನವೊಲಿಸಿದ್ರೂ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹಿಂದೇಟು ಹಾಕಿದರು. ಅಲ್ಲದೆ ಪ್ರಶ್ನೆ ಪತ್ರಿಕೆ ಇಲ್ಲದೆ ಪರೀಕ್ಷೆ ಹೇಗೆ ಬರೆಯುವುದು ಎಂದು ಅಭ್ಯರ್ಥಿಗಳು ವಾಗ್ವಾದ ನಡೆಸಿದರು.
ಸಿಂಧನೂರು ಪದವಿ ಕಾಲೇಜಿನ ಕೇಂದ್ರದಲ್ಲಿ ವ್ಯವಸ್ಠೆ ಮಾಡಲಾಗಿತ್ತು. 34 ಕೊಠಡಿಯಲ್ಲಿ 840 ಅಭ್ಯರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದರು. ಕೊಠಡಿಗಳ ಸಂಖ್ಯೆ ಕಡಿಮೆ, ಪ್ರಶ್ನೆ ಪತ್ರಿಕೆಯೂ ಕಡಿಮೆಯಾಗಿದ್ದರಿಂದ ಅಕ್ಕಪಕ್ಕದ ಅಭ್ಯರ್ಥಿಗಳಿಗೆ ಒಂದೇ ಸಿರೀಜ್‌ನ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿದ್ದ ಸಿಬ್ಬಂದಿ. ಮತ್ತೊಂದು ಕಡೆ 24 ಅಭ್ಯರ್ಥಿಗಳ ಪೈಕಿ ಕೇವಲ 12 ಜನ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ಕಡಿಮೆ ಪ್ರಶ್ನೆ ಪತ್ರಿಕೆ ಸರಬರಾಜು ಮಾಡಿದ ಕೆಪಿಎಸ್ಸಿ ವಿರುದ್ಡ ಅಭ್ಯರ್ಥಿಗಳು ಆಕ್ರೋಶಗೊಂಡರು. ಪರೀಕ್ಷೆ ಬರೆಯದೇ ಕುಷ್ಟಗಿ- ಸಿಂಧನೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಆದರೆ ಅಭ್ಯರ್ಥಿಗಳ ಆಕ್ರೋಶದ ನಡುವೆಯೂ ಆಡಳಿತ ಮಂಡಳಿ ಪರೀಕ್ಷೆ ನಡೆಸಿದ 34 ಕೊಠಡಿಗಳ ಪೈಕಿ 8 ಕೊಠಡಿಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.